ಹುಬ್ಬಳ್ಳಿ –
ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ಉದ್ಯೋಗ ಮೇಳಕ್ಕೆ ಹರಿದು ಬಂದ ಯುವ ಸಮೂಹ ಆರು ತಿಂಗಳಿಗೊಮ್ಮೆ ಉದ್ಯೋ ಮೇಳ ಘೋಷಣೆ ಮಾಡಿದ ಶ್ರೀಗಂಧ ಶೇಟ್
ಸರ್ಕಾರಗಳು ಜನಪ್ರತಿನಿಧಿಗಳು ಮಾಡಬೇಕಾದ ಕೆಲಸ ಕಾರ್ಯವನ್ನು ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಮಾಡುತ್ತಿದೆ ಎಂದು ಜಗದ್ಗುರು ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು. ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾ ಲಯದಲ್ಲಿ ಕೆಜೆಪಿ ಫೌಂಡೇಶನ್,ಜಗದ್ಗರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು
ಕಾಯಕವೇ ಕೈಲಾಸ ಎಂದಿರುವ ಶರಣರ ಮಾತಿನಂತೆ ತಂದೆಯ ತಕ್ಕಂತೆ ಶ್ರೀಗಂಧ ಶೇಟ್ ಇಂತಹ ಸಮಾಜ ಮುಖಿಯಾಗಿರುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು
ಇಂದು ನಿರುದ್ಯೋಗ ಸಮಸ್ಯೆ ಸಾಕಷ್ಟು ಇದೆ ಇದನ್ನು ಅರಿತುಕೊಂಡ ಶ್ರೀಗಂಧ ಶೇಟ್ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿದ್ದು ಶ್ಲಾಘನೀಯ ಮೇಲಿಂದ ಮೇಲೆ ಮೇಳಗಳು ನಡೆಯಲಿ ಉದ್ಯೋಗ ಕ್ಕಾಗಿ ಸುತ್ತಾಡುತ್ತಿರುವ ನಮ್ಮ ಯುವ ಸಮುದಾಯ ಹತ್ತಾರು ಕಂಪನಿಗಳಲ್ಲಿ ಸೇರಿಕೊಂಡು ಬದುಕು ಕಟ್ಟಿಕೊಳ್ಳಲಿ ಎಂದು ಶುಭ ಹಾರೈಸಿದರು.
ಇನ್ನೂ ಕೆಜಿಪಿ ಗ್ರೂಪ್ ಕೇವಲ ವ್ಯಾಪಾರ ವಹಿವಾಟು ಗಳಿಗೆ ಮಾತ್ರ ತನ್ನ ಕಾರ್ಯವನ್ನು ಸಿಮೀತವಾಗಿಟ್ಟು ಕೊಳ್ಳದೇ ಸಮಾಜಮುಖಿಯಾಗಿರುವ ಕಾರ್ಯ ಗಳೊಂದಿಗೆ ಇಂದು ಯುವ ಸಮುದಾಯಕ್ಕೆ ಬೇಕಾ ಗಿರುವ ಉದ್ಯೋಗ ಮೇಳದಂತಹ ಕಾರ್ಯಕ್ರಮ ಗಳನ್ನು ಮಾಡುತ್ತಾ ಒಳ್ಳೇಯ ಕೆಲಸಗಳನ್ನು ಮಾಡುತ್ತಿರುವುದು ಸಂತೋಷ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಸಾಧನಾ ಪೊಟೆ ಮಾತನಾಡಿ ನಮ್ಮ ಯುವ ಸಮುದಾಯಕ್ಕೆ ಇಂದು ದೊಡ್ಡ ಸಮಸ್ಯೆಯಾಗಿದ್ದು ನಿರುದ್ಯೋಗ ಸಮಸ್ಯೆ ಇದನ್ನು ಸಮಸ್ಯೆಯಾಗಿ ತಗೆದುಕೊಳ್ಳದೇ ನಮ್ಮಲ್ಲಿರುವ ಕೌಶಲ್ಯಗಳನ್ನು ಬಳಕೆ ಮಾಡಿಕೊಂಡ ಬೆಳೆದರೆ ಸಾಧಿಸಬಹುದು ಇದಕ್ಕೆ ನಮ್ಮ ಮುಂದೆ ಹತ್ತಾರು ಉದಾಹರಣೆಗಳಿವೆ ಎಂದರು.
