ಧಾರವಾಡ –
ಧಾರವಾಡ ಹೊಸ್ ಬಸ್ ನಿಲ್ದಾಣದಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಬಾಡಿಗೆ – ಬಾಡಿಗೆ ನೀಡುವಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಾಡಿಗೆ ವಸೂಲಿ…..ಮೌನವಾಗಿದ್ದಾರೆ ಇಲಾಖೆಯ ಅಧಿಕಾರಿಗಳು…..ಮುಂದುವರೆಯುವುದು
ಸಾಮಾನ್ಯವಾಗಿ ಸರ್ಕಾರಿ ಸ್ಥಳದಲ್ಲಿ ವಾಣಿಜ್ಯ ಬಳಕೆಗೆ ಬಾಡಿಗೆ ನೀಡುವ ವಿಚಾರದಲ್ಲಿ ಸರ್ಕಾರದ ನಿಮಯ ಗಳು ಇವೆ.ಇಷ್ಟು ಸ್ಥಳಕ್ಕೇ ಇಷ್ಟೇ ದರ ನಿಗದಿ ಮಾಡಬೇಕು ಕೊಡಬೇಕು ಎಂಬ ನಿಮಯಗಳು ಇವೆ.ಆದರೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಸರ್ಕಾರದ ನಿಮಯಗಳನ್ನು ಸೂಚನೆಗಳನ್ನು ಗಾಳಿಗೆ ತೂರಿ ಬಾಡಿಗೆ ನೀಡಲಾಗಿದೆ.
ಹೌದು ಇಧಕ್ಕೆ ಸಾಕ್ಷಿ ಹೊಸದಾಗಿ ಆರಂಭವಾಗಿರುವ ಅಂಗಡಿಗಳೇ ತಾಜಾ ಉದಾಹರಣೆ.ಇಲ್ಲಿನ ಹೊಸ ಅಂಗಡಿಗಳಲ್ಲಿ ಮೂರು ನಾಲ್ಕು ಮಾತ್ರ ಆರಂಭವಾ ಗಿದ್ದು ಹಾಗೆ ಸುಮ್ಮನೇ ಹೋಗಿ ಇವುಗಳ ಬಾಡಿಗೆ ಕೇಳಿದ್ರೆ ಶಾಕ್ ಆಗುತ್ತದೆ ಯಾವ ಅಂಗಡಿ ಬಾಡಿಗೆ ಕೂಡಾ ಸರ್ಕಾರದ ನಿಮಯಗಳಂತೆ ನಿಗದಿಯಾಗಿಲ್ಲ ದರವನ್ನು ಫೀಕ್ಸ್ ಮಾಡಿಲ್ಲ ಸಿಕ್ಕ ಸಿಕ್ಕಂಗ ದರವನ್ನು ನಿಗದಿ ಮಾಡಿ ನೀಡಲಾಗಿದೆ.
ಒಂದು ಕಡೆಗೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಪಾರ ವಹಿವಾಟಿನಲ್ಲಿ ಸ್ಪರ್ಧೆ ಮತ್ತೊಂದೆಡೆ ಇದೇ ಸಿಕ್ಕ ಅವಕಾಶ ಎಂದುಕೊಂಡಿರುವ ಟೆಂಡರ್ ಹಿಡಿದವರು ಇಲಾಖೆಯ ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿ ತಾವೇ ದವರನ್ನ ಲಕ್ಷ ಲಕ್ಷ ಗಳಂತೆ ನಿಗದಿ ಮಾಡಿ ನೀಡಿದ್ದಾರೆ.ಇಲಾಖೆಯ ಅಧಿಕಾರಿಗಳು ದುಡಿದು ತಿನ್ನುವವರಿಗೆ ಒಂದಿಷ್ಟು ಅನುಕೂಲ ಆಗಲಿ ಎಂದು ವ್ಯಾಪಾರ ವಹಿವಾಟುಗಳಿಗೆ ವಾಣಿಜ್ಯ ಮಳಿಗೆಗಳನ್ನು ನಿಗದಿ ಮಾಡಿದ್ದಾರೆ ಆದರೆ ದುಡಿಯುವರಿಗಿಂತ ಬಾಡಿಗೆ ನೀಡಿದವರಿಗೆ ಹೆಚ್ಚಿನ ಲಾಭವಾಗುತ್ತಿದ್ದು ಎಲ್ಲವೂ ಗೊತ್ತಿದ್ದರೂ ಕೂಡಾ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ
ಇತ್ತ ದುಬಾರಿ ಬಾಡಿಗೆಗಾಗಿ ಅಂಗಡಿಗಳನ್ನು ತಗೆದು ಕೊಂಡಿರುವ ವ್ಯಾಪಾರಿಗಳು ಕಡಿಮೆ ವ್ಯಾಪಾರದ ನಡುವೆ ಲಕ್ಷ ಲಕ್ಷ ಕೂಡಿಸಲು ಪರದಾಡುತ್ತಿದ್ದಾರೆ ಒಟ್ಟಾರೆ ಏನೇ ಆಗಲಿ ಸರ್ಕಾರದ ನೀತಿ ನಿಮಯಗಳನ್ನು ಗಾಳಿಗೆ ತೂರಿ ಬಾಡಿಗೆ ನೀಡಿರುವ ವಿಚಾರವನ್ನು ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಪರಿಶೀಲನೆ ಮಾಡೊದು ಅವಶ್ಯಕವಿದೆ ಈ ಒಂದು ಕುರಿತಂತೆ ಸುದ್ದಿ ಸಂತೆ ಟೀಮ್ ಕೂಡಾ ಫಾಲೋ ಮಾಡಲಿದೆ ವರದಿಗಳು ಕೂಡಾ ಮುಂದುವರೆಯಲಿವೆ.
ಬಾಡಿಗೆ ಇಲಾಖೆಗೆ ಮಾತ ದರವನ್ನು ನಿಗದಿ ಮಾಡಿ ಕೆಲವರು ಹಳೆಯ ಅಂಗಡಿಗಳನ್ನು ತಾವು ನಡೆಸ ಲಾರದೇ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಅವರು ಕೂಡಾ ಮತ್ತೆ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……