This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ಧಾರವಾಡದಲ್ಲಿ ಯಶಸ್ವಿಯಾಗಿ ನಡೆಯಿತು ರಾಜ್ಯಮಟ್ಟದ ಮುಕ್ತ ಕ್ರಾಸ್‌ ಕಂಟ್ರಿ – ಜಿಲ್ಲಾ ಓಲಿಂಪಿಕ್ ಅಸೋಸಿಯೇಷನ್ ನಿಂದ ಆಯೋಜನೆ…..ನೆರವಿನ ಭರವಸೆ ನೀಡಿದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ಶಂಕರ ಮುಗದ,ಮಹೇಶ್ ಶೆಟ್ಟಿ,…..

ಧಾರವಾಡದಲ್ಲಿ ಯಶಸ್ವಿಯಾಗಿ ನಡೆಯಿತು ರಾಜ್ಯಮಟ್ಟದ ಮುಕ್ತ ಕ್ರಾಸ್‌ ಕಂಟ್ರಿ – ಜಿಲ್ಲಾ ಓಲಿಂಪಿಕ್ ಅಸೋಸಿಯೇಷನ್ ನಿಂದ ಆಯೋಜನೆ…..ನೆರವಿನ ಭರವಸೆ ನೀಡಿದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ಶಂಕರ ಮುಗದ,ಮಹೇಶ್ ಶೆಟ್ಟಿ,…..
WhatsApp Group Join Now
Telegram Group Join Now

ಧಾರವಾಡ

ಧಾರವಾಡದಲ್ಲಿ ಯಶಸ್ವಿಯಾಗಿ ನಡೆಯಿತು ರಾಜ್ಯಮಟ್ಟದ ಮುಕ್ತ ಕ್ರಾಸ್‌ ಕಂಟ್ರಿ – ಜಿಲ್ಲಾ ಓಲಿಂಪಿಕ್ ಅಸೋಸಿಯೇಷನ್ ನಿಂದ ಆಯೋಜನೆ…..ನೆರವಿನ ಭರವಸೆ ನೀಡಿದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ಶಂಕರ ಮುಗದ,ಮಹೇಶ್ ಶೆಟ್ಟಿ,

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ಹಮ್ಮಿಕೊಂಡಿದ್ದ ಕ್ರಾಸ್ ಕಂಟ್ರಿ ಯಶಶ್ವಿಯಾಗಿ ನಡೆಯಿತು.ನಗರದಲ್ಲಿ ಜಿಲ್ಲಾ ಓಲಿಂಪಿಕ್ ಅಸೋಸಿಯೇಷನ್ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಒಂದು ಸ್ಪರ್ಧೆಯಲ್ಲಿ 400 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಪಾಲ್ಗೊಂಡು ಕ್ರಾಸ್ ಕಂಟ್ರಿಯನ್ನು ಯಶಶ್ವಿಗೊಳಿಸಿದರು.

ಅಂತಿಮವಾಗಿ ರಾಜ್ಯ ಮಟ್ಟದ ಮುಕ್ತ ಕ್ರಾಸ್‌ಕಂಟ್ರಿ ಓಟದ 10 ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಬೆಳಗಾವಿಯ ಶಿವಾನಂದ ನಾಯಕ, ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ರಾಶಿ ಸಿ.ಎಂ. ವೇಗದ ಓಟಗಾರ ರಾಗಿ ಹೊರಹೊಮ್ಮಿದರು.ರಾಜ್ಯದ ಮೂಲೆ ಮೂಲೆಗಳಿಂದ ವಿವಿಧ ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿ ಸಿದ್ದರು.

ಇನ್ನೂ ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣ ದಲ್ಲಿ ಹಮ್ಮಿಕೊಂಡಿದ್ದ ಈ ಒಂದು ಸ್ಪರ್ಧೆಗೆ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ರವೀಂದ್ರ ಕುರಬಗಟ್ಟಿ ಮತ್ತು ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಓಟದ ಸ್ಫರ್ಧೆಗಳಿಗೆ ಚಾಲನೆ ನೀಡಿದರು.

ಅಸೋಸಿಯೇಷನ್ ಅಧ್ಯಕ್ಷ ಹಾಗೂ ಪಾಲಿಕೆ ಮಾಜಿ ಮೇಯರ್ ಶಿವು ಹಿರೇಮಠ ಅಸೋಸಿ ಯೇಷನ್ ಗೌರವ ಅಧ್ಯಕ್ಷ ಆನಂದ ನಾಡಗೀರ, ವಿಲಾಸ ನೀಲಗುಂದ ಸೇರಿದಂತೆ ಹಲವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದರು.