ಇನ್ನೂ ಯಾವುದೇ ಉದ್ಯೋಗಕ್ಕೂ ಪ್ರಮಾಣ ಪತ್ರ ಅವಶ್ಯಕ್ಕಿಂತ ನಮ್ಮಲ್ಲಿರುವ ಕೌಶಲ್ಯಗಳು ತುಂಬಾ ಮಹತ್ವ ಇನ್ನು ಉಪಯೋಗ ಮಾಡಿಕೊಂಡು ಕೆಜಿಪಿ ಗ್ರೂಪ್ ಆಯೋಜನೆ ಮಾಡಿರುವ ಈ ಒಂದು ಉದ್ಯೋಗ ಮೇಳದ ಲಾಭವನ್ನು ಪಡೆಯಿರಿ ಎಂದು ಕರೆ ನೀಡಿದರು.ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಜಿಪಿ ಗ್ರೂಪ್ ಅಧ್ಯಕ್ಷ ಶ್ರೀಗಂಧ ಶೇಟ್ ಅವರು ಮಾತನಾಡಿ ಈವರೆಗೆ ನಮ್ಮ ಟೀಮ್ ನಿಂದ ಹತ್ತಾರು ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದ್ದು ಸಧ್ಯ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದ್ದೇವೆ
ಪ್ರತಿ ಆರು ತಿಂಗಳಿಗೊಮ್ಮೆ ಈ ಒಂದು ಮೇಳವನ್ನು ಆಯೋಜನೆ ಮಾಡಿ ಯುವ ಸಮುದಾಯಕ್ಕೆ ನೆರುವು ನೀಡುವ ಉದ್ದೇಶ ನಮ್ಮದಾಗಿದೆ ಎಂದರು.ವೇದಿಕೆಯ ಕಾರ್ಯಕ್ರಮದಲ್ಲಿ ಉದ್ಯೋಗ ಮೇಳಕ್ಕೆ ಕೈ ಜೋಡಿಸಿದ ವಿವಿಧ ಗಣ್ಯರನ್ನು ಕೆಜಿಪಿ ಗ್ರೂಪ್ ನಿಂದ ಸನ್ಮಾನಿಸಿ ಗೌರವಿಸಲಾಯಿತು.ಉದ್ಯೋಗ ಮೇಳದಲ್ಲಿ 100 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಲು ಉತ್ಸಾಹದಿಂದ ಪಾಲ್ಗೊಂಡು ಉದ್ಯೋಗ ಮೇಳದ ಲಾಭವನ್ನು ಪಡೆದುಕೊಂಡು ಯಶಸ್ಸಿಗೆ ಸಾಕ್ಷಿಯಾಗಿದ್ದು ಕಂಡು ಬಂದಿತು.
ವೇದಿಕೆಯ ಕಾರ್ಯಕ್ರಮದ ನಂತರ ಕಾಲೇಜ್ ಕ್ಯಾಂಪಸ್ ನಲ್ಲಿ ಉದ್ಯೋಗ ಅರೆಸಿ ಬಂದವರಿಗೆ ಕಂಪನಿಗಳಿಂದ ಸಂದರ್ಶನ ಕಾರ್ಯ ನಡೆಯಿತು. ಈ ಒಂದು ಸಂದರ್ಭದಲ್ಲಿ ಜಗದ್ಗುರು ಮೂರುಸಾವಿರಮ ಠದ ಮಹಾಸಂಸ್ಥಾನಮಠದ ಡಾ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಜಿ,ಶ್ರೀಮತಿ ಸಾಧನಾ ಪೊಟೆ,ಜಿಲ್ಲಾ ಉದ್ಯೋಗ ಅಧಿಕಾರಿ ಬಸವಂತ ಪಿಎನ್,ಕೆಜಿಪಿ ಗ್ರೂಪ್ ಅಧ್ಯಕ್ಷ ಶ್ರೀಗಂಧ ಶೇಟ್,ಎಸ್ ಎಲ್ ಪಾಟೀಲ್,ಶ್ರೀಮತಿ ಶಿಲ್ಪಾ ಸುಣಗಾರ,ಅನುಪ ಕಮ್ಮಾರ,ಹರೀಶ್ ಅಂಗಡಿ,ಜೀವನ್ ಹಾವನೂರು,ಎನ್ ಕೆ ಕಲಬುರ್ಗಿ,ವೆಂಕಟೇಶ್,ಧೃವ ನಾಯಕ, ನಾಗರಾಜ್,ವಿನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..