ಬೆಂಗಳೂರು –
ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತಷ್ಟು ಬಲ ಸಿಕ್ಕಂತಾ ಗಿದ್ದು ಈ ಹಿಂದೆ ಇದ್ದ ದರದಲ್ಲಿ ಕೇಂದ್ರ ಸರ್ಕಾರ ಒಂದಿಷ್ಟು ಹೆಚ್ಚು ಮಾಡಿ ನೆರವು ನೀಡಿ ಮಕ್ಕಳಿಗೆ ಆಸರೆ ಯಾಗಿದೆ ಹೌದು ಕೇಂದ್ರ ಸರ್ಕಾರವು ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಗೆ ಬಳಸುವ ‘ವಸ್ತುಗಳ ಖರೀದಿ ವೆಚ್ಚ’ ಹೆಚ್ಚಿಸಿದೆ ಈ ಮೂಲಕ ಕೇಂದ್ರೀಯ ಪ್ರಾಯೋಜಿತ ಯೋಜನೆಯ ಅನುದಾನ ಏರಿಸಿದೆ
ಊಟ ತಯಾರಿಸಲು ಮುಖ್ಯವಾಗಿ ಬೇಕಾಗುವ ಬೇಳೆ, ತರಕಾರಿ, ಎಣ್ಣೆ ಹಾಗೂ ಇತರ ಪದಾರ್ಥಗಳು, ಇಂಧನ ಖರೀದಿಗೆ ಈ ಹಿಂದೆ ನಿಗದಿಪಡಿಸಿದ್ದ ದರಗಳನ್ನು ಹೆಚ್ಚಿಸಿದೆ.ಒಟ್ಟಾರೆ ದರ ಗಳಲ್ಲಿ ಶೇ.13.70 ಏರಿಸಿ ಆದೇಶಿಸಿದೆ. ದೇಶದ 10.24 ಲಕ್ಷ ಶಾಲೆಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ಒಟ್ಟು 11.70 ಕೋಟಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..