ಧಾರವಾಡ –
ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರಿಗೆ ಧಾರವಾಡದಲ್ಲಿ ಭವ್ಯ ಸ್ವಾಗತ ಸನ್ಮಾನ ಗೌರವ – ಕುಳುವ ಸಮುದಾಯದಿಂದ ಅಧ್ಯಕ್ಷರಿಗೆ ಪ್ರೀತಿಯ ಸನ್ಮಾನ ಗೌರವ…..
ಹೌದು ಎಸ್ ಟಿ ,ಎಸ್ ಸಿ ಅಲೆಮಾರಿ,ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ ಪಲ್ಲವಿ ಯವರನ್ನು ಧಾರವಾಡದಲ್ಲಿ ಸ್ವಾಗತ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.ಹೌದು ಖಾಸಗಿ ಕಾರ್ಯಕ್ರಮದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿದ ಇವರನ್ನು ಕುಳುವ ಸಮಾಜದ ಯುವ ಮುಖಂಡರು ಸೇರಿದಂತೆ ಹಲವರು ಸ್ವಾಗತ ಮಾಡಿಕೊಂಡು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಗೌರವಿಸಿದರು.
ನಗರಕ್ಕೆ ಆಗಮಿಸಿದ ಅಧ್ಯಕ್ಷರನ್ನು ಪ್ರೀತಿಯಿಂದ ಬರಮಾಡಿಕೊಂಡು ಇದೇ ವೇಳೆ ಕೆಲ ಸಮಯ ಸಭೆಯನ್ನು ಮಾಡಿ ಹಲವು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.ನಂತರ ಕುಳುವ ಸಮಾಜ ದಿಂದ ಸನ್ಮಾನಿಸಿ ಗೌರವಿಸಲಾಯಿತು.ಇದೇ ವೇಳೆ ಅಲೆಮಾರಿ ನಿಗಮದ ಇಲಾಖೆಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ ಏಕಲವ್ಯ ಅವರನ್ನು ಕೂಡಾ ಸನ್ಮಾನಿಸಿ ಗೌರವಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಬಸವರಾಜ ಭಜಂತ್ರಿ, ನಾರಾಯಣ ಭಜಂತ್ರಿ,ಡಾ ಸುರೇಶ ಭಜಂತ್ರಿ,ಸದಾಶಿವ ಭಜಂತ್ರಿ,ಮಾರುತಿ ಮಕಡವಾಲೆ,ಸಂದೀಪ ಭಜಂತ್ರಿ,ಡಾ ಉಮಾದೇವಿ,ಶ್ರೀದೇವಿ ವಸನದ,ಶಂಕರ ಮುಗಳಿ, ಭೀಮಣ್ಣ ಭಜಂತ್ರಿ,ಅಭಿಜಿತ ಭಜಂತ್ರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು ಇದೇ ವೇಳೆ ಸಮಾಜದ ಹೆಮ್ಮೆಯ ಪುತ್ರಿ ಶ್ರೀಮತಿ ಜಿ.ಪಲ್ಲವಿ ರವರಿಗೆ ಶುಭಕೋರಲಾಯಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..