ಮಧುಗಿರಿ –
ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ತಾಲ್ಲೂಕಿನ ದೊಡ್ಡದಾಳವಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕ ಎ.ಆರ್.ಸಂಜೀವಮೂರ್ತಿ ಅವರನ್ನು ಕೊಡಿಗೇನ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.’ಅವಾಚ್ಯ ಶಬ್ದಗ ಳಿಂದ ನಿಂದಿಸುತ್ತಾರೆ, ಅಸಭ್ಯವಾಗಿ ನಡೆದುಕೊಳ್ಳು ತ್ತಾರೆ ಎಂದು ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕ ಹನುಮಯ್ಯ ಬಳಿ ಅಳಲು ತೋಡಿಕೊಂಡಿದ್ದರು
ಈ ವಿಚಾರವನ್ನು ಬಿಇಒ ಗಮನಕ್ಕೆ ತಂದಿದ್ದರು. ನಂತರ ಸಂಜೀವಮೂರ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಸಧ್ಯ ಅವರನ್ನು ವಶಕ್ಕೆ ತೆಗೆದು ಕೊಂಡಿರುವ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಧುಗಿರಿ…..