ಧಾರವಾಡ –
ದಾಖಲೆಯಲ್ಲಿ ಒಂದು ವಸೂಲಿ ಮಾಡುತ್ತಿರುವುದು ಮತ್ತೊಂದು – NWKRTC ಹೆಸರಿನಲ್ಲಿ ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿ ಬಾಡಿಗೆ ವಸೂಲಿ…..ಹೇಳೊರಿಲ್ಲ ಕೇಳೊರಿಲ್ಲ…..
ಇದೊಂದು ವಾಯವ್ಯ ಸಾರಿಗೆ ಸಂಸ್ಥೆಯ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿರುವ ಚಿತ್ರಣ. ಸಾಮಾನ್ಯ. ವಾಗಿ ಯಾವುದನ್ನಾದರೂ ಬಾಡಿಗೆ ತಗೆದುಕೊಳ್ಳಬೇಕು ಕೊಡಬೇಕು ಎಂದರೆ ಅದಕ್ಕೊಂದು ನೀತಿ ನಿಯಮ ಗಳಿವೆ ಆದರೆ ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಇಲಾಖೆಯೇ ನೀತಿ ನಿಮಯಗಳನ್ನು ಗಾಳಿಗೆ ತೂರಿ ಬಾಡಿಗೆಯನ್ನು ನೀಡಿದೆ ಅಥವಾ ಬಾಡಿಗೆ ತಗೆದು ಕೊಂಡವರು ನಿಯಮಗಳನ್ನು ಮೀರಿ ಬೇರೆಯವರಿಗೆ ಬೇಕಾಬಿಟ್ಟಿಯಾಗಿ ಬಾಡಿಗೆಯನ್ನು ನೀಡಿದ್ದಾರೆ
ಅರ್ಥವಾಗುತ್ತಿಲ್ಲ ಒಂದು ಕಡೆ ಸಿಕ್ಕಾಪಟ್ಟಿ ಸ್ಪರ್ಧೆ ಇನ್ನೊಂದೆಡೆ ಇದರ ನಡುವೆ ಇದನ್ನೇ ಬಂಡವಾಳ ಮಾಡಿಕೊಂಡ ಮೂಲ ಮಾಲೀಕರು ತಾವು ಅಂಗಡಿ ಗಳನ್ನು ನಡೆಸಲಾಗದೇ ಬೇರೆಯವರಿಗೆ ಬಾಡಿಗೆಯನ್ನು ನೀಡಿದ್ದಾರೆ ಪ್ರತಿ ದಿನಕ್ಕೆ 5 ರಿಂದ 6 ಸಾವಿರ ರೂಪಾಯಿ ಗಳನ್ನು ನಿಗದಿ ಮಾಡಿ ಕೊಟ್ಟಿದ್ದಾರೆ.ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಬಾಡಿಗೆಯನ್ನು ತಗೆದುಕೊಂಡವರು ಕಷ್ಟಪಟ್ಟು ದುಡಿಯುತ್ತಿದ್ದಾರೆ.
ಇಲಾಖೆಗೆ ಮೂಲ ಮಾಲೀಕರು ಒಂದು ಹಣವನ್ನು ಕೋಡುತ್ತಿದ್ದರೆ ಇತ್ತ ಬಾಡಿಗೆದಾರರಿಂದ ಹೆಚ್ಚು ಹಣವನ್ನು ತಗೆದುಕೊಳ್ಳುತ್ತಿದ್ದಾರೆ ದುಬಾರಿಯಾದ ಈ ಒಂದು ಬಾಡಿಗೆ ವಸೂಲಿ ದಂಧೆ ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಜೋರಾಗಿದ್ದು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡಾ ಕಂಡರು ಕಾಣದಂತೆ ಇದ್ದಾರೆ.
ಬೇಕಾಬಿಟ್ಟಿ ಬಾಡಿಗೆ ವಸೂಲಿಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳು ಕಡಿವಾಣ ಹಾಕಿ ಕಷ್ಟಪಟ್ಟ ದುಡಿದು ದುಬಾರಿ ಬಾಡಿಗೆಯನ್ನು ಕೊಡುತ್ತಿರುವ ವ್ಯಾಪಾರಸ್ಥರ ಪರ ನಿಲ್ಲುತ್ತಾರೆಯಾ ಅಥವಾ ಕೈಬಿಸಿ ಮಾಡುವವರ ಜೊತೆ ಇರುತ್ತಾರೆಯಾ ಎಂಬೊದನ್ನು ಕಾದು ನೋಡ ಬೇಕಿದೆ.ಇನ್ನೂ ಈ ಒಂದು ವಸೂಲಿ ದಂಧೆಯ ನಿರಂತರ ವರದಿಗಳು ಮುಂದುವರೆಯಲಿದ್ದು ನಿರೀಕ್ಷಿಸಿ…..
ಸುದ್ದಿ ಸಂತೆ ನ್ಯೂಸ್ ಧಾರವಾಡ…..