ಧಾರವಾಡ –
ದಾಖಲೆಯಲ್ಲಿ 30 ಸಾವಿರ ವಸೂಲಿ ಮಾಡುತ್ತಿರುವುದು ಎರಡೂವರೆ ಲಕ್ಷ – ಧಾರವಾಡ ಹೊಸ ಬಸ್ ನಿಲ್ದಾಣ ದಲ್ಲಿ ಬೇಕಾಬಿಟ್ಟಿ ಬಾಡಿಗೆ ವಸೂಲಿ…..ಅವನಿಂದಲೇ ಎಲ್ಲವೂ…..ನಿರೀಕ್ಷಿಸಿ…..
ಇದೊಂದು ವಾಯವ್ಯ ಸಾರಿಗೆ ಸಂಸ್ಥೆಯ ಹೆಸರಿನಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಹಗರು ದರೋಡೆ ಮಾಡುತ್ತಿರುವ ವಿಚಾರ.ಹೌದು ಹೊಸ ಬಸ್ ನಿಲ್ದಾಣದಲ್ಲಿ ಹೇಳೊದು ಒಂದು ಮಾಡೊದು ಇನ್ನೊಂದು ಎನ್ನೊದಕ್ಕೆ ಇಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆ ವಿಚಾರ.ವ್ಯಾಪಾರ ವಹಿವಾಟಿನೊಂದಿಗೆ ಕೆಲವರಿಗೆ ಉದ್ಯೋಗ ಮಾಡಲು ಅನುಕೂಲವಾ ಗಲೆಂದು ಇಲಾಖೆಯವರು ಮಳಿಗೆಗಳನ್ನು ಆರಂಭ ಮಾಡಿದ್ದಾರೆ.
ಇದೇನು ಸರಿಯಾದ ವಿಚಾರ ಆದರೆ ಇಲ್ಲಿ ಆಗುತ್ತಿರು ವುದು ಮಾತ್ರ ಬೇರೆ.ಅಂಗಡಿಗಳನ್ನು ಬಾಡಿಗೆ ತಗೆದು ಕೊಂಡಿರುವವರು ಇಲಾಖೆಗೆ ನಿಗದಿ ಮಾಡಿರುವ ಬಾಡಿಗೆಯನ್ನು ಕಟ್ಟುತ್ತಾರೆ ಆದರೆ ವಸೂಲಿ ಮಾಡುತ್ತಿ ರುವುದು ಮಾತ್ರ ಹತ್ತರಷ್ಟು ದುಪ್ಪಟ್ಟು ಹಣ. ಕಟ್ಟುತ್ತಿರುವ ಬಾಡಿಗೆಯ ಹಣದಕ್ಕಿಂತ ಎರಡು ಪಟ್ಟು ಆದರೆ ಸರಿ ಅದನ್ನು ಬಿಟ್ಟು ನಾಲ್ಕೈದು ಪ್ರಮಾಣದಲ್ಲಿ ಹೆಚ್ಚಿನ ಹಣವನ್ನು ತಗೆದುಕೊಳ್ಳುತ್ತಿದ್ದು ಇದರಿಂದಲೇ
ಇಲ್ಲಿನ ವ್ಯಾಪಾರಿಗಳು ಬೇಸತ್ತಿದ್ದು ಇದಕ್ಕೆ ತಾಜಾ ಸಾಕ್ಷಿಯಾಗಿ ನಮ್ಮ ಮುಂದೆ ಕಂಡು ಬರುತ್ತಿರುವುದು ಸಾಯಿ ಹೊಟೇಲ್.ಸಧ್ಯ ಈ ಒಂದು ಹೊಟೇಲ್ ಆರಂಭವಾಗಿದ್ದು ಹೊಟೇಲ್ ಸೇರಿದಂತೆ ಕೆಲವೊಂ ದಿಷ್ಟು ಮಳಿಗೆಗಳನ್ನು ಲಾಡ್ಜ್ ನ್ನು ವ್ಯಕ್ತಿಯೊಬ್ಬರು ಗುತ್ತಿಗೆ ಪಡೆದುಕೊಂಡು ಬೇರೆ ಬೇರೆ ಮಾಡಿ ಬಾಡಿಗೆ ರೂಪದಲ್ಲಿ ನೀಡಿದ್ದಾರೆ.
ಇದರಲ್ಲಿ ಹೊಟೇಲ್ ಕೂಡಾ ಒಂದಾಗಿದ್ದು ಅಗ್ರಿಮೆಂಟ್ ನಲ್ಲಿ ಈ ಒಂದು ಹೊಟೇಲ್ ಬಾಡಿಗೆ ಯನ್ನು 30 ಸಾವಿರ ರೂಪಾಯಿಗೆ ನೀಡಲಾಗಿದ್ದು ಆದರೆ ಸಧ್ಯ ಎರಡೂವರೆ ಲಕ್ಷ ವಸೂಲಿ ಮಾಡಲಾಗುತ್ತಿದೆ.ಉತ್ಸಾಹದಲ್ಲಿ ಆರಂಭ ದಲ್ಲಿ ಹೇಳಿದಷ್ಟು ಬಾಡಿಗೆ ಕೊಟ್ಟು ಆರಂಭ ಮಾಡಿರುವ ಸಾಯಿ ಹೊಟೇಲ್ ಮಾಲಕರು ಹೆಚ್ಚಿನ ಬಾಡಿಗೆಯಿಂದ ಬೇಸತ್ತಿದ್ದು ಟೆಂಡರ್ ತೆಗೆದುಕೊಂಡಿರುವ ಆ ಮಹಾಶಯ ಬೇಕಾಬಿಟ್ಟಿ ಬಾಡಿಗೆ ಫೀಕ್ಸ್ ಮಾಡಿ ವಸೂಲಿ ಮಾಡ್ತಾ ಇದ್ದಾನೆ
ಹೇಳೊರಿಲ್ಲ ಕೇಳೊರಿಲ್ಲ ಎಂಬ ಪರಿಸ್ಥಿತಿ ಯ ನಡುವೆ ಇನ್ನಾದರೂ ಇಲಾಖೆಯ ಅಧಿಕಾರಿಗಳು ಇತ್ತ ನೋಡಿ ಬೇಕಾಬಿಟ್ಟಿಯಾಗಿ ಬಾಡಿಗೆಯನ್ನು ವಸೂಲಿ ಮಾಡುತ್ತಿ ರುವವರಿಗೆ ಕಡಿವಾಣ ಹಾಕುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..