ಬೆಂಗಳೂರು –
ಜಾತಿ ಪ್ರಮಾಣಪತ್ರದ ನೈಜತೆ ಪರಿಶೀಲಿಸೋದಕ್ಕೆ ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಇಬ್ಬರನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ ಹೌದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್ ಪೆಕ್ಟರ್ ಗೀತಾ ಮತ್ತು ಖಾಸಗಿ ವ್ಯಕ್ತಿ ರಿಚರ್ಡ್ ಎಂಬಾತ ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆ ಹಕ್ಕು ಪಡೆಯಲು ಜಾತಿ ಪ್ರಮಾಣಪತ್ರ ಸಲ್ಲಿಸ ಬೇಕಾಗಿತ್ತು. ಇದಕ್ಕಾಗಿ ದಾಖಲೆ ನೀಡುವಂತೆ ದೂರು ದಾರರು ಮನವಿ ಸಲ್ಲಿಸಿದ್ದರು. ಈ ಸಂಬಂಧ 25,000 ಲಂಚ ನೀಡುವಂತೆ ಆರೋಪಿಗಳು ಕೇಳಿದ್ದರು.
ಈ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಲೋಕಾ ಯುಕ್ತಕ್ಕೆ ದೂರು ನೀಡಲಾಗಿತ್ತು. ಲಂಚ ನೀಡಲು ಇಷ್ಟವಿಲ್ಲದ ಲೋಕೇಶ್ ಅವರು ಪೋನ್ ಪೇ ಮೂಲಕ ಹಣ ಕಳುಹಿಸಿದ್ದರು.ಈ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಗೀತಾ ಮತ್ತು ಖಾಸಗಿ ವ್ಯಕ್ತಿ ರಿಚರ್ಡ್ ನನ್ನು ಲೋಕಾ ಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..