ಹುಬ್ಬಳ್ಳಿ –
ಪಾಲಿಕೆಯ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಬರೆದ ಆಯುಕ್ತ ಡಾ ರುದ್ರೇಶ್ ಘಾಳಿ ಮತ್ತು CAO – ಆಯುಕ್ತರಿಗೆ,ಮುಖ್ಯಲೆಕ್ಕಾಧಿಕಾರಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದ ಶ್ರೀನಿವಾಸ ಬೆಳದಡಿ ಆಂಡ್ ಟೀಮ್…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಡಾ ರುದ್ರೇಶ ಘಾಳಿ ಬಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಗಳಾಗಿವೆ. ಈ ಹಿಂದೆ ಇದ್ದ ಎಲ್ಲಾ ವ್ಯವಸ್ಥೆಗೆ ಬ್ರೇಕ್ ಹಾಕಿರುವ ಇವರು ಆಡಳಿತ ಯಂತ್ರಕ್ಕೆ ಚುರುಕುಗೊಳಿಸಿ ಸಿಬ್ಬಂದಿಗಳು ಮೆಚ್ಚುವ ಆಡಳಿತ ವ್ಯವಸ್ಥೆಯನ್ನು ನೀಡುತ್ತಿದ್ದಾರೆ.ಇನ್ನೂ ಇತ್ತ ಪಾಲಿಕೆಗೆ ಮುಖ್ಯ ಲೆಕ್ಕಾಧಿಕಾರಿಯಾಗಿ ಶಂಕರನಂದ ಬನಶಂಕರಿ ಅವರು ಕೂಡಾ ಆಯುಕ್ತರಂತೆ ಅಧಿಕಾರದಲ್ಲಿ ವಿಶೇಷವಾಗಿ ಕಾರ್ಯವನ್ನು ಮಾಡುತ್ತಿದ್ದಾರೆ
ಹೌದು ಇದಕ್ಕೆ ಸಾಕ್ಷಿ ರಾಜ್ಯ ಸರ್ಕಾರ ಪಾಲಿಕೆಗೆ ನೀಡಬೇಕಾದ ಅನುದಾನವನ್ನು ತಾಂತ್ರಿಕ ಕಾರಣ ಗಳಿಂದಾಗಿ ನಿಲ್ಲಿಸಿದ್ರು ಕೂಡಾ ಆಯುಕ್ತರು ಮತ್ತು ಮುಖ್ಯ ಲೆಕ್ಕಾಧಿಕಾರಿ ಯವರು ಸೇರಿಕೊಂಡು ವೇತನ ವಿಲ್ಲದೇ ಸಮಸ್ಯೆಯನ್ನು ಅನುಭವಿಸುತ್ತಿದ್ದ ಪಾಲಿಕೆಯ ಸರ್ವ ಸಿಬ್ಬಂದಿಗಳಿಗೂ ಅಧಿಕಾರಿಗಳಿಗೆ ಮೂರು ತಿಂಗಳ ಸಂಬಳವನ್ನು ಖಾತೆಗೆ ಜಮಾ ಮಾಡಿಸಿ ಮೆಚ್ಚುಗೆಗೆ ಪಾತ್ರರಾದ್ರು
ಈ ಮೂಲಕ ಪಾಲಿಕೆಯ ಇತಿಹಾಸದಲ್ಲಿಯೇ ಸ್ವ ನಿಧಿ ಅನುದಾನದಿಂದ ವೇತನವನ್ನ ಮಾಡಿ ಸಿಬ್ಬಂದಿಗಳ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿ ದಾಖಲೆಯನ್ನು ಬರೆದರು.ಇತ್ತ ಪ್ರತಿ ತಿಂಗಳ ಸರಿಯಾಗಿ ಸಂಬಳ ಸಿಗದೇ ಪರದಾಡುತ್ತಿದ್ದ ಪಾಲಿಕೆಯ ಟಿಪ್ಪರ್ ಚಾಲಕರು ಸಂತೋಷಗೊಂಡಿದ್ದಾರೆ.ಪ್ರತಿ ದಿನ ಬೆಳಗಾದರೆ ಸಾಕು ಕಾಯಕವೇ ಕೈಲಾಸ ಎಂದುಕೊಂಡು ದುಡಿಯುತ್ತಿದ್ದ ಟಿಪ್ಪರ್ ಚಾಲಕರಿಗೆ ಪ್ರತಿ ತಿಂಗಳ ಸಂಬಳ ಆಗುವಂತೆ ಮಾಡಿದ್ದಾರೆ.ಸರ್ಕಾರಿ ನೌಕರರ ಹಾಗೇ ತಿಂಗಳಾಗುತ್ತಿ ದ್ದಂತೆ ಸಂಬಳವಾಗುವ ಹಾಗೇ ಮಾಡಿರುವ ವಿಚಾರ ತಿಳಿದುಕೊಂಡ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಟಿಪ್ಪರ್ ಚಾಲಕರು ಆಯುಕ್ತರಿಗೆ ಮತ್ತು ಮುಖ್ಯ ಲೆಕ್ಕಾಧಿಕಾರಿ ಯವರಿಗೆ ಸಿಹಿಯನ್ನು ತಿನ್ನಿಸಿ ಅಭಿನಂದನೆ ಸಲ್ಲಿಸಿದರು ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಇಂತಹದೊಂದು ಸಂತೋಷದ ಕ್ಷಣವನ್ನು ಆಯುಕ್ತ ಡಾ ರುದ್ರೇಶ ಘಾಳಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಶಂಕರನಂದ ಬನಶಂಕರಿ ಅವರು ಬರೆದಿದ್ದಾರೆ.
ಇನ್ನೂ ಈ ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿ ಮಂಜುನಾಥ ಅಬ್ಬಯ್ಯ,ಪಾಲಿಕೆಯ ಸದಸ್ಯರಾಗಿರುವ ಶ್ರೀನಿವಾಸ ಬೆಳದಡಿ,ಶಿವಾನಂದ ಮುತ್ತಣ್ಣನವರ, ಸೇರಿದಂತೆ ಟಿಪ್ಪರ್ ಚಾಲಕರ ಸಂಘದ ಮುಖಂಡರು ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..