ಹುಬ್ಬಳ್ಳಿ –
ರಾಜ್ಯಕ್ಕೆ ಮಾದರಿಯಾಗಲಿ ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿ ರಾಜು ನಾಯಕವಾಡಿ ಸಲಹೆ – ಹೆಸರಿಗಷ್ಟೇ ಹೂಬಳ್ಳಿ ಆಗದೇ ಅಭಿವೃದ್ದಿ ಯಲ್ಲಿಯೂ ಮಾದರಿಯಾಗಲಿ ರಾಜು ನಾಯಕವಾಡಿ ಒತ್ತಾಯ
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ವಾಣಿಜ್ಯ ನಗರಿ ಹುಬ್ಬಳ್ಳಿ ಅಭಿವೃದ್ದಿ ವಿಚಾರದಲ್ಲಿ ತೀರಾ ಹಿಂದೂಳಿಯು ತ್ತಿದ್ದು ಇದೊಂದು ಬೇಸರದ ಸಂಗತಿ ಎಂದು ಹೋರಾಟಗಾರ ಯುವ ಮುಖಂಡ ರಾಜು ನಾಯಕವಾಡಿ ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಈ ಒಂದು ವಿಚಾರ ಕುರಿತಂತೆ ಮಾತನಾಡಿದ ಅವರು ಮೂವರು ಮಾಜಿ ಮುಖ್ಯಮಂತ್ರಿ,
ಇಬ್ಬರು ಕೇಂದ್ರ ಸಚಿವರು ನಾಲ್ಕೈದು ಸಚಿವರು ಕಂಡಿರುವ ಹುಬ್ಬಳ್ಳಿ ಹೆಸರಿಗೆ ಮಾತ್ರ ಹೂಬಳ್ಳಿ ಯಾಗಿದ್ದು ನಗರವನ್ನು ಒಮ್ಮೆ ಸುತ್ತಾಡಿದರೆ ನಗರದ ಪರಸ್ಥಿತಿ ಚಿತ್ರಣ ಕಂಡು ಬರುತ್ತಿದೆ ಎಂದಿದ್ದಾರೆ.ಕೇಂದ್ರ ರಾಜ್ಯ ಸರ್ಕಾರದಿಂದ ಮೇಲಿಂದ ಮೇಲೆ ಹತ್ತು ಹಲವಾರು ಯೋಜನೆ ಗಳು ಬಂದರು ಕೂಡಾ ಹೆಸರಿಗೆ ದಾಖಲೆಗಳಲ್ಲಿ ಮಾತ್ರ ಆಗಿದ್ದು
ಯಾವುದೇ ಅಭಿವೃದ್ದಿ ಕೆಲಸ ಕಾರ್ಯಗಳು ನಗರದಲ್ಲಿ ಕಂಡು ಬರುವುದಿಲ್ಲ ಎಂದಿದ್ದಾರೆ ಹೀಗಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿಯನ್ನು ಉತ್ತರ ಕರ್ನಾಟಕದಲ್ಲಿ ಮಾದರಿಯನ್ನಾಗಿ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆಗಲಿ ಎಂದು ರಾಜು ನಾಯಕ ವಾಡಿ ಒತ್ತಾಯಿಸಿದ್ದಾರೆ.
ಸದಾ ಒಂದಿಲ್ಲೊಂದು ಸಾರ್ವಜನಿಕರ ವಿಚಾರ ಕುರಿತಂತೆ ಧ್ವನಿ ಎತ್ತುತ್ತಿರುವ ರಾಜು ನಾಯಕ. ವಾಡಿ ಯವರು ಸಧ್ಯ ಮತ್ತೊಂದು ದೊಡ್ಡ ವಿಚಾರದಲ್ಲಿ ಧ್ವನಿ ಎತ್ತಿದ್ದು ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಈ ಒಂದು ವಿಚಾರ ಕುರಿತಂತೆ ಕಾರ್ಯಪ್ರವೃತ್ತರಾಗುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……