ಬೀದರ್ –
ಡಿ.16ರಂದು ನಿಗದಿಯಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೀದರ್ ಜಿಲ್ಲಾ ಘಟಕದ ಚುನಾವಣೆಯನ್ನು ಪುನಃ ಮುಂದೂಡಲಾಗಿದೆ. ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿ ತೆರವುಗೊಳಿಸಿತ್ತು. ಡಿ.16ರಂದು ಚುನಾವಣಾ ದಿನಾಂಕವನ್ನು ಕೂಡಾ ಘೋಷಿಸ ಲಾಗಿತ್ತು.
‘ಹಾಲಿ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹಾಗೂ ಇನ್ನೊಂದು ಬಣದ ಸೋಮಶೇಖರ ಬಿರಾದಾರ ಚಿದ್ರಿ ಅವರ ಮನವಿ ಮೇರೆಗೆ ಚುನಾವಣೆಯನ್ನು ಮುಂದೂ ಡಲಾಗಿದೆ. ಹೊಸ ದಿನಾಂಕ ಇಷ್ಟರಲ್ಲೇ ತಿಳಿಸಲಾಗು ವುದು. ಸಂಘದ ಜಿಲ್ಲಾ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯ ಬೇಕಿದೆ’ ಎಂದು ಚುನಾವಣಾಧಿಕಾರಿ ಬಸವರಾಜ ಸ್ವಾಮಿ ತಿಳಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೀದರ್…..