ಬೆಂಗಳೂರು –
CM ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ – ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಯವರ ನೇತ್ರತ್ವದಲ್ಲಿ ಮುಖ್ಯಮಂತ್ರಿ ಭೇಟಿ ನೌಕರರ ಬೇಡಿಕೆಗಳ ಕುರಿತಂತೆ ಚರ್ಚೆ…..
ಇತ್ತೀಚಿಗಷ್ಟೇ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸಿಎಸ್ ಷಡಾಕ್ಷರಿಯವರು ಮತ್ತೆ ಆಯ್ಕೆಯಾಗಿದ್ದಾರೆ.ಈ ಒಂದು ಬೆನ್ನಲ್ಲೇ ನೌಕರರ ಬೇಡಿಕೆಗಳ ಕುರಿತಂತೆ ಮತ್ತೆ ಹೋರಾಟ ಸಭೆ ಗಳನ್ನು ಆರಂಭ ಮಾಡಿದ್ದಾರೆ ಹೌದು ಗೆಲುವು ಸಾಧಿಸಿದ ಬೆನ್ನಲ್ಲೇ ಸುಮ್ಮನೆ ಕುಳಿತುಕೊಳ್ಳದ ಷಡಾಕ್ಷರಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ನಂತರ ರಾಜ್ಯ ಸರ್ಕಾರಿ ನೌಕರರ ಕೆಲವೊಂದಿಷ್ಟು ಬೇಡಿಕೆಗಳ ಕುರಿತಂತೆ ಮನವಿಯನ್ನು ಮಾಡಿದರು.
ಹೌದು ಈಗಾಗಲೇ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ಜಾರಿಗೆ ಮಾಡಿದ್ದು ಇನ್ನೂ ಕೆಲ ಬೇಡಿಕೆಗಳ ಬಾಕಿ ಇರುವ ಹಿನ್ನಲೆಯಲ್ಲಿ ಈ ಒಂದು ವಿಚಾರ ಕುರಿತಂತೆ ಮುಖ್ಯ ಮಂತ್ರಿಯವರೊಂದಿಗೆ ಷಡಾಕ್ಷರಿಯವರು ಚರ್ಚೆ ಯನ್ನು ಮಾಡಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಕುರಿತಂತೆ ಧ್ವನಿ ಎತ್ತಿದರು
ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ಮಾಡಿದ ರಾಜ್ಯಾಧ್ಯಕ್ಷರು ಬಾಕಿ ಉಳಿದಿರುವ ಬೇಡಿಕೆಗಳ ಕುರಿತಂತೆ ಒತ್ತಾಯಿಸಿದರು. ಈ ಒಂದು ಸಂದರ್ಭದಲ್ಲಿ ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ಬೈರಪ್ಪನವರು ಸೇರಿದಂತೆ ಸಂಘಟನೆಯ ಹಲವು ನಾಯಕರು ಮುಖಂಡರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..