ಧಾರವಾಡ –
ದೇವರ ಮೇಲಿನ ಹೂ ತಪ್ಪಿದ್ರು ಪ್ರತಿದಿನ 5600 ಕೊಡೊದು ತಪ್ಪೊಂಗಿಲ್ಲ – ಧಾರವಾಡದ ಹೊಸ್ ಬಸ್ ನಿಲ್ದಾಣದಲ್ಲಿನ ನಂದಿನಿ ಮಿಲ್ಕ್ ಪಾರ್ಲರ್ ಬಾಡಿಗೆ ಕಥೆ…..ಲೆಕ್ಕದಲ್ಲಿ ಒಂದು ಬಾಡಿಗೆಯಲ್ಲಿ ಲಕ್ಷ ಲಕ್ಷ ಮೌನವಾಗಿದ್ದಾರೆ ಅಧಿಕಾರಿಗಳು…..
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಏನೇ ಮಾಡಿದ್ರು ನಡೆಯುತ್ತದೆ ಎಂಬೊದಕ್ಕೆ ಇಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಸಾಕ್ಷಿ.ಅಂಗಡಿಗಳನ್ನು ತಗೆದುಕೊಂಡ ಮೂಲ ಬಾಡಿಗೆದಾರರು ಸಧ್ಯ ತಾವು ನಡೆಸಲಾಗದೇ ಬೇರೆಯವರಿಗೆ ಬಾಡಿಗೆಯನ್ನು ಕೊಟ್ಟಿದ್ದಾರೆ.ಇಲಾಖೆ ನಿಗದಿ ಮಾಡಿದ ಬಾಡಿಗೆಯ ದರವನ್ನು ತಗೆದುಕೊಳ್ಳದ ಮೂಲ ಬಾಡಿಗೆದಾರರು ದುಪ್ಪಟ್ಟು ಬಾಡಿಗೆ ತಗೆದುಕೊಳ್ಳುತ್ತಿದ್ದು ಇದಕ್ಕೆ ತಾಜಾ ಉದಾಹರಣೆ ನಂದಿನಿ ಮಿಲ್ಕ್ ಪಾರ್ಲರ್.
ಈ ಒಂದು ಪಾರ್ಲರ್ ನ್ನು ಮೂಲ ಬಾಡಿಗೆದಾರರು ಮತ್ತೊಬ್ಬರಿಗೆ ಕೊಟ್ಟಿದ್ದು ಅವರು ಕೂಡಾ ಸಧ್ಯ ಮೂರನೇಯವರಿಗೆ ನೀಡಿದ್ದಾರೆ ಹೀಗಾಗಿ ಸಧ್ಯ ಮೂರನೇಯ ವ್ಯಕ್ತಿಯೊಬ್ಬರು ಬಾಡಿಗೆ ಪಡೆದುಕೊಂಡು ನಡೆಸುತ್ತಿದ್ದಾರೆ.ಇದು ಒಂದು ವಿಚಾರವಾದರೆ ಪ್ರಮುಖ ವಾಗಿ ಈ ಒಂದು ಪಾರ್ಲರ್ ಬಾಡಿಗೆ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತಿರಾ ಹೌದು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಬಾಡಿಗೆ ಫೀಕ್ಸ್ ಮಾಡಿ ತಗೆದುಕೊಳ್ಳ ಲಾಗುತ್ತಿದೆ
ಹೌದು ಪ್ರತಿದಿನ ಬಾಡಿಗೆಯಾಗಿ 5600 ರೂಪಾಯಿ ಕೊಡಬೇಕು.ಇಷ್ಟೊಂದು ದುಬಾರಿಯಾದ ಬಾಡಿಗೆ ಯನ್ನು ಕೊಡಬೇಕು ತಪ್ಪಿಸುವಂತಿಲ್ಲ ಯಾರು ಹೇಳೊರಿಲ್ಲ ಕೇಳೊರಿಲ್ಲ ಎಂಬಂತಹ ದುಬಾರಿಯಾದ ಬಾಡಿಗೆಯನ್ನು ಸಾರಿಗೆ ಇಲಾಖೆಯ ಹೆಸರಿನಲ್ಲಿ ಹಗಲು ದರೋಡೆ ರೂಪದಲ್ಲಿ ವಸೂಲಿ ಮಾಡಲಾಗುತ್ತಿದ್ದು ಈ ಒಂದು ವಿಚಾರವು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರು ಕೂಡಾ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ
ಪ್ರತಿದಿನ ವ್ಯಾಪಾರ ವಹಿವಾಟು ಆಗುತ್ತಿಲ್ಲ ನೋಡಿ ಸ್ವಲ್ಪ ಕಡಿಮೆ ಮಾಡಿ ಅಂದರು ಕೇಳದ ಬಾಡಿಗೆ ವಸೂಲಿ ಮಾಡುವವರು ಸಂಜೆಯಾಗುತ್ತಲೇ ಅಂಗಡಿ ಮುಂದೆ ಬಾಡಿಗೆ ವಸೂಲಿ ಮಾಡಲು ಹಾಜರಾಗುತ್ತಾರೆ ದೇವರು ಮೇಲೆ ಹೂವನ್ನು ಹಾಕುವುದನ್ನು ತಪ್ಪಿಸಿದರೆ ನಡೆಯುತ್ತದೆ ಆದರೆ ಪ್ರತಿದಿನ 5600 ಕೊಡೊದು ತಪ್ಪಿಸುವಂತಿಲ್ಲ
ಯಾವುದೇ ಚೌಕಟ್ಟು ಯಾವುದೇ ಲಂಗು ಲಗಾಮು ಇಲ್ಲದ ದುಬಾರಿ ಬಾಡಿಗೆ ವಸೂಲಿಗೆ ಇನ್ನಾದರೂ ಇಲಾಖೆಯ ಅಧಿಕಾರಿಗಳು ಎಚ್ಚೇತ್ತುಕೊಂಡು ಜವಾಬ್ಬಾರಿಯನ್ನು ತೋರಿಸಿ ಬ್ರೇಕ್ ಹಾಕಿ ವ್ಯಾಪಾರಿ ಗಳಿಗೆ ನೆಮ್ಮದಿಯನ್ನು ನೀಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಧಾರವಾಡ……