ಬೆಂಗಳೂರು –
ಕರ್ನಾಟಕ ಸರ್ಕಾರಿ ನಿವೃತ್ತ ನೌಕರರ ವೇದಿಕೆ
ಸಾಮಾಜಿಕ ನ್ಯಾಯ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಲೇಬೇಕು ಎಲ್ಲಾ ಇಲಾಖೆಗಳ ನಿವೃತ್ತ ನೌಕರರು 7ನೇ ವೇತನ ಆಯೋಗದ ಲ್ಲಿ ಅನ್ಯಾಯ ಕ್ಕೆ ಒಳಗಾದ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ದಲ್ಲಿ ನಡೆಯುವ ಬೃಹತ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಕಡ್ಡಾಯವಾಗಿ ಹಾಜರಾ ಗಲು ವಿನಂತಿಯನ್ನು ಸರ್ಕಾರದ ಮುಂದೆ ಸಮಸ್ತ ನಿವೃತ್ತ ಬಂದುಗುಳು ಸೇರಿ ನಮಗಾದ ಅನ್ಯಾಯದ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ
೧ ಜುಲೈ ೨೦೨೨ ರಿಂದ ೩೧ ಜುಲೈ ೨೦೨೪ ರವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ರಾಜ್ಯದ ಸಮಸ್ತ ಸರ್ಕಾರಿ ಮತ್ತು ಅರೆ ಸರ್ಕಾರಿ ನಿವೃತ್ತ ನೌಕರರಿಗೆ ೭ನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ನಷ್ಟ ನಿವೃತ್ತಿಯ ಉಪದಾನ, ಪರಿವರ್ತಿತ ಪಿಂಚಣಿ,ಮತ್ತು ಗಳಿಕೆ ರಜೆ ನಗದೀಖರಣ ಇವುಗಳನ್ನು ೭ನೇ ವೇತನ ಆಯೋಗದಲ್ಲಿ ಲೆಕ್ಕ ಹಾಕದೆ ಹಿರಿಯ ಜೀವಿಗಳ ಹೊಟ್ಟೆ ಮೇಲೆ ಬರೆ ಎಳೆದು ಕಳುಹಿಸಿರುವುದು ಎಷ್ಟು ಸರಿ
ಇದನ್ನು ರಾಜ್ಯ ಮಟ್ಟದಲ್ಲಿ ಸಮಾಲೋಚಿಸಲು ಪ್ರತಿಭಟಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ರಾಜ್ಯ ಸಂಚಾಲಕರು, ಜಿಲ್ಲಾ ಸಂಚಾಲಕರು, ತಾಲ್ಲೂಕು ಸಂಚಾಲಕರು ಈ ಅವಧಿಯಲ್ಲಿ ನಿವೃತ್ತಿಯಾದವರನ್ನು ಗುರುತಿಸಿ ಸಂಘಟನೆ ಮಾಡಿ, ತಾಲೂಕ, ಜಿಲ್ಲಾ, ವಿಭಾಗ ಮಟ್ಟದಲ್ಲಿ ಸಮಾಲೋಚನಾ ಸಭೆಗಳನ್ನು ಮಾಡಿ, ರಾಜ್ಯ ಮಟ್ಟದ ಸಮಾಲೋಚನಾ ಸಭೆ ಮಾಡುತ್ತಿದ್ದಾರೆ ಸಂಘಟನೆಯ ಪ್ರಾಮಾಣಿಕ ಸಮರ್ಥ ಕ್ರಿಯಾಶೀಲ ಶಕ್ತಿಯಾಗಿದೆ
