ಬೆಂಗಳೂರು –
ರಾಜ್ಯದ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರಿಂದ ರಾಜ್ಯ ನೌಕರರ ಸಂಘದ ಮುಖಂಡರಿಗೊಂದು ಮನವಿ – ರಾಜ್ಯದ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರು ಸಂಘದ ಮುಖಂಡರಿಗೆ ಮಾಡಿಕೊಂಡ ಮನವಿ ಏನು ನೋಡಿ…..
ಹೌದು ರಾಜ್ಯದ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರು ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಮುಖಂಡರಿಗೆ ಮನವಿ ಮಾಡಿಕೊಂಡಿದ್ದಾರೆ. ಹೌದು ತಮಗೆ ಆಗುತ್ತಿರುವ ಅನ್ಯಾಯ ಕುರಿತಂತೆ ಮತ್ತು ಬೇಡಿಕೆಗಳ ಕುರಿತಂತೆ ಧ್ವನಿ ಎತ್ತಿದ್ದಾರೆ 2016 ಕ್ಕಿಂತ ಮುಂಚೆ ನೇಮಕಾತಿಯಾದ ಶಿಕ್ಷಕರಿ ಗಾದ ಅನ್ಯಾಯವನ್ನು ಉಗ್ರವಾಗಿ ಖಂಡಿಸಿ,
ರಾಜ್ಯಮಟ್ಟದ ಹೋರಾಟ ಮಾಡುವುದರ ಮೂಲಕ ನಮ್ಮ ಮಾತ್ರ ಸಂಘ KSPSTA 100 % ನ್ಯಾಯವನ್ನು ಕೊಡಿಸಲು ಕಾರ್ಯೋನ್ಮುಖ ವಾಗಿದೆ.. ಇದಕ್ಕೆ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರಾದಿಯಾಗಿ ಎಲ್ಲರೂ ನ್ಯಾಯ ಕೊಡಿಸುವ ಸಂಪೂರ್ಣ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ನೌಕರ ಸಂಘವು ಕಾರ್ಯಾಗಾ ರದ ಮೂಲಕ
2016 ಕ್ಕಿಂತ ಮುಂಚೆ ನೇಮಕಾತಿ ಯಾದ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸಲು ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮಂಡಿಸುವು ದಾಗಿ ಹೇಳಿದೆ.ನೌಕರ ಸಂಘದ ಅಧ್ಯಕ್ಷರಾದಿ ಯಾಗಿ ಎಲ್ಲ ಪದಾಧಿಕಾರಿಗಳಲ್ಲಿ ನಮ್ಮ ಮನವಿ, ದಯವಿಟ್ಟು ನಮ್ಮ ನೇಮಕಾತಿ ಸಂದರ್ಭದಲ್ಲಿನ ನಿಯಮಗಳನ್ವಯ ನಮಗೆ ಲಭಿಸಬೇಕಾದ ಎಲ್ಲ ಸೌಲಭ್ಯಗಳನ್ನು ನಮಗೆ ಒದಗಿಸಲು ಸರ್ಕಾರವ ನ್ನು ಆಗ್ರಹಿಸುವುದರ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಕೊಡಿಸಲು ಮುಂದಾಗ ಬೇಕೆಂದು
ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಯಾವುದೇ ಚೌಕಾಶಿ ಹಾಗೂ ರಾಜಿಗೆ ಒಪ್ಪದೇ ಸಂಪೂರ್ಣ ನ್ಯಾಯ ವನ್ನು ಒದಗಿಸಲು ಆಗ್ರಹಿಸುತ್ತೀರೆಂಬ ನಿರೀಕ್ಷೆ ಯಲ್ಲಿ ರಾಜ್ಯದ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..