ಹುಬ್ಬಳ್ಳಿ –
ಅಂಜಪೀರ್ ಖಾದ್ರಿಗೆ ಶಿಗ್ಗಾವಿ ಗೆಲುವಿನ ಗಿಫ್ಟ್ ನೀಡಿದ ರಾಜ್ಯ ಸರ್ಕಾರ – ಹೆಸ್ಕಾಂ ಅಧ್ಯಕ್ಷರಾಗಿ ನೇಮಕ…. ಅಭಿನಂದನೆ ಸಲ್ಲಿಸಿದ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಮಹಮ್ಮದ್ ರಫೀಕ್ ಚಿಕ್ಕುಂಬಿ
ಹೌದು ಶಿಗ್ಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಬಂಡಾಯವೆದ್ದು ನಂತರ ವರಿಷ್ಠರ ಸೂಚನೆಯಂತೆ ಕಣದಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿದ್ದ ಅಂಜಪೀರ್ ಖಾದ್ರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಪ್ಟ್ ನೀಡಿದೆ.ಟಿಕೆಟ್‌ಗಾಗಿ ಪಟ್ಟು ಹಿಡಿದು ನಂತರ ಹಿಂದೆ ಸರಿದು ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆಲುವಿಗೆ ಕಾರಣರಾಗಿದ್ದಾರೆ ಖಾದ್ರಿ ಫಲಿತಾಂಶ ಬಂದು ಎರಡೇ ದಿನಗಳಲ್ಲಿ ಇದೀಗ ಶಿಗ್ಗಾವಿ ಗೆಲುವಿನ ಬಳಿಕ ಅಜ್ಜಂಪೀರ್ ಖಾದ್ರಿಗೆ ಸರ್ಕಾರಿ ಗಿಫ್ಟ್ ನೀಡಿದೆ.
ಶಿಗ್ಗಾವಿ ಉಪ ಚುನಾವಣೆ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಟಿಕೆಟ್ ತ್ಯಾಗ ಮಾಡಿದ್ದ ಅಜ್ಜಂಪೀರ್ ಖಾದ್ರಿಗೆ ರಾಜ್ಯ ಸರ್ಕಾರ ಗೆಲುವಿನ ಗಿಫ್ಟ್ ನೀಡಿದೆ. ಅಜ್ಜಂಪೀರ್ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷ ಗಾದಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಸರ್ಕಾರದ ಪರವಾಗಿ ಈ ಒಂದು ಆದೇಶವನ್ನು ಹೊರಡಿಸಿದ್ದಾರೆ.
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಪಠಾಣ್‌ರನ್ನು ಗೆಲ್ಲಿಸಿಕೊಂಡು ಬರೋ ಟಾಸ್ಕ್ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್, ಇದೀಗ ಖಾದ್ರಿಗೆ ಗಿಫ್ಟ್ ನೀಡಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಸೋಲಿನ ರುಚಿ ತೋರಿಸಿದೆ.ಸತತ ಆರು ಚುನಾವಣೆಗಳ ನಂತರ ಗೆದ್ದು ಬೀಗಿರೋ ಕಾಂಗ್ರೆಸ್ ಇದೀಗ ಖಾದ್ರಿಗೆ ಗಿಫ್ಟ್ ನೀಡಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಯಾಸಿರ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಿದ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರು ಭಂಡಾಯದ ಭಾವುಟ ನೆಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭರತ್ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ ಕೊನೇ ಹಂತದಲ್ಲಿ ಖಾದ್ರಿ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿತ್ತು. ಮಾತ್ರವಲ್ಲ ಇಡೀ ಚುನಾವಣೆಯಲ್ಲಿ ಖಾದ್ರಿ ಅವರು ಪಠಾಣ್ ಜೊತೆಗೆ ನಿಂತು ಚುನಾವಣೆ ಎದುರಿಸಿ ಗೆಲುವಿನ ನಗೆ ಬೀರಿದರು ಇದನ್ನೇಲ್ಲವನ್ನು ತಿಳಿದ ಪಕ್ಷದ ವರಿಷ್ಠರು ಸಧ್ಯ ಖಾದ್ರಿ ಯವರಿಗೆ ಸಧ್ಯ ಗೆಲುವಿನ ಕೊಡುಗೆ ನೀಡಿದ್ದಾರೆ.
ಇನ್ನೂ ಖಾದ್ರಿಯವರಿಗೆ ಈ ಒಂದು ಹುದ್ದೆಯನ್ನು ನೀಡುತ್ತಿದ್ದಂತೆ ಇತ್ತ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಮಹಮ್ಮದ್ ರಫೀಕ್ ಚಿಕ್ಕುಂಬಿ ಖಾದ್ರಿ ಯವರ ಶ್ರಮವನ್ನು ಗುರುತಿಸಿ ಅವರಿಗೆ ಅಧ್ಯಕ್ಷ ಸ್ಥಾನದ ಹುದ್ದೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿ ಖಾದ್ರಿಯವರಿಗೆ ಶುಭ ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..