ಕರ್ನಾಟಕ ನಿವೃತ್ತ ನೌಕರರ ವೇದಿಕೆಯು ಯಾವ ಸಂಘಟನೆಯ ಸರ್ಕಾರದ ವಿರುದ್ಧವಾಗಿ ಅಲ್ಲ ರಾಜ್ಯ ನಾಯಕರು ಈ ವೇದಿಕೆಯ ಬೇಡಿಕೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ವೇದಿಕೆಯ ಜೊತೆಗೂಡಿ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಮುಖ್ಯ ಮಂತ್ರಿಗಳು ಸಂಪುಟ ಸಭೆಗೆ ತಂದು ಆರ್ಥಿಕ ತಜ್ಞರಿಂದ ಲೆಕ್ಕ ಹಾಕಿಸಲು ಪ್ರಯತ್ನಿಸಿ ಬಜೆಟ್ ನ್ನು ಅಂಗಿಕರಿಸಿ 30-40 ವರ್ಷಗಳ ಕಾಲ ಸರ್ಕಾರಕ್ಕೆ ಆಹೋ ರಾತ್ರಿ ಕರ್ತವ್ಯವೇ ದೇವರು ಎಂದು ತಿಳಿದು ಕೆಲಸ ನಿರ್ವಹಿಸಿದ್ದಾರೆ
ಸರ್ಕಾರ ರೂಪಿಸಿದ ಎಲ್ಲಾ ಯೋಜನೆಗಳನ್ನು ಯಶಸ್ವಿ ಯಾಗಿ ಅನುಷ್ಠಾನಗೊಳಿಸಿ, ಅಭಿವೃದ್ಧಿಗೊಳಿಸಿ, ರಾಜ್ಯದ ಕಡೆ ಇಡೀ ದೇಶ ನೋಡುವ ಹಾಗೆ ಮಾಡಿದ ಹಿರಿಯ ಜೀವಿಗಳಿಗೆ ಹೀಗೆ ಮಾಡುವುದು ಸರಿಯಲ್ಲ ಎಂದು ಎಲ್ಲಾ ರಾಜ್ಯ ನಿವೃತ್ತ ನೌಕರರು ಮನಗಂಡು, ಎಚ್ಚೆತ್ತುಕೊಂಡು. ಹೋರಾಟಕ್ಕೆ ಇಳಿದಿದ್ದಾರೆ ಸಮ ಯೋಚಿತವಾಗಿದೆ, ಸೂಕ್ತವಾಗಿದೆ, ಈಗ ಒಗ್ಗಟ್ಟಿನಿಂದ ಹಕ್ಕೊತ್ತಾಯ ಪ್ರ್ರರದರ್ಶ ಮಾಡುತ್ತುತಾರೆ ಆದ್ದರಿಂದ ರಾಜ್ಯ ನಿವೃತ್ತ ನೌಕರರ ವೇದಿಕೆ ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ದಿನಾಂಕ ೧೮.೦೯.೨೦೨೪ ರಂದು ಮುಂಜಾನೆ ೯.೩೦ ಗಂಟೆಯಿಂದ ಪ್ರಾರಂಭ ವಾಗುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಆಗಮಿಸಿದ್ದಾರೆ
ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ನಿವೃತ್ತ ನೌಕರರು ಆಗಮಿಸಿ ಸಮಾವೇಶದ ಸಭೆ ಮುಗಿಯುವವರೆಗೂ ಹಾಜರಿದ್ದು ಮುಂದಿನ ಹೆಜ್ಜೆಗಳ ಬಗ್ಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ ವೇದಿಕೆ ಕೋರಲಾಗಿದೆ*
ಏಳಿ ಎದ್ದೇಳಿ ನಮ್ಮ ಆರ್ಥಿಕ ಸೌಲಭ್ಯ ಪಡೆಯುವ ನ್ಯಾಯಯುತ ಗುರಿಮುಟ್ಟೋಣ ಆರ್ಥಿಕ ಸೌಲಭ್ಯ ಪಡೆಯುವುದು ನಮ್ಮ ಹಕ್ಕು ನಾವು ಪಡೆದೇ ತಿರೋಣ ಎಂಬ ಸಂದೇಶ ನೀಡಲಾಗಿದೆ
ಡಾ || R. ನಾರಾಯಣಸ್ವಾಮಿ ಚಿಂತಾಮಣಿ
ರಾಜ್ಯ ಮತ್ತು ಜಿಲ್ಲಾ ಸಂಸ್ಥಾಪಕ ಪ್ರಧಾನ ಸಂಚಾಲಕರು ಕರ್ನಾಟಕ ಸರ್ಕಾರಿ ನಿವೃತ್ತ ನೌಕರರ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……