ಶಿಗ್ಗಾವಿ –
ಮುಂಬಡ್ತಿ ಪಡೆದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರಿಗೆ ಅಭಿಮಾನದ_ಅಭಿನಂದನೆ ಸಲ್ಲಿಸಿದ ಅರುಣ ಹುಡೇದಗೌಡ್ರ – ನೌಕರರ ಪಾಲಿನ ಆಶಾಕಿರಣ ಷಡಾಕ್ಷರಿಯವರಿಗೆ ಆಯುಷ್ಯ ಆರೋಗ್ಯವನ್ನು ದೇವರು ಕುರಣಿಸಲಿ ಎನ್ನುತ್ತಾ ಸಮಸ್ತ ನೌಕರರ ಪರವಾಗಿ ಅಭಿನಂದನೆ ಸಲ್ಲಿಸಿದ ಅರುಣ ಹುಡೇದಗೌಡ್ರ
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರಿಗೆ ರಾಜ್ಯ ಸರ್ಕಾರವು ಮುಂಬಡ್ತಿಯನ್ನು ನೀಡಿದೆ.ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪಾಲಿಗೆ ಅತ್ಯುತ್ತಮ ಅಧ್ಯಕ್ಷರನ್ನು ಕಂಡಂತಹ ಷಡಾಕ್ಷರಿಯವರಿಗೆ ಸರ್ಕಾರ ಮುಂಬಡ್ತಿಯನ್ನು ನೀಡಿದೆ. ಕರ್ನಾಟಕ, ಸರ್ಕಾರ ಯಾವುದೇ ಇರಲಿ ಸರ್ಕಾರಿ ನೌಕರರು ಸಂಘಟಿತ ಹೋರಾಟದಿಂದ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿರುವ ಹಾಗೂ ಈ ನಿಟ್ಟಿನಲ್ಲಿ ನಿರಂತರವಾಗಿ ಮುನ್ನುಗ್ಗುತ್ತಿರುವ ನೌಕರರ ನೆಚ್ಚಿನ ನಾಯಕ ಷಡಕ್ಷರಿ ಸಿಎಸ್ ಇವರ ಹೋರಾಟದಿಂದ
ಇವರ ಪರಿಶ್ರಮದಿಂದ ನೌಕರರಿಗೆ ಅತ್ಯಂತ ಶೀಘ್ರಗತಿಯಲ್ಲಿ ಮತ್ತು ಅನೇಕ ಆದೇಶಗಳನ್ನು ಪಡೆದು ನೌಕರರ ಆಶಾಕಿರಣವಾಗಿ ಹೊರ ಹೊಮ್ಮಿರುವಂತ ರಾಜ್ಯಾಧ್ಯಕ್ಷರಿಗೆ ಇಲಾಖೆಯಲ್ಲಿ ಮುಂಬಡ್ತಿಯನ್ನು ನೀಡಿ ಸರ್ಕಾರ ಆದೇಶಿಸಿದೆ ಈ ಒಂದು ವಿಚಾರ ಅತ್ಯಂತ ಸಂತೋಷದ ಸಂಗತಿ ಯಾಗಿದೆ ಅಧ್ಯಕ್ಷರಿಗೆ ಇನ್ನು ಹೆಚ್ಚಿನ ಸೇವೆ ಮಾಡುವಂತಹ ಅವಕಾಶ ಮಾನ್ಯ ಅಧ್ಯಕ್ಷರಿಗೆ ದೊರೆಯಲಿ ಹಾಗೂ ಭಗವಂತ ಅವರಿಗೆ ಆರೋಗ್ಯ ಆಯಸ್ಸು ಕರುಣಿಸಲಿ ಎಂದು ಶಿಗ್ಗಾವಿ ತಾಲ್ಲೂಕಿನ ನೌಕರರ ಸಂಘದ ಅಧ್ಯಕ್ಷರಾಗಿರುವ ಅರುಣ ಹುಡೇದಗೌಡ್ರ ತಿಳಿಸಿದ್ದಾರೆ
ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮುಂಬಡ್ತಿಯನ್ನು ಪಡೆದ ರಾಜ್ಯಾಧ್ಯಕ್ಷರಿಗೆ ಪ್ರೀತಿಯೊಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶಿಗ್ಗಾವಿ…..