ಧಾರವಾಡ –
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಧಾರವಾಡದ ನೂತನ ಅಪರ ಆಯುಕ್ತರಿಗೆ ಹಾಗೂ DDPI ಅವರಿಗೆ ಸ್ವಾಗತ ಹಾಗೂ ಸನ್ಮಾನ ಹೌದು
ದಕ್ಷ, ಪ್ರಾಮಾಣಿಕ, ಸೃಜನಶೀಲ ಅಧಿಕಾರಿಗಳು, ಧಾರವಾಡ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆಯ ನೂತನ ಅಪರ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಈಶ್ವರ ಉಳ್ಳಾಗಡ್ಡಿ ಹಾಗೂ ಅಪರ ಆಯುಕ್ತರ ಕಛೇರಿಯ ನೂತನ DDPI ಯಾಗಿ ಅಧಿಕಾರ ಸ್ವೀಕರಿಸಿರುವ ಗಿರೀಶ್ ಪದಕಿ ರವರನ್ನು
ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ, ಮತ್ತು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ.(ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ಸ್ವಾಗತಿಸಿ ಸನ್ಮಾನಿ ಸಲಾಯಿತು.
ಈಶ್ವರ ಉಳ್ಳಾಗಡ್ಡಿರವರು ಈ ಮೊದಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ, ಕಸ ಸಂಗ್ರಹಣೆ, ಕುಡಿಯುವ ನೀರು, ಶಾಲಾ ಸಮಸ್ಯೆಗೆ ಪರಿಹಾರ, ಪಾಲಿಕೆಯ ಆದಾಯ ಹೆಚ್ಚಳ ದಂತಹ ಹಲವಾರು ಕಾರ್ಯಗಳನ್ನು ಮಾಡಿ ಹೆಸರು ಗಳಿಸಿದ್ದರು. ಅಲ್ಲದೆ ಅವರು ಆಡಳಿತಶೀಲ, ಜನಸಹಾಯಕ ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಜನತೆಗೆ ಪೂರಕ ಸೇವೆ ನೀಡಿ, ತ್ವರಿತ ಪರಿಹಾರ ಒದಗಿಸುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.
ಅಂತೆಯೇ ಅಪರ ಆಯುಕ್ತರ ಕಚೇರಿಯ ನೂತನ ಡಿಡಿಪಿಐ ರವರಾದ ಗಿರೀಶ್ ಪದಕಿ ರವರು
ಕರ್ನಾಟಕದ ಶಿಕ್ಷಣ ಇಲಾಖೆ ಸೇವೆಯ ಪುರಸ್ಕೃತ ಅಧಿಕಾರಿಗಳಾಗಿ, ಇಲಾಖೆಯ NTSE, NMMS
ಹಲವು ಶೈಕ್ಷಣಿಕ ಕಾರ್ಯಕ್ರಮ ನಿರ್ವಹಣೆ ಮುಂತಾದ ಪರೀಕ್ಷಾ ಪೂರ್ವ ತರಬೇತಿಗಳ ಸಂಚಾಲಕರಾಗಿ ಸಹಕಾರ ನೀಡುತ್ತಾ, ಇಲಾಖೆಯ ಜವಾಬ್ದಾರಿಗಳ ಜೊತೆ ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸೇವೆ ಸಲ್ಲಿಸುತ್ತಿ ದ್ದಾರೆ.
ಶಾಲಾ ಮಕ್ಕಳ ಹಾಗೂ ಕ್ರೀಡಾ ಪ್ರತಿಭೆಗಳನ್ನು ಗುರ್ತಿಸಿ ಬೆಳೆಸುವಂತಹ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿ ಇಂದಿಗೂ ಮುನ್ನೆಡೆಸುತ್ತಿದ್ದಾರೆ.ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ).ನವದೆಹಲಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ. (ರಿ) ರಾಜ್ಯ ಘಟಕ ಧಾರವಾಡ ಇದರ ರಾಜ್ಯಾದ್ಯಕ್ಷರಾದ ಡಾ. ಲತಾ ಎಸ್ ಮುಳ್ಳೂರ್ ರವರು ಜಿಲ್ಲಾ ಘಟಕದ ಸಂಘದ ಪದಾಧಿಕಾರಿಗಳ ಜೊತೆಗೂಡಿ
ಧಾರವಾಡ ವಿಭಾಗದ ನೂತನ ಅಪರ ಆಯುಕ್ತರು ಹಾಗೂ ನೂತನ ಡಿಡಿಪಿಐ ರವರನ್ನೂ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಠೋಡ್. ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ಪುಷ್ಪಖನ್ನಿ ನಾಯ್ಕರ್. ಶ್ರೀಮತಿ. ಕೆ ಸುಲೋಚನಾ ಮುದಲಿಯಾರ ಅಧ್ಯಕ್ಷರು. ಹುಬ್ಬಳ್ಳಿ ಶಹರ ಧಾರವಾಡ ಶಹರದ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ರಜಿಯಾ ದಿಲಶಾದ್ ಶ್ರೀಮತಿ ಶೈನಾಬಿ. ಸಂಕೇಶ್ವರ. ಉಪಾಧ್ಯಕ್ಷರು. ಶ್ರೀಮತಿ ಲಕ್ಷ್ಮೀ. ಎಸ್. ಪಾಟೀಲ್. ಹಾಜರಿದ್ದರು.
ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ.