ಬೆಂಗಳೂರು –
ಕಾರಾಗೃಹದಲ್ಲಿ ದರ್ಶನ ಹೇಗೆ ಇದ್ದಾನೆ ಗೊತ್ತಾ ಪೊಟೊ ಲೀಕ್ – ಜೈಲಿನಲ್ಲಿನ ದರ್ಶನ ಮತ್ತು ಗ್ಯಾಂಗ್ ಪೊಟೊ ವೈರಲ್…..
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ ಈಗಾಗಲೇ ಜೈಲು ಸೇರಿದ್ದಾನೆ.ಜೈಲು ಸೇರಿದ ಬಳಿಕ ಕಾರಾಗೃಹದಲ್ಲಿ ದರ್ಶನ ಹೇಗೆ ಇದ್ದಾನೆ ಎಂಬ ಪ್ರಶ್ನೆಯ ನಡುವೆ ಸಧ್ಯ ದರ್ಶನ ಮತ್ತು ಗ್ಯಾಂಗ್ ಜೈಲಿ ನಲ್ಲಿರುವ ಕೆಲ ಪೊಟೊ ಗಳು ವೈರಲ್ ಆಗಿವೆ.ಹೌದು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ನಟನ ಫೋಟೋ ಒಂದು ಲೀಕ್ ಆಗಿದ್ದು ಇದು ನಟ ದರ್ಶನ್ ಜೈಲಿನಲ್ಲಿರುವ ಪೊಟೊ ಎಂದು ಹೇಳಲಾಗಿದೆ.
ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಜೊತೆ ಮ್ಯಾನೇಜರ್ ನಾಗರಾಜ್ ಅವರೂ ಇದ್ದಾರೆ. ಫೋಟೋದಲ್ಲಿ ಮೂವರೂ ಕೈಯಲ್ಲಿ ಟೀ ಕಪ್, ಸಿಗರೇಟ್ ಹಿಡಿದುಕೊಂಡು ಹರಟೆ ಹೊಡೆಯುತ್ತಿ ರುವುದು ದೃಶ್ಯ ಕಂಡುಬರುತ್ತಿದೆ. ಪ್ಲಾಸ್ಟಿಕ್ ಚೇರ್ ಮೇಲೆ ಕುಳಿತುಕೊಂಡಿದ್ದರು. ಕೈದಿಯೊಬ್ಬ ಫೋಟೋ ಕ್ಲಿಕ್ ಮಾಡಿದ್ದಾನೆ ಎನ್ನಲಾಗಿದೆ. ವೇಲು ಎಂಬ ಕೈದಿ ಜೈಲಿನ ಒಳಗಿರುವ ಫೋಟೋ ಕ್ಲಿಕ್ ಮಾಡಿದ್ದಾರೆ ಎನ್ನಲಾಗಿದೆ
ಜೈಲಿನ ಒಳಗೆ ದರ್ಶನ್ ಪಕ್ಕವೇ ವಿಲ್ಸನ್ ನಾಗ ಕುಳಿತಿರುವುದು ಕಂಡು ಬರುತ್ತಿದೆ. ಜೈಲಿನ ಆವರಣದ ಲ್ಲಿಯೇ ಕೂರಲು ಚೇರ್ ವ್ಯವಸ್ಥೆ, ಟೀಪಾಯಿ ಇಡ ಲಾಗಿತ್ತು. ಲೀಕ್ ಆಗಿರುವ ಫೋಟೋದಲ್ಲಿ ದರ್ಶನ್ ವಿಗ್ ಧರಿಸದೆ ಕಂಡು ಬಂದಿದ್ದಾರೆ.ಫೊಟೋದಲ್ಲಿ ನಟ ದರ್ಶನ್ ಅವರು ಸ್ಮೈಲ್ ಕೊಡುತ್ತಿರುವುದನ್ನು ಕಾಣ ಬಹದು. ಫೋಟೋ ನೋಡಿ ದರ್ಶನ್ ಜೈಲಿನಲ್ಲಿ ಅನುಕೂಲಕರ ವ್ಯವಸ್ಥೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ದರ್ಶನ್ ಜೈಲಿನಲ್ಲಿರುವ ಫೋಟೋ ಎಂದು ಹೇಳಲಾಗಿದೆ.
ನಟ ದರ್ಶನ್ ಅವರು ಒಂದು ಕೈಯಲ್ಲಿ ಟೀ ಕಪ್ ಹಿಡಿದು ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದಿದ್ದರು. ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಆರೋಪಿ 2 ಆಗಿದ್ದಾರೆ.ಫೋಟೋ ನೋಡುತ್ತಿದ್ದರೆ ಸಾಕಷ್ಟು ಅನುಮಾನ ಮೂಡಿಸುವಂತಿದೆ ಎನ್ನಲಾಗಿದೆ. ನಿಜವಾಗಿಯೂ ನಟ ದರ್ಶನ್ಗೆ ಜೈಲಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯಾ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಫಾರ್ಮ್ ಹೌಸ್ ನಲ್ಲಿ ಇದ್ದ ಹಾಗೆಯೇ ದರ್ಶನ್ ಅವರು ಜೈಲಿನಲ್ಲಿಯೂ ಆರಾಮಾಗಿ ಇದ್ದಾರಾ ಎನ್ನುವ ಅನು ಮಾನ ಮೂಡುವಂತೆ ಮಾಡಿದೆ.ಜೈಲಿನಲ್ಲಿರೋ ಕೈದಿಯೊಬ್ಬ ತನ್ನ ಪತ್ನಿಗೆ ಫೋಟೋ ಕಳಿಸಿರೋ ಮಾಹಿತಿ ಲಭ್ಯವಾಗಿದ್ದು, ವೇಲು ಎಂಬ ಕೈದಿಯಿಂದ ಫೋಟೋ ಶೇರ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಟೋರಿಯಸ್ ರೌಡಿ ಜೊತೆ ದರ್ಶನ್ ಹಾಯಾಗಿ ಸಿಗರೇಟ್ ಹೊಡೀತಿರೋ ಫೋಟೋ ಸದ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು
ಈ ಒಂದು ವಿಚಾರ ಕುರಿತಂತೆ ಕಾರಾಗೃಹದ ಅಧಿಕಾರಿಗಳು ಕೂಡಾ ಪೊಟೊ ಹೇಗೆ ವೈರಲ್ ಆಗಿದೆ ನಿಜವಾಗಿಯೂ ಈ ಒಂದು ಪೊಟೊ ನಿಜನಾ ಎಂಬ ಕುರಿತಂತೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..