ಧಾರವಾಡ –
ಹೆತ್ತ ತಾಯಿಯ ಪುಣ್ಯ ಸ್ಮರಣೆಗಾಗಿ ಅನಾಥ ಮಕ್ಕಳಿಗೆ ಹೋಳಿಗೆ ಊಟ ಹಾಕಿಸಿದ ಪುಣ್ಯಾತ್ಮ ಪ್ರೀತೇಶ್ ಶೆಟ್ಟಿ – ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಅನ್ನದಾನ ದೊಂದಿಗೆ ಶಾಲಾ ಮಕ್ಕಳಿಗೆ ಪ ಅಮ್ಮನ 6ನೇ ವರ್ಷದ ಪುಣ್ಯಸ್ಮರಣೆ
ಹೌದು ಧಾರವಾಡದಲ್ಲಿ ಹೊಟೇಲ್ ನ ಉದ್ಯಮಿ ಯಾಗಿರುವ ಪ್ರೀತೇಶ್ ಶೆಟ್ಟಿ ಹೆತ್ತ ತಾಯಿಯ 6ನೇ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಅರ್ಥಪೂರ್ಣವಾದ ಕಾರ್ಯವನ್ನು ಮಾಡಿದ್ದಾರೆ.ಇವರ ತಾಯಿ 6 ವರ್ಷದ ಹಿಂದೆ ನಿಧನರಾಗಿದ್ದು ಪ್ರತಿ ವರ್ಷ ಅವರ ನೆನಪಿನಲ್ಲಿ ಒಂದಿಲ್ಲೊಂದು ವಿಶೇಷವಾದ ಕಾರ್ಯಗಳನ್ನು ಮಾಡುತ್ತಾ ನೆನೆಯುತ್ತಿರುವ ಇವರು ಈ ವರ್ಷ ಸುಶಿಲಾ ಶೆಟ್ಟಿಯವರ 6ನೇ ವರ್ಷದ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಎರಡು ಕಡೆಗಳಲ್ಲಿ ಅನ್ನದಾನವನ್ನು ಮಾಡುವ ಮೂಲಕ ಹೆತ್ತ ತಾಯಿಯನ್ನು ನೆನೆದಿದ್ದಾರೆ.
ಹೌದು 6ನೇ ವರ್ಷದ ಅಮ್ಮನ ನೆನಪಿಗಾಗಿ ನನ್ನ ದೇವರು ಎಂದುಕೊಂಡಿರುವ ಪ್ರೀತೇಶ್ ಶೆಟ್ಟಿ ಅಮ್ಮನ 6ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಅಮ್ಮನ ಹೆಸರಿನಲ್ಲಿ ಅನಾಥ ಆಶ್ರಮದಲ್ಲಿ ಅನ್ನದಾನವನ್ನು ಮಾಡಿದ್ದಾರೆ.ದಯಶಂಕರ್ ಗುರುಕುಲ ಅನಾಥಾಶ್ರಮ ಧಾರವಾಡ ಹಾಗೂ ದಯಸಾಗರ ವೃದ್ದಾಶ್ರಮ ಭದ್ರಾವತಿ ಶಿವಮೊಗ್ಗದಲ್ಲಿ ಅನ್ನದಾನವನ್ನು ಮಾಡಿದರು
ಅನ್ನದಾನದಲ್ಲಿ ಪ್ರಮುಖವಾಗಿ ಹೋಳಿಗೆ, ಫಲಾವ್,ಜಾಮೂನ್,ಗೋಬಿ ಇದರೊಂದಿಗೆ ಇನ್ನೂ ಹಲವಾರು ತಿಂಡಿ ತಿನಿಸುಗಳನ್ನು ನೀಡಿ ಅನಾಥ ಮಕ್ಕಳ ಹೊಟ್ಟೆ ತುಂಬಿಸಿದ್ರು ಇದರೊಂದಿಗೆ ಮಕ್ಕಳಿಗೆ ನೋಟ್ ಬುಕ್ ಪೆನ್ ಪೆನ್ಸಿಲ್ ಸೇರಿದಂತೆ ಹಲವಾರು ವಸ್ತುಗ ಳನ್ನು ನೀಡಿದರು ಇದರೊಂದಿಗೆ ಪ್ರೀತೇಶ್ ಶೆಟ್ಟಿಯವರು ಅಮ್ಮನ 6ನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಿದರು
ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಪ್ರೀತೇಶ್ ಶೆಟ್ಟಿಯವರೊಂದಿಗೆ ಅವರ ಪತ್ನಿ ಅಕ್ಷತಾ, ಸುಭಾಸ್,ಸಂತೋಷ,ಸಿದ್ದಾಂತ ಶೆಟ್ಟಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..