ಧಾರವಾಡ –
ಸಿಕ್ಕ ಸಿಕ್ಕಂಗ ತಿಂದು ಸಾಲ ಮಾಡಿ ಕೈ ಸಿಗದ ಚಿಗರಿ ಬಸ್ ಚಾಲಕ – ಪೊನ್ ಮಾಡಿದ್ರು ಹೇಳಿದ್ರು ಬಾರದ ಆ ಚಾಲಕ…..ಅನ್ನ ಹಾಕಿದ ಬಡವರ ಡಬ್ಬಿ ಮೇಲೆ ಹೀಗ್ಯೊಕೊ…..
ಇದೊಂದು ಅನ್ನ ಹಾಕಿದ ಮನೆಗೆ ದ್ರೋಹ ಮಾಡಿದ ಘಟನೆ ಹೌದು ಸಾಮಾನ್ಯವಾಗಿ ಯಾವುದಾದರೂ ಹೊಟೇಲ್ ಗೆ ಹೊದ್ರೆ ಸಾಕು ದುಬಾರಿಯಾದ ತಿಂಡಿ ತಿನಿಸುಗಳ ನಡುವೆ ಧಾರವಾಡದ ಹೊಸ ಬಸ್ ನಿಲ್ದಾಣದ ಮುಂದೆ ಡಬ್ಬಿ ಅಂಗಡಿ ಚಂದ್ರು ಸಾರಿಗೆ ಇಲಾಖೆಯ ಚಾಲಕರಿಗೆ ನಿರ್ವಾಹಕರಿಗೆ ಅಚ್ಚುಮೆಚ್ಚಾಗಿ ದ್ದಾರೆ.ಸಾರಿಗೆ ಇಲಾಖೆಯ ಚಾಲಕರಿಗೆ ನಿರ್ವಾಹಕರಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಉಪಹಾರವನ್ನು ನೀಡುತ್ತಾರೆ.
50 ರೂಪಾಯಿ ಕೊಟ್ಟರೆ ಸಾಕು ಎರಡು ಇಡ್ಲಿ, ವಡಾ,ಫಲಾವ್ ಹೀಗೆ ಮೂರು ವಸ್ತುಗಳನ್ನು ಕಡಿಮೆ ದರದಲ್ಲಿ ನೀಡಿ ಹೊಟ್ಟೆ ತುಂಬಿಸುತ್ತಾರೆ.ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ಚಾಲಕರು ನಿರ್ವಾಹಕರು ಇಲ್ಲಿಗೆ ಬರುತ್ತಾರೆ ಹೀಗೆ ಬಂದವರಲ್ಲಿ ಕೆಲವರು ತಿಂಗಳಿಗೊಮ್ಮೆ ಹಣವನ್ನು ಪಾವತಿ ಮಾಡುತ್ತಾರೆ ಇನ್ನೂ ಚಂದ್ರ ನಾಳೆ ಕೊಡುತ್ತೇನೆ ಅಂತಾ ಹೇಳಿದ್ರೆ ಸಾಕು ಹಿಂದೆ ಮುಂದೆ ನೋಡದೆ ಸರಿ ಎನ್ನುತ್ತಾನೆ.
ಇದರ ನಡುವೆ ಇಲ್ಲೊಬ್ಬ ಚಾಲಕ ಮಹಾಶಯ ಹೊಟ್ಟೆ ತುಂಬಾ ತಿಂದು ತೇಗಿ ನಾಲ್ಕೈದು ಸಾವಿರ ರೂಪಾಯಿ ಉದ್ರಿ ಮಾಡಿ ಹಣವನ್ನು ಕೊಡದೇ ಕೈ ಕೊಟ್ಟಿದ್ದಾನೆ. ಮೊದಲೇ ಕಡಿಮೆ ದರದಲ್ಲಿ ಅಲ್ಪ ಸ್ವಲ್ಪ ಲಾಭವನ್ನು ತಗೆದುಕೊಳ್ಳದೇ ಬಂದವರಿಗೆ ಹೊಟ್ಟೆ ತುಂಬಾ ಉಪಹಾರವನ್ನು ನೀಡುವ ಈ ಒಂದು ಡಬ್ಬಿ ಅಂಗಡಿ ಯಲ್ಲಿ ಆ ಚಾಲಕ ಸಿಕ್ಕ ಸಿಕ್ಕಂಗ ತಿಂದು ಮರಳಿ ಬಾರದೇ ಕೈಕೊಟ್ಟಿದ್ದಾನೆ.
ನಾವು ಬಡವರು ತುಂಬಾ ಕಷ್ಟದಲ್ಲಿ ಇದ್ದೇವೆ ಎಂದು ಕೊಂಡು ಹೊಟೇಲ್ ಮಾಲೀಕ ಚಂದ್ರು ಆ ಮಹಾಶಯ ನಿಗೆ ಪೊನ್ ಮಾಡಿದ್ರೆ ರಿಸೀವ್ ಮಾಡುತ್ತಿಲ್ಲ ನೋಡುತ್ತಿಲ್ಲ ಸುಳಿಯುತ್ತಿಲ್ಲ ಅನ್ನ ಹಾಕಿದ ಬಡವರ ಡಬ್ಬಿ ಹೊಟೇಲ್ ನಲ್ಲಿ ಸಾಲ ಮಾಡಿದ ಮಹಾಶಯ ಯಾರು ಅವನ ಇನ್ನಷ್ಟು ಹೆಜ್ಜೆ ಗುರುತುಗಳ ಬಗ್ಗೆ ನಿರೀಕ್ಷಿಸಿ…..
ಮುಂದಿನ ವರದಿ ಬರುವ ಮುನ್ನವೇ ಮಹಾಶಯ ತಿಳಿದುಕೊಂಡು ಹೊಟ್ಟೆ ತುಂಬಾ ತಿಂದು ತೇಗಿದ ಬಾಕಿ ಹಣ ಪಾವತಿ ಮಾಡಿದ್ರೆ ಸರಿ ಇಲ್ಲವಾದರೆ ಸ್ಪೋಟಕ ಮಾಹಿತಿ ನಿಮ್ಮ ಮುಂದೆ……
ಸುದ್ದಿ ಸಂತೆ ನ್ಯೂಸ್ ಧಾರವಾಡ…..