ಶಿವಮೊಗ್ಗ –
ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನು ಪಡೆದು ಕೊಂಡಿದ್ದ ಸರ್ಕಾರಿ ನೌಕರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದಂಡವನ್ನು ವಿಧಿಸಿದೆ ಅಲ್ಲದೇ ಹೌದು ಅವುಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಿದೆ.ಶಿವಮೊಗ್ಗದಲ್ಲಿ 72 ಸರ್ಕಾರಿ ನೌಕರ ರಿಗೆ 4,12,890 ರೂಪಾಯಿ ದಂಡ ವಿಧಿಸಲಾಗಿದೆ.
ರಾಜ್ಯದಾದ್ಯಂತ ಆಕ್ರಮ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಆಗಿ ಬದಲಿಸುವ ಕಾರ್ಯಕ್ಕೆ ಆಹಾರ ಇಲಾಖೆ ಚಾಲನೆ ನೀಡಿದ್ದು ಇದರ ಭಾಗವಾಗಿ ಜಿಲ್ಲಾ ಆಹಾರ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರು, ತೆರಿಗೆ ಪಾವತಿದಾರರ ಸಾವಿರಾರು ಕಾರ್ಡ್ ಗಳನ್ನು ಪತ್ತೆ ಮಾಡಿ ಎಪಿಎಲ್ ಗೆ ಪರಿವರ್ತಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 4.9 ಲಕ್ಷ ಪಡಿತರ ಚೀಟಿ ಗಳಿದ್ದು ಇವುಗಳಲ್ಲಿ 1.2 ಲಕ್ಷ ಎಪಿಎಲ್, 3.52 ಲಕ್ಷ ಬಿಪಿಎಲ್, 36,000 ಅಂತ್ಯೋದಯ ಕಾರ್ಡ್ ಗಳಿವೆ. ಕಳೆದ ಏಪ್ರಿಲ್ 1ರಿಂದ ಅ. 31 ರವರೆಗೆ 53,342 ಕಾರ್ಡ್ ಗಳ ಪರಿಶೀಲನೆ ನಡೆಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..