ಕ್ರಾಸ್ ಕಂಟ್ರಿಯ ಫಲಿತಾಂಶ 10 ಕಿ.ಮೀ. ಓಟದ ಪುರುಷರ ವಿಭಾಗ
1.ಬೆಳಗಾವಿಯ ಶಿವಾನಂದ ನಾಯಕ,
2.ಹುಬ್ಬಳ್ಳಿಯ ನಾಗರಾಜ ದಿವಟೆ,
3. ಬೆಂಗಳೂರಿನ ವೆಂಕಟೇಶ ಕೆ.ಕೆ.,
4. ಬೆಂಗಳೂರಿನ ಪ್ರಭು ಲಮಾಣಿ,
5. ಬಾಗಲಕೋಟೆಯ ಸಂಗಮೇಶ ಹಳ್ಳಿ,
6. ಹಾವೇರಿಯ ಸಂಜು ಬೆಟ್ಟಪ್ಪನವರ

ಮಹಿಳೆಯರ ವಿಭಾಗದ ಫಲಿತಾಂಶ
1. ಬೆಂಗಳೂರಿನ ರಾಶಿ ಸಿ.ಎಂ.,
2. ಧಾರವಾಡದ ಶಿಲ್ಪಾ ಹೊಸಮನಿ,
3 ಶಿವಮೊಗ್ಗದ ಎಚ್.ವಿ. ದೀಕ್ಷಾ,
4. ಧಾರವಾಡದ ಸುಷ್ಮಿತಾ ಮುಗಳಿ,
5. ಧಾರವಾಡದ ಸುಪ್ರಿತಾ ಸಿದ್ದಿ,
6. ಧಾರವಾಡದ ವಿಜಯಲಕ್ಷ್ಮಿ ಕರಲಿಂಗಣ್ಣವರ

4 ಕಿ.ಮೀ. ಓಟದ 16 ವರ್ಷದೊಳಗಿನ ಬಾಲಕರ ವಿಭಾಗದ ಫಲಿತಾಂಶ
1. ಚೇತನ ದೊಡ್ಡಮನಿ,
2. ರಾಮನಗೌಡ ಪಾಟೀಲ,
3. ವೀರನಗೌಡ ಪಾಟೀಲ,
4. ಕಾರ್ತಿಕ ಜೋಡಳ್ಳಿ,
5. ಬಸವರಾಜ ರಾಮಶೆಟ್ಟಿ,
6. ಉಮೇಶ ರಾಠೋಡ

4 ಕಿ.ಮಿ ಓಟದ 16 ವರ್ಷದೊಳಗಿನ ಬಾಲಕಿಯರ ವಿಭಾಗದ ಫಲಿತಾಂಶ
1. ಧಾರವಾಡದ ಶ್ವೇತಾ ಬಡಿಗೇರ,
2. ಧಾರವಾಡದ ಲಕ್ಷ್ಮಿ ಗೋನದಿನ್ನಿ,
3. ವರೂರಿನ ಪ್ರೀತಿ ಬಿ. ಅಮಾತಿ,
4. ವರೂರಿನ ಚೈತ್ರಾ ಎಂ. ಪುಟ್ಟಣ್ಣವರ,
5. ಧಾರವಾಡದ ಪೃಥ್ವಿ ಎಚ್.ಪೂಜೇರ,
6. ಧಾರವಾಡದ ಲಕ್ಷ್ಮಿ ಬಿ. ಓಬಣ್ಣವರ

ಸಂಜೆ ಸಮಾರೋಪ ಸಮಾರಂಭದೊಂದಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.ಆರ್ ಎನ್ ಶೆಟ್ಟಿ ಮೈದಾನದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಿ ಗೌರವಿಸಲಾಯಿತು.ಮಾಜಿ ಶಾಸಕ ಅಮೃತ ದೇಸಾಯಿ,ಶಾಸಕ ಅರವಿಂದ ಬೆಲ್ಲದ

ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಹಿರಿಯ ವಕೀಲ ಪಿ.ಎಚ್.ನೀರಲಕೇರಿ ಸೇರಿದಂತೆ ಹಲವು ಗಣ್ಯರು ಬಹುಮಾನ ವಿತರಿಸಿದರು. ಕೆ.ಎಸ್. ಭೀಮಣ್ಣವರ, ಉದ್ಯಮಿ ಮಹೇಶ ಶೆಟ್ಟಿ, ಸವಿತಾ ಅಮರಶೆಟ್ಟಿ, ರವೀಂದ್ರ ಕುರಬಗಟ್ಟಿ, ಡಾ.ಕಿರಣ ಕುಲಕರ್ಣಿ,

ಖಾಲಿದ ಖಾನ್, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ಶಂಬುಗೌಡ ಸಾಲಮನಿ, ಉಪಸ್ಥಿತರಿ ದ್ದರುಅಸೋಶಿಯೇಷನ್ ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ ಸ್ವಾಗತಿಸಿದರು. ಆರ್.ಕೆ.ಪಡತಾರೆ ವಂದಿಸಿದರು.ಇದೇ ವೇಳೆ ಬರುವ ದಿನಗಳಲ್ಲಿ ಈ ಒಂದು ಕಾರ್ಯಕ್ರಮಕ್ಕೆ ನೆರುವು ನೀಡುವ ಭರವಸೆಯನ್ನು ನೀಡಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk