ಹುಬ್ಬಳ್ಳಿ –
ನುಡಿದಂತೆ ನಡೆದ ಕೆಜಿಪಿ ಗ್ರೂಪ್ ಶ್ರೀಗಂಧ ಶೇಟ್ – ಕೊಟ್ಟ ಭರವಸೆಯಂತೆ ಎರಡು ದಿನಗಳಲ್ಲಿ ಮೃತ ಬಾಲಕಿಯ ಕುಟುಂಬಕ್ಕೆ ಒಪ್ಪಿಗೆ ಪತ್ರ ನೀಡಿದ ಕೆಜಿಪಿ ಗ್ರೂಪ್…..ಶ್ರೀಗಂಧ ಶೇಟ್ ಸಾಮಾಜಿಕ ಕಾರ್ಯಕ್ಕೆ ಬೆನ್ನು ತಟ್ಟಿದ ಗಣೇಶ್ ಶೇಟ್
ಕೇವಲ ವ್ಯಾಪಾರ ವಹಿವಾಟು ಎಂದುಕೊಳ್ಳದೇ ಸಾಮಾಜಿಕ ಕಾರ್ಯಗಳೊಂದಿಗೆ ಸೇವೆಯನ್ನು ಮಾಡುತ್ತಿದೆ ಹುಬ್ಬಳ್ಳಿಯ ಕೆಜಿಪಿ ಗ್ರೂಪ್.ಹೌದು ತಾವು ಆಯಿತು ತಮ್ಮ ವ್ಯಾಪಾರ ವಹಿವಾಟು ಆಯಿತು ಎಂದುಕೊಂಡು ಇರದೇ ಏನಾದರೂ ಒಂದು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಬೇಕು ಜನರಿಗೆ ಒಂದು ಒಳ್ಳೇಯ ಸೇವೆಯನ್ನು ನಮ್ಮಿಂದ ನೀಡಬೇಕು ಎಂದುಕೊಂಡು ಗಣೇಶ ಶೇಟ್ ಅವರ ಮಾರ್ಗದರ್ಶನದಲ್ಲಿ ಗ್ರೂಪ್ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ಕಾರ್ಯವನ್ನು ಮಾಡುತ್ತಿದ್ದು ಇದಕ್ಕೆ ಮತ್ತೊಂದು ಸಾಕ್ಷಿ ಇತ್ತೀಚಿಗಷ್ಟೇ ನಗರದಲ್ಲಿ ಕೊಲೆಯಾದ ಐದು ವರ್ಷದ ಬಾಲಕಿಯ ಪ್ರಕರಣ.
ಬಿಹಾರ ಮೂಲದ ರಿತೇಶ್ ಕುಮಾರ್ ನು ಐದು ವರ್ಷದ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯವನ್ನು ಮಾಡಿ ಕೊಲೆಯನ್ನು ಮಾಡಿದ್ದನು.ಈ ಒಂದು ಘಟನೆಗೆ ಪ್ರತಿಯೊಬ್ಬರು ಬೇಸರವನ್ನು ವ್ಯಕ್ತಪಡಿಸಿದ್ದರು ಇನ್ನೂ ಇತ್ತ ಕೆಜಿಪಿ ಗ್ರೂಪ್ ನ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ಅವರು ಕೂಡಾ ಕಂಬನಿ ಮಿಡಿದು ಮೃತಪಟ್ಟ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು ಅಲ್ಲದೇ ಮೃತ ಬಾಲಕಿಯ ಸಹೋದರಿ ಅಂಗವಿಕಲೆಯಾಗಿದ್ದು ಅವಳ ವೈಧ್ಯಕೀಯ ಮತ್ತು ಶೈಕ್ಷಣಿಕ ಜವಾಬ್ದಾರಿಯನ್ನು ಕೂಡಾ ಹೊತ್ತು ಕೊಂಡಿದ್ದರು
ಈ ಒಂದು ಕುರಿತಂತೆ ಎರಡು ಮೂರು ದಿನಗಳ ಹಿಂದೆಯಷ್ಟೇ ಭರವಸೆಯನ್ನು ನೀಡಿದ್ದರು ಕೊಟ್ಟ ಮಾತನ್ನು ಸಧ್ಯ ಶ್ರೀಗಂಧ ಶೇಟ್ ಅವರು ಈಡೇರಿಸಿ ದ್ದಾರೆ.ಹೌದು ವಿದ್ಯಾಭ್ಯಾಸದ ಮತ್ತು ವೈಧ್ಯಕೀಯ ವೆಚ್ಚ ನೋಡಿಕೊಳ್ಳುವ ಕುರಿತಂತೆ ಒಪ್ಪಿಗೆಯ ಪತ್ರವನ್ನು ಮಾಡಿಸಿ ಕುಟುಂಬದವರಿಗೆ ನೀಡಿದ್ದಾರೆ.
ಮೃತ ಬಾಲಕಿಯ ತಂದೆ ತಾಯಿ ಯವರ ಸಮ್ಮುಖದ ಲ್ಲಿಯೇ ಬಾಲಕಿಗೆ ನೀಡಿ ಕೊಟ್ಟ ಮಾತನ್ನು ಈಡೇರಿಸಿ ದ್ದಾರೆ.ಗಣೇಶ ಶೇಟ್ ಮಾರ್ಗದರ್ಶನದಲ್ಲಿ ಶ್ರೀಗಂಧ ಶೇಟ್ ಅವರ ಸೂಚನೆಯಂತೆ ಗ್ರೂಪ್ ಪರವಾಗಿ ಅನುಪ ಕಮ್ಮಾರ,ಹರೀಶ್ ಅಂಗಡಿ,ಜೀವನ ಹಾವನೂರು,ಕೇದಾರ ಬುರೆ,ಆರ್ಯನ್ ಪೈಗಲ್, ಅಭಿಷೇಕ ಭಟ್ಟದ,ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದು ಕೆಜಿಪಿ ಗ್ರೂಪ್ ನ ಸಾಮಾಜಿಕ ಕಾರ್ಯಕ್ಕೆ ಸಾಕ್ಷಿಯಾದ್ರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..