ಬೆಂಗಳೂರು –
2025ರ ಕ್ಯಾಲೆಂಡರ್ ನ್ನು ಬಹಿಷ್ಕರಿಸುವಂತಾ ಗಿದೆ ಸರ್ಕಾರಿ ನೌಕರರು ಹೌದು 2024ಕ್ಕೆ ವಿದಾಯ ಹೇಳುವ ಸಮಯ ಸಧ್ಯ ಬಂದಿದ್ದು 2025ರ ವರ್ಷವನ್ನು ಸ್ವಾಗತಿಸಲು ಜನರು ಕೂಡಾ ಸಿದ್ಧವಾಗಿದ್ದಾರೆ ಈಗಾಗಲೇ ಮುಂದಿನ ವರ್ಷ ಹೇಗಿರಬೇಕು ಎಂದು ಬಹುತೇಕರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಹೊಸ ವರ್ಷದ ಆಚರಣೆ ಮಾಡಲು ಉತ್ಸುಕರಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ವಿಷಯವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. 2025ರ ರಜಾ ಪಟ್ಟಿಯನ್ನು ಸಹ ಸರ್ಕಾರ ಬಿಡುಗಡೆಗೊಳಿಸಿದೆ. ಆದರೆ ಬಹುತೇಕ ಸರ್ಕಾರಿ ರಜೆಗಳು ಭಾನುವಾರ ಬಂದಿವೆ. ಹಾಗಾಗಿ ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿದೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಶುಕ್ರವಾರ ನಂತರ ಮತ್ತು ಭಾನುವಾರ ನಂತರದ ದಿನಗಳಲ್ಲಿ ಸರ್ಕಾರಿ ರಜೆ ಬಂದ್ರೆ ಜನರು ಖುಷಿ ಯಾಗುತ್ತಾರೆ ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು ಅದರ ನಂತರ ಅಥವಾ ಹಿಂದಿನ ದಿನಗಳಲ್ಲಿ ವಿಶೇಷ ರಜಾ ದಿನಗಳು ಸಿಕ್ಕರೆ ಲಾಂಗ್ ಟ್ರಿಪ್ ಹೋಗಲು ಅಥವಾ ಇನ್ನಿತರ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ.
ಆದರೆ 2025ರಲ್ಲಿ ಶನಿವಾರ ಮತ್ತು ಭಾನುವಾ ರವೇ 7 ಸರ್ಕಾರಿ ರಜೆಗಳು ಬಂದಿವೆ. ಹೀಗಾಗಿ 2025ರ ರಜಾದಿನದ ಕ್ಯಾಲೆಂಡರ್ ಬಹಿಷ್ಕರಿ ಸೋಣ ಎಂಬ ಶೀರ್ಷಿಕೆಯಡಿಯಲ್ಲಿ ಪೋಸ್ಟ್ ಗಳು ವೈರಲ್ ಆಗುತ್ತಿವೆ. ಶನಿವಾರ ಮತ್ತು ಭಾನು ವಾರ ಬಂದಿರುವ ರಜಾದಿನಗಳ ವಿವರ ಇಲ್ಲಿದೆ.
2024ರ ವರ್ಷ ಕೊನೆಗೊಳ್ಳಲು ಹದಿನೈದು ದಿನಗಳು ಬಾಕಿ ಇರುವಂತೆಯೇ ರಾಜ್ಯ ಸರ್ಕಾರ 2025ರ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದೆ ಎಲ್ಲಾ 2ನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದೊಂದಿಗೆ ಈ ದಿನಗಳು ಕೂಡ ರಜಾದಿನವಾಗಿರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜೆಗಳು ಸೇರಿವೆ. ಕ್ಯಾಲೆಂಡರ್‌ನಲ್ಲಿ 17 ಗೆಜೆಟೆಡ್ ರಜಾದಿನಗಳನ್ನು ಕಡ್ಡಾಯ ಎಂದು ರಜೆ ತೋರಿಸಲಾಗಿರುತ್ತದೆ.ಐಚ್ಛಿಕ ರಜಾದಿನಗಳ ಪಟ್ಟಿ
ನಿಯಮಗಳ ಪ್ರಕಾರ ಪ್ರತಿ ಉದ್ಯೋಗಿಗೆ 12 ಐಚ್ಛಿಕ ರಜಾದಿನಗಳನ್ನು ನೀಡಲಾಗಿರುತ್ತದೆ.
ಆದರೆ ಈ 12ರಲ್ಲಿ 3ನ್ನು ಮಾತ್ರ ಆಯ್ಕೆ ಮಾಡಿ ಕೊಳ್ಳುವ ಅವಕಾಶವನ್ನು ನೀಡಲಾಗಿರುತ್ತದೆ. ಉದ್ಯೋಗಿಗಳುಉ ತಮ್ಮ ವೈಯಕ್ತಿಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕುಟುಂಬಕ್ಕಾಗಿ ಈ ರಜೆ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದಸರಾಗೆ ಒಂದು ಹೆಚ್ಚುವರಿ ರಜೆಯನ್ನು ಸೇರಿಸಿಕೊಳ್ಳಬ ಹುದು. ಇನ್ನುಳಿದಂತೆ ಯಾವ ಹಬ್ಬಕ್ಕೆ ಐಚ್ಛಿಕ ರಜೆ ನೀಡಲಾಗಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..