ಚಿಕ್ಕಬಳ್ಳಾಪುರ –
ಪಾಠ ಮಾಡುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ ಶಾಲೆಯಲ್ಲೇ ಟೀಚರ್ ಸಾವು ಹೌದು ಇಂತಹ ದೊಂದು ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಪಾಠ ಮಾಡುತ್ತಿರುವಾಗಲೇ ಶಿಕ್ಷಕರೊಬ್ಬರು ಸಾವನ್ನಪ್ಪಿ ರುವ ಪ್ರಕರಣ ಬೆಳಕಿಗೆ ಬಂದಿದೆ.ಚಿಕ್ಕಬಳ್ಳಾಪುರದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತರನ್ನು ಟಿಕೆ ಮಂಜುನಾಥ್ (50) ಎಂದು ಗುರುತಿಸ ಲಾಗಿದೆ.
ಟಿ.ಕೆ ಮಂಜುನಾಥ್ ಕುರುಪಲ್ಲಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠ ಶಾಲೆಯ ಶಿಕ್ಷಕರಾಗಿದ್ದರು. ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿಯ ಕುರುಪಲ್ಲಿ ಗ್ರಾಮದಲ್ಲಿರೋ ಈ ಶಾಲೆಯಲ್ಲಿ ಇವತ್ತು ಮಂಜುನಾಥ್ ಪಾಠ ಮಾಡುತ್ತಿದ್ದರು. ಆಗ ಶಾಲೆಯಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಮಾರ್ಗಮಧ್ಯದಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಅತಿಯಾದ ಬೊಜ್ಜು, ಮಾಂಸ ಸೇವನೆ, ಮತ್ತು ಮದ್ಯಪಾನದಿಂದ ಸಾವು ಸಂಭವಿಸಿರುವ ಬಗ್ಗೆ ಅನುಮಾನವಿದೆ. ರೆಡ್ ಮೀಟ್ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಇದೆ. ಅನ್ ಕಂಟ್ರೋಲ್ಡ್ ಕೊಲೆಸ್ಟ್ರಾಲ್ನಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹೃದಯಾಘಾತಕ್ಕೆ ಕೊವಿಡ್ -19 ಲಸಿಕೆ ಕಾರಣ ಅಲ್ಲ ಎಂದು ಜಯದೇವ ತಜ್ಞರು ವರದಿ ನೀಡಿದ್ದಾರೆ.
ಅತಿಯಾದ ತೂಕ, ಧೂಮಪಾನ ಮತ್ತು ಪಾಸ್ಟ್ ಫುಡ್ ಆಹಾರ ಸೇವನೆಯಿಂದ ಸಡನ್ ಡೆತ್ ಸಂಭವಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಅನುವಂಶೀಯತೆ ಹೃದಯಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ಹೇಳಿದೆ.
ತಜ್ಞರು ಹೃದಯಾಘಾತಕ್ಕೆ ಮುಖ್ಯ ಕಾರಣಗಳನ್ನ ಪಟ್ಟಿ ಮಾಡಿ ತಿಳಿಸಿದ್ದಾರೆ. ಅತಿಯಾದ ತೂಕ, ರೆಡ್ ಮೀಟ್, ಮಧ್ಯಪಾನ, ಧೂಮಪಾನ ಮತ್ತು ಪಾಸ್ಟ್ ಫುಡ್ ಸೇವನೆ ಹೆಚ್ಚುತ್ತಿರೋದೆ ಹೃದಯಾಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಬಳ್ಳಾಪುರ…..