ಯಳಂದೂರು –
ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಗಳಿದ್ದ ಬಸ್ಸನ್ನು ಚಲಾಯಿಸಿದರೆಂಬ ಕಾರಣಕ್ಕೆ ಅಮಾನತಾಗಿರುವ ಗುಂಬಳ್ಳಿ ಪ್ರೌಢಶಾಲೆಯ ಶಿಕ್ಷಕ ಎಂ. ವೀರಭದ್ರಸ್ವಾಮಿ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು, ಕೂಡಲೇ ಶಾಲೆಗೆ ಬರಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು, ಪೋಷಕರು ನಡೆಸುತ್ತಿರುವ ಪ್ರತಿಭಟನೆ ದಿನವೂ ಮುಂದುವರಿದಿದೆ
ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲಿಲ್ಲ.ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಶಾಲೆಗೆ ಭೇಟಿ ನೀಡಿ ದ್ದರು.ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ ಸದಸ್ಯರು ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು. ಏಕಾಏಕಿ ವೀರಭದ್ರಸ್ವಾಮಿರನ್ನು ಅಮಾನತು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ
ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿಡಿಪಿಐ ನೀಡಿದರೂ ಪ್ರತಿಭಟನಕಾರರು ಈ ಬಗ್ಗೆ ಲಿಖಿತವಾಗಿ ತಿಳಿಸುವಂತೆ ಪಟ್ಟು ಹಿಡಿದರು. ಇದು ಸಾಧ್ಯವಿಲ್ಲ ಎಂದಾಗ ವಾಗ್ವಾದ ನಡೆಯಿತು. ವಿದ್ಯಾರ್ಥಿ ನಿಯೊಬ್ಬಳು ಡಿಡಿಪಿಐ ಮುಂದೆ ಅಳುತ್ತ ಅಸ್ವಸ್ಥಳಾಗಿ ಕುಸಿದ ಘಟನೆಯೂ ನಡೆಯಿತು.
ಪ್ರವಾಸದ ವೇಳೆ ಚಾಲಕ ಅಸೌಖ್ಯಕ್ಕೊಳಗಾದ ಕಾರಣ ಪ್ರವಾಸವನ್ನು ರದ್ದುಪಡಿಸುವುದು ಬೇಡವೆಂದು ಶಿಕ್ಷಕ ವೀರಭದ್ರಸ್ವಾಮಿ ಬಸ್ ಚಲಾಯಿಸಿದ್ದರು
ಸುದ್ದಿ ಸಂತೆ ನ್ಯೂಸ್ ಯಳಂದೂರು…..