This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಶಿಕ್ಷಕರಿಗೆ ಶಾಲೆಯಲ್ಲಿ ಮೊಬೈಲ್ ಪೊನ್ ಯಾಕೆ ಬೇಕು ಗೊತ್ತಾ – ಶಾಲೆಯಲ್ಲಿ ಶಿಕ್ಷಕರಿಗೆ ಮೊಬೈಲ್ ಪೊನ್ ಯಾವುದಕ್ಕೆ ಉಪಯೋಗ ಆಗುತ್ತದೆ ನೋಡಿ…..

ಶಿಕ್ಷಕರಿಗೆ ಶಾಲೆಯಲ್ಲಿ ಮೊಬೈಲ್ ಪೊನ್ ಯಾಕೆ ಬೇಕು ಗೊತ್ತಾ – ಶಾಲೆಯಲ್ಲಿ ಶಿಕ್ಷಕರಿಗೆ ಮೊಬೈಲ್ ಪೊನ್ ಯಾವುದಕ್ಕೆ ಉಪಯೋಗ ಆಗುತ್ತದೆ ನೋಡಿ…..
WhatsApp Group Join Now
Telegram Group Join Now

ಬೆಂಗಳೂರು

ಶಾಲೆಯಲ್ಲಿ ಶಿಕ್ಷಕರಿಗೆ ಮೊಬೈಲ್ ಫೋನ್ ಅವಶ್ಯಕತೆ ಇದೆಯೇ ಎಂಬುದು ವಿವಾದಾಸ್ಪದವಾಗಿದೆ. ಕೆಲವು ಶಿಕ್ಷಕರು ತರಗತಿಗಳಲ್ಲಿ ಮತ್ತು ಶಾಲಾ ಆಡಳಿತದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ, ಆದರೆ ಇತರರು ಮೊಬೈಲ್ ಫೋನ್‌ಗಳನ್ನು ನಿಷೇಧಿಸುತ್ತಾರೆ. ಮೊಬೈಲ್ ಫೋನ್‌ಗಳು ಶಿಕ್ಷಕರಿಗೆ ಅನುಕೂಲಗಳನ್ನು ಒದಗಿಸುತ್ತವೆ, ಆದರೆ ಅವುಗಳು ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಗೊಂದಲವನ್ನುಂಟು ಮಾಡುವ ಸಾಧ್ಯತೆಯೂ ಇದೆ.

ಶಿಕ್ಷಕರು ಶಾಲೆ ಮತ್ತು ಪೋಷಕರ ನಡುವೆ ತ್ವರಿತವಾಗಿ ಸಂವಹನ ನಡೆಸಲು ಮೊಬೈಲ್ ಫೋನ್‌ಗಳನ್ನು ಬಳಸಬಹುದು.ಶಿಕ್ಷಕರು ಇಂಟರ್ನೆಟ್‌ನಿಂದ ಶೈಕ್ಷಣಿಕ ಮಾಹಿತಿಯನ್ನು ಪ್ರವೇಶಿಸಲು ಮತ್ತು ಡಿಜಿಟಲ್ ಬೋಧನಾ ಸಾಮಗ್ರಿಗಳನ್ನು ಬಳಸಲು ಮೊಬೈಲ್ ಫೋನ್‌ಗಳನ್ನು ಬಳಸಬಹುದು.

ಮೊಬೈಲ್ ಫೋನ್‌ಗಳು ತುರ್ತು ಸಂದರ್ಭಗಳಲ್ಲಿ ತ್ವರಿತ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ ಮೊಬೈಲ್ ಫೋನ್‌ಗಳು ಶಿಕ್ಷಕರ ಗಮನವನ್ನು ತರಗತಿಯಿಂದ ಬೇರೆಡೆಗೆ ಸೆಳೆಯಬಹುದು ಮತ್ತು ಪಾಠದ ಮೇಲೆ ಪರಿಣಾಮ ಬೀರಬಹುದು.ಶಿಕ್ಷಕರು ಮೊಬೈಲ್ ಫೋನ್‌ಗಳನ್ನು ದುರುಪಯೋಗಪಡಿಸಿಕೊಂಡರೆ ಅದು ಶಾಲೆಯಲ್ಲಿ ಶಿಸ್ತಿನ ಸಮಸ್ಯೆಗಳನ್ನು ಉಂಟು ಮಾಡಬಹುದು.

