ಬೆಂಗಳೂರು –
ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕದ ಗೌರವ – ಅತ್ಯುತ್ತಮ ಸೇವೆಗೆ ಒಲಿದು ಬಂತು ಪ್ರಶಸ್ತಿಯ ಗೌರವ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಪೊಲೀಸರಿಗೆ ನೀಡುವ ರಾಷ್ಟ್ರಪತಿ ವಿಶಿಷ್ಠ ಸೇವಾ ಪದಕವು ರಾಜ್ಯದ 19 ಪೊಲೀಸ್ ಅಧಿಕಾರಿಗಳು ಭಾಜನ ರಾಗಿದ್ದಾರೆ.ಹೌದು ಶ್ಲಾಘನೀಯ ಸೇವಾ ಪದಕಕ್ಕೆ ಕೊಡಮಾಡುವ ಈ ಒಂದು ಪ್ರಶಸ್ತಿಗೆ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಈ ಕೆಳಗಿನಂತೆ ಇದ್ದಾರೆ.
ಎಂ.ಚಂದ್ರಶೇಖರ್- ಎಡಿಜಿಪಿ, ಐಎಸ್‌ಡಿ
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
ಶ್ರೀನಾಥ್ ಜೋಶಿ – ಪೊಲೀಸ್ ಅಧೀಕ್ಷಕರು, ಲೋಕಾಯುಕ್ತ
ಸಿ.ಕೆ.ಬಾಬ- ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ರಾಮಗೊಂಡ ಬಿ.ಬಸರಗಿ- ಅಪರ ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ
ಎಂ.ಡಿ.ಶರತ್- ಪೊಲೀಸ್ ಅಧೀಕ್ಷಕರು, ಸಿಐಡಿ, ಬೆಂಗಳೂರು
ಗೋಪಾಲ್ ರೆಡ್ಡಿ- ಡಿಸಿಪಿ, ಸಿಎಆರ್ ಪಶ್ಚಿಮ, ಬೆಂಗಳೂರು
ಗಿರಿ ಕೃಷ್ಣಮೂರ್ತಿ- ಡಿವೈಎಸ್‌ಪಿ, ಚನ್ನಪಟ್ಟಣ ಉಪವಿಭಾಗ, ರಾಮನಗರ ಜಿಲ್ಲೆ,
ಪಿ. ಮುರಳೀಧರ್- ಡಿವೈಎಸ್‌ಪಿ, ಚಿಂತಾಮಣಿ ಉಪವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ
ಬಸವೇಶ್ವರ- ಡಿವೈಎಸ್‌ಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
ಬಸವರಾಜು ಕೆ.- ಡಿವೈಎಸ್‌ಪಿ, ಐಎಸ್‌ಡಿ, ಕಲಬುರಗಿ
ಎನ್.ಮಹೇಶ್- ಸಹಾಯಕ ನಿರ್ದೇಶಕರು, ರಾಜ್ಯಗುಪ್ತವಾರ್ತೆ, ಬೆಂಗಳೂರು
ರವೀಶ್ ಎಸ್.ನಾಯಕ್- ಎಸಿಪಿ, ಸಿಸಿಆರ್‌ಬಿ, ಮಂಗಳೂರು ನಗರ
ಮಂಗಳೂರು ನಗರ
ಪ್ರಭಾಕರ್ ಜಿ.- ಎಸಿಪಿ, ಸಂಚಾರ ಯೋಜನೆ, ಬೆಂಗಳೂರು
ಹರೀಶ್ ಹೆಚ್.ಆರ್- ಸಹಾಯಕ ಕಮಾಂಡೆಂಟ್, 11ನೆ ಪಡೆ, ಕೆಎಸ್‌ಆರ್‌ಪಿ, ಹಾಸನ
ಎಸ್.ಮಂಜುನಾಥ್- ಆರ್‌ಪಿಐ, 3ನೆ ಪಡೆ, ಕೆಎಸ್‌ಆರ್‌ಪಿ, ಬೆಂ.
ಮಂಜುನಾಥ ಎಸ್. ಕಲ್ಲೆದೇವರ್- ಪೊಲೀಸ್ ಸಬ್ ಇನ್‌್ಸಪೆಕ್ಟರ್, ಎಫ್‌ಪಿಬಿ, ದಾವಣಗೆರೆ
ಗೌರಮ- ಎಎಸ್‌ಐ, ಸಿಐಡಿ ಬೆಂ.
ವಿಜಯ್‌ಕುಮಾರ್- ಸಿಎಚ್‌ಸಿ, ಡಿಸಿಆರ್‌ಬಿ, ಉಡುಪಿ ಜಿಲ್ಲೆ
ಮಹಬೂಬ್ ಸಾಹೇಬ ಎನ್.ಮುಜಾವರ್- ಸಿಎಚ್‌ಸಿ, ಮನಗುಳಿ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆ.
ಹೀಗೆ ರಾಜ್ಯದ ವಿವಿಧೆಡೆ ಕರ್ತವ್ಯವನ್ನು ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದ್ದು ನವ ದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..