ಕೊಪ್ಪಳ –
ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಕೊಪ್ಪಳ ದಲ್ಲಿ ಬೆಳಕಿಗೆ ಬಂದಿದೆ ಹೌದು ಅಪಘಾತ ದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯ ಕೆಲ ಅಂಗಾಂಗಗಳನ್ನು ಸಾವಿನ ಬಳಿಕ ದಾನ ಮಾಡಿದ್ದಾರೆ ಕುಟುಂಬಸ್ಥರು ಇದರೊಂದಿಗೆ ಸಾವಿನಲ್ಲೂ ಅಂಗಾಂಗಗಳನ್ನು ದಾನ ಮಾಡಿದ್ದಾರೆ ಮೃತ ಮಹಿಳೆ ಗೀತಾ.
ಕೊಪ್ಪಳದ ಭಾಗ್ಯನಗರದ ನಿವಾಸಿಯಾಗಿರುವ ಮೃತ ಮಹಿಳೆ ಗೀತಾ.ಸರ್ಕಾರಿ ಶಾಲೆಯ ಶಿಕ್ಷಕರಾಗಿರೋ ಗೀತಾ ಹಾಗೂ ಅವರ ಪತಿ ಸಂಗನಗೌಡ ಸೇರಿದಂತೆ ಗೀತಾಳ ತಾಯಿ ಮೂಡಬಿದಿರೆಗೆ ತೆರಳಿದ್ರು.ವಾಪಸ್ಸು ಕೊಪ್ಪಳಕ್ಕೆ ಕಾರಿನಲ್ಲಿ ಬರುವಾಗ ಡಿಸೆಂಬರ್ 16 ಶಿವಮೊಗ್ಗ-ಹೊನ್ನಳ್ಳಿ ಮಾರ್ಗದ ಬಳಿ ಅಪಘಾತ ವಾಗಿತ್ತು
ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಗೀತಾಳ ತಾಯಿ ಸುಲೋಚನ (64) ಇನ್ನೂ ಅಪಘಾತ ದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೀತಾಳನ್ನು ಶಿವಮೊ ಗ್ಗದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೆದುಳು ನಿಷ್ಕ್ರಿಯ ಗೊಂಡು ಐಸಿಯುನಲ್ಲಿದ್ದ ಗೀತಾ ಅವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.
ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಬೆಂಗಳೂರಿನಲ್ಲಿ ಕಣ್ಣು, ಹೃದಯ, ಯಕೃತ್ತು, ಮೂತ್ರಪಿಂಡ, ಹೃದಯದ ಕಚನ ಸೇರಿದಂತೆ ಹಲವ ಅಂಗಾಂಗ ಗಳನ್ನು ದಾನ ಮಾಡಿ ದ್ದಾರೆ.ಅಂಗಾಂಗಗಳನ್ನು ದಾನ ಮಾಡಿ ಕೊಪ್ಪಳದ ಭಾಗ್ಯನಗರದಲ್ಲಿ ಅಂತೀಮ ಸಂಸ್ಕಾರ ನೆರವೇರಿಸಿದ್ದಾರೆ ಕುಟುಂಬದವರು.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..