ಶಿಕ್ಷಕರು ಶಾಲಾ-ಸಂಬಂಧಿತ ಮಾಹಿತಿಯನ್ನು ಮೊಬೈಲ್ ಫೋನ್‌ಗಳಲ್ಲಿ ಹಂಚಿಕೊಳ್ಳುವುದರಿಂದ ಗೌಪ್ಯತೆ ಸಮಸ್ಯೆಗಳು ಉಂಟಾಗಬಹುದು.ಮೊಬೈಲ್ ಫೋನ್‌ ಗಳ ಬಳಕೆಯನ್ನು ಶಾಲೆಗಳು ಮತ್ತು ಶಿಕ್ಷಕರು ಎಚ್ಚರಿಕೆ ಯಿಂದ ನಿರ್ವಹಿಸಬೇಕು. ಕೆಲವು ಶಾಲೆಗಳು ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿ ಸಿವೆ,

ಆದರೆ ಇತರರು ತರಗತಿಯ ಹೊರಗೆ ಮತ್ತು ನಿರ್ದಿಷ್ಟ ಉದ್ದೇಶಗಳಿಗಾಗಿ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸುತ್ತವೆ. ಶಿಕ್ಷಕರು ತಮ್ಮ ಶಾಲೆಯ ನೀತಿಗಳಿಗೆ ಬದ್ಧರಾಗಿರಬೇಕು ಮತ್ತು ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು.

ಕೆಲ ಶಿಕ್ಷಕರ ವರ್ತನೆಯಿಂದ ಹಳ್ಳಿಗಾಡಿನ ಪ್ರದೇಶಗಳಲ್ಲಿ ಒಂದರಿಂದ ಐದು ಆರರಿಂದ 10 ವಿದ್ಯಾರ್ಥಿಗಳಿಗೆ ಸರಿಯಾದ ರೀತಿ ಪಾಠ ಪ್ರವಚನ ಮಾಡದೆ ಮೊಬೈಲಲ್ಲಿ ಕಾಲಾರಣ ಮಾಡಿಕೊಂಡು ಅವರ ವೈಯಕ್ತಿಕ ಕೆಲಸ ಗಳನ್ನು ಫೋನಿನಲ್ಲಿ ಮುಗಿಸಿಕೊಂಡು ಹಣದ ವಿವರ ಚೀಟಿ ವಿವರ ಹೀಗೆ ಶಿಕ್ಷಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಶೋಭೆ ತರುವುದಿಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಟ್ಸಪ್ ಚಾಟ್ ಮಾಡುವುದರ ಮುಖಾಂತರ ಶಿಕ್ಷಕರ ವೃತ್ತಿಗೆ ಅವಮಾನ ಮಾಡುತ್ತಿರುವುದು ಖಂಡನೀಯ ಕೆಲ ಶಿಕ್ಷಕರನ್ನು ನೋಡಿದರೆ ಇವರ ಉದ್ದೇಶ ಮಕ್ಕಳಿಗೆ ಬೋಧನೆ ಮಾಡಲು ಹೋಗುವುದಿಲ್ಲ ಸಂಬಳದ ಆಸೆಗೆ ಕೆಲಸಕ್ಕೆ ಹೋಗುವುದು ಅವರ ಹುಟ್ಟುಗುಣ ಆಗಿದೆ ಕೆಲ ಶಿಕ್ಷಕರ ವರ್ತನೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುತ್ತಿದ್ದಾರೆ

ಶಾಲಾ ಅವಧಿಯಲ್ಲಿ ಮೊಬೈಲ್‌ ಬಳಸುವ ಕೆಲ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ತೆಗೆದು ಕೋಳ್ಳಬೇಕು”ಮೊಬೈಲ್‌ ಬಳಕೆಗೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅವರೂ ಬೋಧನಾ ಕಾರ್ಯದ ಅವಧಿಯಲ್ಲಿ ಮೊಬೈಲ್‌ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಶಾಲೆಗಳಲ್ಲಿ ಮೊಬೈಲ್‌ ಬಳಕೆ ಅನಿವಾರ್ಯ ಆಗಿತ್ತು
ಆದರೂ ಶಾಲೆಗಳಲ್ಲಿ ಮೊಬೈಲ್ ಬಳಕೆ ಅತ್ಯಗತ್ಯ. ಹೀಗಾಗಿ, ಕೆಲವು ಶಿಕ್ಷಕರು ಮಾಡುವ ತ‍‌ಪ್ಪಿನಿಂದ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ ಆಗಬಾರದು. ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಶಿಕ್ಷಕರು ಮೊಬೈಲ್‌ ಬಳಕೆಯನ್ನು ದುರುಪಯೋಗ ಮಾಡಿಕೊಳ್ಳದೆ, ಅದರ ಮೂಲಕ ಶಾಲಾ ವೇಳೆಯಲ್ಲಿ ಮಕ್ಕಳ ಭವಿಷ್ಯದ ಕಡೆ ಹೆಜ್ಜೆ ಇಡಬೇಕು

ಶಾಲೆಗಳಲ್ಲಿ ಪ್ರೌಢಶಾಲೆಯಲ್ಲಿ ಪ್ರಥಮ ದ್ವಿತೀಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಧೀರ್ಘ ಚರ್ಚೆ ಮಾಡಿ ಮುಖ್ಯ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರು ಪ್ರಿನ್ಸಿಪಾಲ್ ರಿಗೆ ಮಾತ್ರ ಅವಕಾಶ ಮಾಡಿಕೋಡಬೇಕು ಶಿಕ್ಷಣ ಸಚಿವರು ಗಮನಹರಿಸುವವರೇ ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk