ಧಾರವಾಡ –
ನಾಲ್ಕು ವರ್ಷಗಳಿಂದ ಪಾಲಿಕೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಅಂಗವಿಕಲ ನೌಕರರಿಗೆ ಗೇಟ್ ಪಾಸ್ ನೀಡಿದ ಪಾಲಿಕೆಯ ಅಧಿಕಾರಿಗಳು – ನಾನು ದುಡಿದರೆ ನನ್ನ ಕುಟುಂಬ ನಡೆಯುತ್ತಿದೆ ಎಂದು ಕೈ ಮುಗಿದು ಕೇಳಿದರು ಅಂಗವಿಲಕನ ನೋವಿಗೆ ಕಣ್ತೇರೆದು ನೋಡದ ಪಾಲಿಕೆಯ ಅಧಿಕಾರಿಗಳು…… ಆಯುಕ್ತರೇ ಇದೇನಾ ನಿಮ್ಮ ಅಧಿಕಾರಿಗಳ ಜನಸ್ನೇಹಿ ಆಡಳಿತ ವ್ಯವಸ್ಥೆ
ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳಿಗೆ ಕರುಣೆ ಎಂಬೊದು ಇದ್ದೇ ಇರುತ್ತದೆ ಆದರೆ ಕರುಣೆ ಇಲ್ಲದ ಅಧಿಕಾರಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇದ್ದಾರೆ ಎಂಬೊದಕ್ಕೆ ಈ ಘಟನೆ ಸಾಕ್ಷಿ.ಹೌದು ಸಂಗಪ್ಪ ಅಡಿವೆಪ್ಪ ನಂಜೆನ್ನವರ ಎಂಬು ವವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯ ವಿದ್ಯುತ್ ವಿಭಾಗದಲ್ಲಿ ಕೆಲಸವನ್ನು ಮಾಡುತ್ತಿದ್ದರು.
ಮೂರು ನಾಲ್ಕು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡುತ್ತಿದ್ದ ಇವರಿಗೆ ಪ್ರತಿ ತಿಂಗಳು 10 ಸಾವಿರ ಸಂಬಳವನ್ನು ಕೂಡಾ ನೀಡಲಾಗುತ್ತಿತ್ತು ಸಾರ್ವಜನಿಕರು ಯಾರಾದರೂ ದೂರನ್ನು ನೀಡಿದರೆ ಅವುಗಳನ್ನು ಬರೆದುಕೊಂಡು ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದವರಿಗೆ ಮಾಹಿತಿಯನ್ನು ನೀಡುತ್ತಿದ್ದನು ಅಂಗವಿಕಲನಾಗಿದ್ದರು ಕೂಡಾ ಕಡಿಮೆ ಸಂಬಳದಲ್ಲಿ ಕೆಲಸವನ್ನು ಮಾಡುತ್ತಿದ್ದು
ಸಂಗಪ್ಪ ನನ್ನು ಸಧ್ಯ ಯಾವ ಕಾರಣವನ್ನು ನೀಡದೆ ಅವನ ಪರಸ್ಥಿತಿಯನ್ನು ನೋಡದೆ ತಿಳಿದುಕೊಳ್ಳದೇ ಪಾಲಿಕೆಯ ಅಧಿಕಾರಿಗಳು ಇವನಿಗೆ ಗೇಟ್ ಪಾಸ್ ನೀಡಿದ್ದಾರೆ.ನಾನು ದುಡಿದರೆ ನನ್ನ ಕುಟುಂಬ ನಡೆ ಯುತ್ತದೆ ಎಂದು ತನ್ನ ನೋವನ್ನು ಪಾಲಿಕೆಯ ಅಧಿಕಾರಿಗಳ ಮುಂದೆ ಕೈ ಮುಗಿದು ಪರಿ ಪರಿಯಾಗಿ ಕೇಳಿದ್ದಾನೆ ಈ ಕುರಿತಂತೆ ಪಾಲಿಕೆಯ ಆಯುಕ್ತರಾಗಿ ರುವ ಡಾ ಈಶ್ವರ ಉಳ್ಳಾಗಡ್ಡಿಯವರನ್ನು ಕೂಡಾ ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ
ಆಯಿತು ಎಂದು ಹೇಳಿದ ಆಯುಕ್ತರು ಮರೆತರು ಇನ್ನೂ ಇತ್ತ ಇದನ್ನೇ ಬಂಡವಾಳ ಮಾಡಿಕೊಂಡ ಪಾಲಿಕೆಯ ಲ್ಲಿನ ಕೆಲವರು ಹಿಂದಿನ ಬಾಗಿಲಿನಿಂದ ಮತ್ತೊಬ್ಬನನ್ನು ಪ್ಲಾನ್ ಮಾಡಿ ಮಾಡಿ ಅರ್ಜಿ ಹಾಕಿಸಿ ಎರಡು ಮೂರು ದಿನಗಳಲ್ಲಿ ಈ ಒಂದು ಸಂಗಪ್ಪನ ಹುದ್ದೆಗೆ ನೇಮಕಾತಿವ ಯನ್ನು ಮಾಡಿ ಆದೇಶವನ್ನು ಮಾಡಿದ್ದಾರೆ.
ಸಂಗಪ್ಪ ಆರ್ಥಿಕವಾಗಿ ಕಷ್ಟದಲ್ಲಿದ್ದು ಅಂಗವಿಕಲ ವ್ಯಕ್ತಿಯಾಗಿದ್ದು ಅವನಿಂದಲೇ ಅವನ ಕುಟುಂಬ ನಡೆಯುತ್ತದೆ ಎಂಬ ವಿಚಾರ ಗೊತ್ತಿದ್ದರೂ ಕೂಡಾ ಪರಿ ಪರಿಯಾಗಿ ಕೈ ಮುಗಿದು ಕೇಳಿದರು ಕೂಡಾ ಸ್ಪಂದಿಸದೇ ಕಣ್ತೇರೆದು ನೋಡದ ಅಧಿಕಾರಿಗಳೇ ಇದೇನಾ ನಿಮ್ಮ ಆಡಳಿತ ವ್ಯವಸ್ಥೆ ಇದೇನಾ ನಿಮ್ಮ ಕಾರ್ಯವೈಖರಿ ಆಡಳಿತದಲ್ಲಿ ಖಡಕ್ ಆಗಿರುವ ಆಯುಕ್ತರೇ ಇದೇನಾ ನಿಮ್ಮ ಅಧಿಕಾರಿಗಳ ಜನಸ್ನೇಹಿ ಆಡಳಿತ ವ್ಯವಸ್ಥೆ
ಅಂಗವಿಕಲ ಯುವಕ ನಿಮ್ಮ ಗಮನಕ್ಕೂ ತಗೆದು ಕೊಂಡು ಬಂದರು ಯಾಕೇ ನೀವು ಹೇಳಿಲಿಲ್ಲ ಇನ್ನಾದರೂ ಈ ಒಂದು ಯುವಕನ ನೋವಿಗೆ ಸ್ಪಂದಿಸಿ ಬದುಕಿಗೆ ಹೆಗಲಾಗಿ ನಿಮ್ಮನ್ನು ನೆನೆಸಿಕೊಂಡು ಕುಟುಂಬವು ಬದುಕುತ್ತದೆ ಈ ಒಂದು ನಿರೀಕ್ಷೆಯಲ್ಲಿ ಅಂಗವಿಕಲ ಯುವಕನಿದ್ದು ಯುವಕನಿಗೆ ನ್ಯಾಯ ಸಿಗದಿದ್ದರೆ ಖಂಡಿತವಾಗಿ ಈ ಒಂದು ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರ ಗಮನಕ್ಕೆ ತಗೆದುಕೊಂಡು ಬಂದು ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸುದ್ದಿ ಸಂತೆ ಕಾರ್ಯವನ್ನು ಮಾಡುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ
ಸುದ್ದಿ ಸಂತೆ ನ್ಯೂಸ್ ಧಾರವಾಡ……