ದಾವಣಗೆರೆ –
ಶಾಲೆಯಲ್ಲಿಯೆ ಪಾಠ ಮಾಡುತ್ತಿರುವಾಗಲೇ ಶಿಕ್ಷಕ ರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ದಾವಣಗೆರೆ ಯಲ್ಲಿ ನಡೆದಿದೆ. ಶಾಲೆಯಿಂದ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದ್ದಾರೆ ಘಟನೆ ದಾವಣಗೆರೆ ಜಿಲ್ಲೆ ಮಾಯಕೊಂಡದ ಸರಕಾರಿ ಕೆಪಿಎಸ್ ಪ್ರೌಢಶಾಲೆಯಲ್ಲಿ ಸಂಭವಿಸಿದೆ.
ಪ್ರೌಢಶಾಲೆ ವಿಜ್ಞಾನ ಶಿಕ್ಷಕ ನಾಗರಾಜು (46) ಮೃತಪಟ್ಟ ವರಾಗಿದ್ದು ವಿದ್ಯಾರ್ಥಿ ಗಳಿಗೆ ಪಾಠ ಮಾಡುವ ವೇಳೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಸಹೋ ದ್ಯೋಗಿಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ ಮೃತಪಟ್ಟಿದ್ದರು.ಮೂಲತಃ ಹರಪನಹಳ್ಳಿ ತಾಲೂಕಿನ ತಾವರಗೊಂದಿ ಗ್ರಾಮದವರಾಗಿದ್ದ ನಾಗರಾಜು ಕಳೆದೆರಡು ವರ್ಷಗಳಿಂದ ಮಾಯಕೊಂಡ ಕೆಪಿಎಸ್ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇನ್ನೂ ಮೃತರಾದ ಶಿಕ್ಷಕ ನಾಗರಾಜು ನಿಧನಕ್ಕೆ ಜಿಲ್ಲೆಯ ಶಿಕ್ಷಕ ಬಂಧುಗಳು ಮತ್ತು ರಾಜ್ಯದ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ ರಾಜ್ಯದಲ್ಲಿ ಒಂದೇ ದಿನ ಮೂವರು ಶಿಕ್ಷಕರು ಹೃದಯಾಘಾತದಿಂದ ನಿಧನರಾಗಿ ದ್ದು ಶಿಕ್ಷಕ ವಲಯ ಆತಂಕಗೊಂಡಿದೆ.ಕೆಲಸದ ಒತ್ತಡ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..