ಹುಬ್ಬಳ್ಳಿ –
ಕೆಲಸ ಮುಗಿದು ಒಂದೂವರೆ ವರ್ಷಗಳಾದರು ಹಣ ನೀಡದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ – ಬಿಲ್ ನೀಡಿದರು ಪೈಲ್ ಗಳನ್ನು ತಗೆದು ನೋಡುತ್ತಿಲ್ಲ ಕೋಟಿ ಕೋಟಿ ರೂಪಾಯಿ ಹಣ ಹಾಕಿ ಕಂಗಲಾಗಿರುವ ಗುತ್ತಿಗೆದಾರರು ಹೌದು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಂದಲ್ಲ ಒಂದು ಎಡವಟ್ಟುಗಳನ್ನು ಅಧಿಕಾರಿಗಳು ಮಾಡುತ್ತಾರೆ ಎಂಬೊದಕ್ಕೆ ಈ ಒಂದು ಸ್ಟೋರಿ ಸಾಕ್ಷಿ. ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಟೆಂಡರ್ ಹಾಕಿ ಕಾಮಗಾರಿ ಮುಗಿಸಿ ಬಿಲ್ ಗಾಗಿ ಹಲವಾರು ಗುತ್ತಿಗೆದಾರರು ಪರದಾಡುತ್ತಿದ್ದು ಇನ್ನೂ ನಂಬಿಕೆ ಮೇಲೆ ಶಾಸಕರು ಹೇಳಿದ್ದಾರೆಂದುಕೊಂಡು ಗುತ್ತಿಗೆದಾರೊಬ್ಬರು ಟೆಂಡರ್ ಹಾಕಿ ಕೆಲಸವನ್ನು ಕೂಡಾ ಮಾಡಿದ್ದಾರೆ
ಅಚ್ಚು ಕಟ್ಟಾಗಿ ಕೆಲಸ ಕಾರ್ಯವನ್ನು ಮಾಡಿ ಸಾರ್ವಜನಿಕರಿಂದಲೂ ಕೆಲಸ ಮಾಡಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹೀಗಿರುವಾಗ ಈ ಒಂದು ಕೆಲಸ ಮುಗಿದು ಒಂದು ವರ್ಷಗಳಾಗಿದ್ದು ಈವರೆಗೆ ಕಾಮಗಾರಿಯ ಹಣವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಯವರು ನೀಡಿಲ್ಲ ಕೆಲಸ ಮುಗಿಸಿ ಪೈಲ್ ನ್ನು ಗುತ್ತಿಗೆದಾರರ ಲೆಕ್ಕಪತ್ರ ವಿಭಾಗಕ್ಕೆ ಸಲ್ಲಿಸಿದ್ದಾರೆ.ಎರಡು ಕಾಮಗಾರಿಗಳ ಬಿಲ್ ಗಳ ಪೈಲ್ ಗಳನ್ನು ಮಹಾನಗರ ಪಾಲಿಕೆಯ ಲೆಕ್ಕಪತ್ರ ವಿಭಾಗಕ್ಕೆ ಸಲ್ಲಿಕೆ ಮಾಡಿ ಒಂದು ವರ್ಷ ಕಳೆದಿವೆ
ಕಳೆದ ವರ್ಷ ಜನೆವರಿ ಯಲ್ಲಿ ಒಂದು ಪೈಲ್ ಫೆಬ್ರುವರಿ ಯಲ್ಲಿ ಮತ್ತೊಂದು ಪೈಲ್ ಗಳನ್ನು ಸಲ್ಲಿಕೆ ಮಾಡಿದ್ದಾರೆ ಅಂದು ಕೊಟ್ಟ ಪೈಲ್ ಗಳು ಲೆಕ್ಕಪತ್ರ ಇಲಾಖೆಯಲ್ಲಿ ಇಟ್ಟಲ್ಲಿಯೇ ಕೊಳೆಯುತ್ತಿವೆ.ಬಿಲ್ ಗಾಗಿ ಪೈಲ್ ಗಳು ಸಲ್ಲಿಕೆಯಾಗಿವೆ ಎಂಬೊದನ್ನು ನೊಡಲು ಪಾಲಿಕೆಯ ಮುಖ್ಯಲೆಕ್ಕಾಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಬೇಕು ಆದರೆ ಏನು ಮಾಡೊದು ಈ ಪೈಲ್ ಗಳನ್ನು ನೊಡಲು ಸಮಯವಿಲ್ಲದ ಕಾರಣ ಇತ್ತ ಕೋಟಿ ಕೋಟಿ ರೂಪಾಯಿ ಹಣವನ್ನು ಕೈಯಿಂದ ಹಾಕಿ ಕೆಲಸವನ್ನು ಮಾಡಿದ ಗುತ್ತಿಗೆದಾರರು ಬಿಲ್ ಗಾಗಿ ಕೇಳಿ ಕೇಳಿ ಬೇಸತ್ತಿದ್ದಾರೆ.
