ಬೆಂಗಳೂರು –
ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ಟೀಮ್ – ಪದವೀಧರ ಶಿಕ್ಷಕರ ಸಮಸ್ಯೆ ಕುರಿತಂತೆ ಚರ್ಚೆ ಮಾಡಿದ ನಿಯೋಗ – ರಾಜ್ಯಾಧ್ಯಕ್ಷ ಕೆ ನಾಗೇಶ್,ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ…..
ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ಸಮಸ್ಯೆ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಧಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗವು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಚರ್ಚೆಯನ್ನು ಮಾಡಿದರು. ಹೌದು ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿನ ನಿಯೋಗವು ಶಿಕ್ಷಣ ಸಚಿವರನ್ನು ಭೇಟಿಯಾಗಿ ರಾಜ್ಯದಲ್ಲಿ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಂತೆ ಹಾಗೂ ಬೇಡಿಕೆಗಳ ಕುರಿತಂತೆ ಮನವಿ ನೀಡಿದರು.
ಇದೇ ವೇಳೆ ಶಿಕ್ಷಕರ ಎಲ್ಲಾ ಬೇಡಿಕೆಗಳ ಕುರಿತಂತೆ ಮಧು ಬಂಗಾರಪ್ಪ ಅವರನ್ನು ಒತ್ತಾಯಿಸಿದರು.ಈ ಒಂದು ಭೇಟಿಯ ಸಂದರ್ಧಬದಲ್ಲಿ ಪ್ರಮುಖವಾಗಿ ಪದವೀಧರ ಶಿಕ್ಷಕರ ಸಿ & ಆರ್ ಪ್ರಸ್ತಾವನೆಗೆ ವರದಿ ತಯಾರಿಸಲು ಸಂಬಂಧಿಸಿ ಇಲಾಖೆಗೆ ಸಮನ್ವಯ ಸಾಧಿಸಲು ಚರ್ಚೆ ಯೊಂದಿಗೆ,ಆರ್ಥಿಕ ಇಲಾಖೆಗೆ ಕಾನೂನು ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದು ತಕ್ಷಣ ಅಭಿಪ್ರಾಯ ನೀಡಲು ಕೋರಿದರು.
ಶಿಕ್ಷಕರ ವರ್ಗಾವಣೆ ಕುರಿತಂತೆಯೂ ಕೂಡಾ ಚರ್ಚೆಯನ್ನು ಮಾಡಲಾಯಿತು.ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯ ಗುರುಗಳ ಬಡ್ತಿ ಬಗ್ಗೆ ಚರ್ಚಿಸಲಾಯಿತು.ಇದೇ ವೇಳೆ ಮೊಟ್ಟೆ ದರವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು.ರಾಜ್ಯ ಮಟ್ಟದ ಸರ್ವ ಸದಸ್ಯರ ಮಹಾ ಸಭೆಯನ್ನು ಆಯೋಜಿಸಲು ಇದರೊಂದಿಗೆ ಚರ್ಚಿಸಲಾಯಿತು.ಹಾಸನ ಜಿಲ್ಲಾ ಅಧ್ಯಕ್ಷರಾದ ಅಣ್ಣಪ್ಪ,ಕಾರ್ಯದರ್ಶಿ ಬಸವರಾಜ್ ವರದರಾಜ್ ಕಾಳೇಗೌಡ,ಅಣ್ಣೇಗೌಡ,ಪ್ರವೀಣ ಪತ್ತಾರ,ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..