ಮಂಡ್ಯ –
ಒಬ್ಬನೇ ವಿದ್ಯಾರ್ಥಿ ಇದ್ದರು ಸರ್ಕಾರಿ ಶಾಲೆ ಮುಚ್ಚಬಾರದು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ.ರು ಚನ್ನಬಸಪ್ಪ ಹೇಳಿದರು.ಒಂದನೆಯ ತರಗತಿಯಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾ ಗಬೇಕು. ಯಾವ ಕಾರಣಕ್ಕೂ ಬೇರೆ ಭಾಷೆ ಯನ್ನೂ ಶಿಕ್ಷಣ ಮಾಧ್ಯಮವಾಗಿ ಹೇರಬಾರದು.
ಶಿಕ್ಷಣ ಮಾಧ್ಯಮ ಕನ್ನಡ ಮಾಧ್ಯಮದಲ್ಲೇ ಆಗಬೇಕು ಎಲ್ಲರಿಗೂ ಶಿಕ್ಷಣ ನೀಡುವುದನ್ನು ಸರ್ಕಾರ ಕರ್ತವ್ಯವಾಗಿ ಪರಿಗಣಿಸಬೇಕು. ಒಬ್ಬನೇ ವಿದ್ಯಾರ್ಥಿ ಇದ್ದರು ಸರ್ಕಾರಿ ಶಾಲೆ ಮುಚ್ಚಬಾರದು. ಆಧುನಿಕ ತಂತ್ರಜ್ಞಾನವನ್ನ ಭಾಷೆಯ ಬೆಳೆವಣಿಗೆಗೆ ಹೇಗೆ ಬೆಳಸಿಕೊಳ್ಳಬೇಕು ಎಂಬುದು ಮುಖ್ಯ. ಈ ವಿಚಾರದಲ್ಲಿ ರಾಜ್ಯ ಹಿಂದೆ ಬೀಳಬಾರದು ಎಂದು ಸಲಹೆ ನೀಡಿದ್ದಾರೆ.
ತೆರಿಗೆ ವಿಚಾರವಾಗಿ ಮಾತನಾಡಿದ ಅವರು, ಹಣಕಾಸು ಆಯೋಗ ಕರ್ನಾಟಕಕ್ಕೆ ಬರಬೇಕಾದ ತೆರಿಗೆಯ ಪಾಲನ್ನು ವರ್ಗಾಯಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಕೇಂದ್ರ ಸರ್ಕಾರರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿರು ವುದರಲ್ಲಿ ಕೂಡ ಸತ್ಯಾಂಶವಿದೆ. ಈಮಾತನ್ನು ರಾಜಕೀಯವಾಗಿ ನೋಡದಂತೆ ಹೇಳಿದರು.
ಸುದ್ದಿ ಸಂತೆ ನ್ಯೂಸ್ ಮಂಡ್ಯ……