ಬೆಂಗಳೂರು –
ಮುಸ್ಲಿಂ ಸರ್ಕಾರಿ ನೌಕರರಿಗೆ 1 ಗಂಟೆ ಮೊದಲೇ ಮನೆಗೆ ಹೋಗಲು ಅವಕಾಶ ನೀಡಿ ಸಿಎಂ ಸಿದ್ದರಾಮಯ್ಯಗೆ ಮನವಿ ಹೌದು ಮುಸ್ಲಿಂ ಸರ್ಕಾರಿ ನೌಕರರಿಗೆ ರಂಜಾನ್ ತಿಂಗಳ ಉಪವಾಸಕ್ಕೆ ಅನುಕೂಲ ಮಾಡಿಕೊಡುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ. ಇನ್ನೇನು ಮುಸ್ಲಿಂ ಬಾಂಧವರ ಪವಿತ್ರ ಆಚರಣೆ ರಂಜಾನ್ ತಿಂಗಳು ಪ್ರಾರಂಭವಾಗಲಿದೆ.
ಈ ವೇಳೆ ಉಪವಾಸ ಇರುವುದು ಮುಖ್ಯ ಆಚರಣೆ. ಹೀಗಾಗಿ ರಂಜಾನ್ ಉಪವಾಸ ಆಚರಿಸುವ ಮುಸ್ಲಿಂ ಸರ್ಕಾರಿ ನೌಕರರು 1 ಗಂಟೆ ಬೇಗನೆ ಮನೆಗೆ ಹೋಗಲು ಅನುಕೂಲ ಮಾಡಿಕೊಡುವಂತೆ ಸಿಎಂ ಸಿದ್ದರಾಮ ಯ್ಯಗೆ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವೈ. ಸಯ್ಯದ್ ಅಹ್ಮದ್ ಮನವಿ ಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ತೆಲಂಗಾಣದಲ್ಲಿ ಮುಸ್ಲಿಂ ನೌಕರರ ಕೆಲಸದ ಅವಧಿ ಕಡಿತ ಮಾಡಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ. ಹೀಗಾಗಿ ಕರ್ನಾಟಕದಲ್ಲೂ ಇದೇ ರೀತಿ ಕೆಲಸದ ಅವಧಿ ಕಡಿಮೆ ಮಾಡಿ, ಮುಸ್ಲಿಂ ಸರ್ಕಾರಿ ನೌಕರರ ರಂಜಾನ್ ಉಪವಾಸಕ್ಕೆ ಅನುಕೂಲ ಮಾಡಿಕೊಡಬೇಕು ಅಂತ ಸಯ್ಯದ್ ಅಹ್ಮದ್ ಸಿಎಂಗೆ ಮನವಿ ಮಾಡಿದ್ದಾರೆ.
ಮುಸ್ಲಿಂ ಸರ್ಕಾರಿ ನೌಕರರಿಗೆ ರಂಜಾನ್ ತಿಂಗಳ ಉಪವಾಸಕ್ಕೆ ಅನುವು ಮಾಡಿಕೊಡುವಂತೆ ಸಿಎಂಗೆ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಲಾಗಿದೆ. ಮುಸ್ಲಿಂ ಸರ್ಕಾರಿ ನೌಕರರು ಸಂಜೆ 5ರ ಬದಲಾಗಿ, 1 ಗಂಟೆ ಮೊದಲು ಅಂದರೆ ಸಂಜೆ 4 ಗಂಟೆಗೆ ಮನೆಗೆ ತೆರಳಲು ಅನುಮತಿ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವೈ. ಸಯ್ಯದ್ ಅಹ್ಮದ್ ಮನವಿ ಪತ್ರ ಸಲ್ಲಿಸಿದ್ದು ಈ ಒಂದು ವಿಚಾರ ಸಧ್ಯ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ನಡುವೆ ದೊಡ್ಡ ದೊಂದು ಚರ್ಚೆ ಗೆ ವೇದಿಕೆಯಾಗಿದ್ದು ಪರ ವಿರೋಧ ರೀತಿಯಲ್ಲಿ ಚರ್ಚೆ ಯಾಗುತ್ತಿವೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..