ಈ ಒಂದು ವಿಚಾರ ಕುರಿತಂತೆ ಶಾಸಕ ಅರವಿಂದ ಬೆಲ್ಲದ ಅವರನ್ನು ಕೂಡಾ ಭೇಟಿಯಾಗಿ ಶಾಸಕರು ಕೂಡಾ ಈ ಹಿಂದೆ ಆಯುಕ್ತರಾಗಿದ್ದ ಡಾ ಈಶ್ವರ ಉಳ್ಳಾಗಡ್ಡಿಯ ವರಿಗೆ ಹೇಳಿದ್ದರು ಸರಿ ಸರ್ ಈಗಲೇ ಅಪ್ಡೇಟ್ ಮಾಡಿಸುತ್ತೇನೆ ಚೆಕ್ ಮಾಡುತ್ತೇನೆ ಮಾಡಿಸುತ್ತೇವೆ ಎಂದು ಹೇಳಿದ ನಾಲ್ಕು ತಿಂಗಳು ಕಳೆದಿದ್ದು ಈವರೆಗೆ ಆ ಎರಡು ಬಿಲ್ ಗಳ ಮಾಹಿತಿ ಇಲ್ಲ ಇತ್ತ ಗುತ್ತಿಗೆದಾರರು ಈ ಒಂದು ವಿಚಾರ ಕುರಿತಂತೆ ಮುಖ್ಯಲೆಕ್ಕಾಧಿಕಾರಿ ಯನ್ನು ಕೇಳಿ ಕೇಳಿ ಸುಸ್ತಾಗಿ ಸುಮ್ಮನಾಗಿದ್ದಾರೆ
ಕೆಲಸ ಮಾಡಿ ಒಂದು ವರ್ಷ ಕಳೆದರು ಇನ್ನೂ ಬಿಲ್ ನೀಡದ ಪಾಲಿಕೆಯ ಮುಖ್ಯಲೆಕ್ಕಾಧಿಕಾರಿ ವಿರುದ್ದ ಆಕ್ರೋಶಗೊಂಡಿರುವ ಈ ಗುತ್ತಿಗೆದಾರ ಮುಖ್ಯಮಂತ್ರಿ ಭೇಟಿಯಾಗಲು ಮುಂದಾಗಿದ್ದು ಇವರೊಂದಿಗೆ ಇನ್ನೂ ಕೆಲ ಗುತ್ತಿಗೆದಾರರು ಕೂಡಾ ಮುಂದಾಗಿದ್ದಾರೆ.ಒಟ್ಟಾರೆ ಮನೆಯಿಂದ ಹಣವನ್ನು ತಗೆದುಕೊಂಡು ಬಂದು ಕೆಲಸ ಮಾಡಿ ಒಂದು ವರ್ಷ ಕಳೆದರು ಕೂಡಾ ಈವರೆಗೆ ಬಿಲ್ ಮಂಜೂರು ಮಾಡದ ಮಹಾನಗರ ಪಾಲಿಕೆಯ ಅಧಿಕಾರಿಗಳ ನಡೆಗೆ ಗುತ್ತಿಗೆದಾರರು ಬೇಸತ್ತಿದ್ದಾರೆ. ದಾಖಲೆ ಸಮೇತ ಮತ್ತಷ್ಟು ರೋಚಕ ವರದಿಗಳನ್ನು ನಿರೀಕ್ಷಿಸಿ…..
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..