ಕಾಗವಾಡ (ಬೆಳಗಾವಿ ಜಿಲ್ಲೆ) –
ಶಾಲಾ ಆವರಣದಲ್ಲಿಯೇ ಶಿಕ್ಷಕರೊಬ್ಬರು ಕುಸಿದು ಬಿಧದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ದಲ್ಲಿ ನಡೆದಿದೆ.ತಾಲ್ಲೂಕಿನ ಮಂಗಸೂಳಿ ಗ್ರಾಮದ ಸರ್ಕಾರಿ ಎಂಆರ್ಎಂ ಕೆಪಿಎಸ್ ಪ್ರೌಢಶಾಲೆ ಆವರಣದಲ್ಲಿ ಈ ಒಂದು ಘಟನೆ ನಡೆದಿದ್ದು ಶಿಕ್ಷಕ ಭರತ ಶಿಂಧೆ (47) ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಾಯಬಾಗ ತಾಲ್ಲೂಕಿನ ಬಿರಡಿ ಗ್ರಾಮದ ಭರತ ಶಿಂಧೆ ಅವರಿಗೆ ಎದೆ ನೋವು ಕಾಣಿಸಿ, ಕುಸಿದು ಬಿದ್ದರು. ರಾಯಬಾಗ ತಾಲ್ಲೂಕಿನ ಬಿರಡಿ ಗ್ರಾಮದ ಭರತ ಶಿಂಧೆ ಅವರಿಗೆ ಎದೆ ನೋವು ಕಾಣಿಸಿ, ಕುಸಿದು ಬಿದ್ದರು ಸ್ಥಳದಲ್ಲಿ ಅವರಿಗೆ ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಿದರು. ಚಿಕಿತ್ಸೆಗೆಂದು ಮಹಾರಾಷ್ಟ್ರದ ಮೀರಜ್ಗೆ ಕರೆದೊಯ್ಯು ವಾಗ, ಅವರು ಮಾರ್ಗ ಮಧ್ಯೆ ಮೃತಪಟ್ಟರು ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಕಾಗವಾಡ…..