ಧಾರವಾಡ –
ಹೊಸ ಬಸ್ ನಿಲ್ದಾಣದಲ್ಲಿ ಬಾಗಿಲು ತೆರೆಯದ ಹೊಸ ಮಳಿಗೆಗಳು – ದುಬಾರಿ ಬಾಡಿಗೆಯಿಂದ ಉತ್ಸಾಹ ತೋರದ ವ್ಯಾಪಾರಿಗಳು…..ಲೆಕ್ಕದಲ್ಲಿ ಒಂದು ಬಾಡಿಗೆಯಲ್ಲಿ ಲಕ್ಷ ಲಕ್ಷ…..ಮುಂದುವರೆಯುವುದು……
ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಇತ್ತೀಚಿಗಷ್ಟೇ ಹೊಸದಾಗಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗಾಗಿ ಆರಂಭ ಮಾಡಲಾಗಿದೆ.ಖಾಸಗಿ ವ್ಯಕ್ತಿಯೊಬ್ಬರಿಗೆ ಕೆಲವೊಂದಿಷ್ಟು ಜಾಗೆಯನ್ನು ಬಾಡಿಗೆ ರೂಪದಲ್ಲಿ ನೀಡಲಾಗಿದೆ.ಟೆಂಡರ್ ತಗೆದುಕೊಂಡು ಹೊಟೇಲ್ ಸೇರಿದಂತೆ ಬೇರೆ ಬೇರೆ ವಾಣಿಜ್ಯ ಮಳಿಗೆಯನ್ನು ಆರಂಭ ಮಾಡಲಾಗಿದೆ ಆರಂಭಗೊಂಡು ಆರೇಳು ತಿಂಗಳು ಕಳೆಯುತ್ತಾ ಬಂದರು ಹತ್ತಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಬಾಗಿಲು ತಗೆಯದೇ ಅನಾಥವಾಗಿ ನಿಂತುಕೊಂಡಿವೆ
ಹೌದು ಇದಕ್ಕೆ ದುಬಾರಿಯಾದ ಬಾಡಿಗೆ.ಇಲಾಖೆಯಿಂದ ನೇರವಾಗಿ ವ್ಯಾಪಾರಿಗಳಿಗೆ ಬಾಡಿಗೆ ಬಂದಿದ್ದರೆ ಒಂದು ಬಾಡಿಗೆಯ ಲೆಕ್ಕ ಸಿಗುತ್ತಿತ್ತು ಆದರೆ ಚಿಕ್ಕದಾದ ಮಳಿಗೆ ಯೊಂದಕ್ಕೆ ಒಂದು ಲಕ್ಷದವರೆಗೆ ನಿಗದಿಯನ್ನು ಮಾಡ ಲಾಗಿದೆ ಹೀಗಾಗಿ ಸಿಕ್ಕಾಪಟ್ಟಿಯಾದ ದುಬಾರಿಯಾದ ಬಾಡಿಗೆಯ ವಿಚಾರವನ್ನು ತಿಳಿದ ವ್ಯಾಪಾರಿಗಳು ಯಾರು ಕೂಡಾ ಮಳಿಗೆ ಆರಂಭ ಮಾಡುವತ್ತ ಮುಖ ಮಾಡುತ್ತಿಲ್ಲ.
ಸಧ್ಯ ಆರಂಭವಾಗಿರುವ ಮಳಿಗೆಗಳಲ್ಲಿ ಬಹುತೇಕ ಎಲ್ಲವೂ ಬೇಕರಿ ಸ್ವೀಟ್ ಮಾರ್ಟ್ ಗಳಿದ್ದು ನಾಯಿ ಕೊಡೆಗಳಂತೆ ಆರಂಭವಾಗಿದ್ದು ಇದರ ನಡುವೆ ಲಕ್ಷ ಲಕ್ಷ ರೂಪಾಯಿ ಬಾಡಿಗೆ ಕೊಟ್ಟು ಆರಂಭ ಮಾಡುವತ್ತ ಯಾರು ಉತ್ಸಾಹ ತೋರುತ್ತಿಲ್ಲ ಬಾಗಿಲು ಮುಚ್ಚಿ ಕೊಂಡು ಯಾಕೆ ಆರಂಭವಾಗುತ್ತಿಲ್ಲ ಎಂಬ ವಿಚಾರವು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡಾ ಮೌನವಾಗಿದ್ದಾರೆ
ಇನ್ನೂ ಈಗಷ್ಟೇ ಧಾರವಾಡಗೆ ಸಾರಿಗೆ ಇಲಾಖೆಗೆ ಡಿಸಿಯಾಗಿ ಬಂದಿರುವ ಉತ್ಸಾಹಿ ಡಿಸಿಯವರು ಇನ್ನಾದರೂ ಇದನ್ನು ಗಂಭೀರವಾಗಿ ತಗೆದಕೊಂಡು ಹೊಸ ವಾಣಿಜ್ಯ ಮಳಿಗೆಗಳು ಯಾಕೆ ಬಾಗಿಲು ತೆರೆಯುತ್ತಿಲ್ಲ ಕಾರಣ ಏನು ನಿಜಕ್ಕೂ ದುಬಾರಿ ಬಾಡಿಗೆ ಫೀಕ್ಸ್ ಮಾಡಿದ್ದಾರಾ ಕೋಡುತ್ತಿದ್ದಾರೆಯಾ ಎಂಬ ವಿಚಾರವನ್ನು ಪತ್ತೆ ಮಾಡಿ ಕಡಿಮೆ ಬಾಡಿಗೆಗೆ ಟೆಂಡರ್ ತಗೆದುಕೊಂಡು ದುಬಾರಿ ಬಾಡಿಗೆಯನ್ನು ತಗೆದು ಕೊಳ್ಳುತ್ತಿರುವವರಿಗೆ ಕಡಿವಾಣ ಹಾಕುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಇನ್ನೂ ಸುದ್ದಿ ಸಂತೆಯ ಈ ಒಂದು ಅಭಿಯಾನವು ಮುಂದುವರೆಯಲಿದ್ದು ಲೆಕ್ಕದಲ್ಲಿ ಒಂದು ಬಾಡಿಗೆಯಲ್ಲಿ ಲಕ್ಷ ಲಕ್ಷ ಕಹಾನಿ ಮುಂದುವರೆಯಲಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……