ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಕಾರ್ಯಕಾರಣಿ ಸಭೆ ದಾವಣಗೆರೆ ಯಲ್ಲಿ ನಡೆಯಿತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ಅಧ್ಯಕ್ಷತೆ ಯಲ್ಲಿ ನಡೆದ ಈ ಒಂದು ಸಭೆಯಲ್ಲಿ ಹಲವಾರು ವಿಷಯ ಗಳ ಕುರಿತು ಚರ್ಚೆ ಯನ್ನು ಮಾಡಲಾಯಿತು ಇದೇ ವೇಳೆ ನೌಕರರ ಹಬ್ಬದ ಮುಂಗಡ ಹಣ ಏರಿಕೆಗೆ ಒತ್ತಾಯಿಸಲಾಯಿತು
ಕರ್ನಾಟಕದ ಸರ್ಕಾರಿ ನೌಕರರಿಗೆ ಹಬ್ಬಕ್ಕೆ ಮುಂಗಡ ಹಣ ದೊರಕುತ್ತದೆ. ಅವುಗಳನ್ನು ಏರಿಕೆ ಮಾಡಬೇಕು ಎಂಬ ಬೇಡಿಕೆ ಇದೆ. 2025ರಲ್ಲಿ ನೌಕರರು ಸರ್ಕಾರದ ಮುಂದೆ ಇಡುವ ಬೇಡಿಕೆಗಳಲ್ಲಿ ಇದು ಸಹ ಸೇರಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯಲ್ಲಿಯೂ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆಯಿತು. ಸಭೆಯಲ್ಲಿ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿ ನಿರ್ಣಯಗಳಿಗೆ ಬೆಂಬಲ ಸೂಚಿಸಲಾಗಿದೆ.ಹಬ್ಬದ ಮುಂಗಡ ಹಣ 25,000 ರಿಂದ 50,000 ರೂ.ಗಳಿಗೆ ಹೆಚ್ಚಿಸಲು ಕ್ರಮವನ್ನು ಕೈಗೊಳ್ಳ ಲಾಯಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..