ಧಾರವಾಡ –
ಹೆಸರಿಗೆ ಮಾತ್ರ ಹಾಪ್ ಕಾಮ್ಸ್ ಒಳಗಡೆ ಎಲ್ಲವೂ ಪಾಪ್ ಕಾಮ್ಸ್ – ಹೆಸರೊಂದು ಮಾರಾಟವೊಂದು ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಏನೇ ಮಾಡಿದ್ರು ನಡೆಯುತ್ತದೆ.
ರೈತರು ಬೆಳೆದ ತೋಟಗಾರಿಕೆಯ ಬೆಳೆಗಳನ್ನು ಖರೀದಿ ಮಾಡಿ ಮಾರಾಟ ಮಾಡುವ ಮಳಿಗೆ ಹಾಪ್ ಕಾಮ್ಸ್ .ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ, ಅದರ ಸಂಕ್ಷಿಪ್ತ ರೂಪ ವಾದ HOPCOMS ಎಂದೇ ಜನಪ್ರಿಯವಾಗಿದೆ ಇದು ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆಗಾಗಿ 1965 ರಲ್ಲಿ ಸ್ಥಾಪಿಸಲಾದ ರೈತರ ಸಂಘವಾಗಿದೆ
ಈ ಒಂದು ಸಂಘದಿಂದಲೇ ಆರಂಭವಾಗಿರುವ ಹಾಪ್ ಕಾಮ್ಸ್ ನಲ್ಲಿ ರೈತರು ಬೆಳೆದ ತೋಟಗಾರಿಕೆಯ ಬೆಳೆ ಗಳನ್ನು ಮಾತ್ರ ಮಾರಾಟ ಮಾಡಬೇಕು ಆದರೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿನ ಹಾಪ್ ಕಾಮ್ಸ್ ಹೆಸರಿಗೆ ಮಾತ್ರ ಆಗಿದ್ದು ಹೊರಗಡೆ ಹಾಪ್ ಕಾಮ್ಸ್ ಅಂತಾ ದೊಡ್ಡ ಅಕ್ಷರದಲ್ಲಿದ್ದು ಒಳಗಡೆ ಏನೇನು ಮಾರಾಟ ಮಾಡ್ತಾ ಇದ್ದಾರೆ ಎಂದು ನೋಡಿದ್ರೆ ಶಾಕ್ ಆಗುತ್ತದೆ.
ಹೌದು ರೈತರು ಬೆಳೆದ ಬೆಳೆಗಳ ಮಾರಾಟ ಇರಲಿ ಹಣ್ಣುಗಳಾಗಲಿ ತರಕಾರಿಗಳಾಗಲಿ ಮಾರಾಟಕ್ಕೆ ಹೋಗಲಿ ನೋಡಲು ಸಿಗೊದಿಲ್ಲ ಮಳಿಗೆಯ ತುಂಬೆಲ್ಲಾ ವೆರೈಟಿ ವೆರೈಟಿ ಪಾಪ್ ಕಾರ್ನ್ಸ್ ಗಳು ಪಾಪಡಿಗಳು ಚೀಪ್ಸ್ ಗಳು ಸೇರಿದಂತೆ ಏನೆಲ್ಲಾ ನೋಡಲು ಕಾಣುತ್ತವೆ
ಸಾಮಾನ್ಯವಾಗಿ ಒಂದಿಷ್ಟು ಹಣ್ಣು ತರಕಾರಿ ಗಳನ್ನು ಆದರೂ ಮಾರಾಟಕ್ಕೆ ಇಡಬಹುದಾಗಿತ್ತು ಆದರೆ ಒಂದರ ಒಂದು ಹಣ್ಣು ತರಕಾರಿ ಹೀಗೆ ಏನು ಮಾರಾಟಕ್ಕೆ ಹೋಗಲಿ ನೋಡಲು ಇಲ್ಲಿ ಕಾಣೊದಿಲ್ಲ ಬಾಡಿಗೆ ಕೊಟ್ಟು ಸುಮ್ಕನಾಗುವ ಇಲಾಖೆಯ ಅಧಿಕಾರಿ ಗಳೇ ಒಮ್ಮೆ ನೋಡಿ ಇಲ್ಲಿ ಏನು ಮಾರಾಟ ಮಾಡಲಾಗು ತ್ತಿದೆ ಏನು ಮಾರಾಟ ಮಾಡುತ್ತಿದ್ದಾರೆ
ಈ ಒಂದು ಕೆಲಸ ಮಾಡೊದನ್ನು ಬಿಟ್ಟು ಇಲ್ಲಿನ ಅವ್ಯವಸ್ಥೆ ಕುರಿತು ಪ್ರಶ್ನೆ ಮಾಡಿ ಸುದ್ದಿ ಬರೆಯುವ ಮಾಧ್ಯಮ ದವರಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬರಿಯಬೇಡಿ ನ್ಯೂಸ್ ಸೆನ್ಸ್ ಆಗುತ್ತದೆ ಎಂದು ಹೇಳುವ ಮುಂಚೆ ಹೊಸ ಬಸ್ ನಿಲ್ದಾಣ ದಲ್ಲಿ ಏನೇನು ಆಗುತ್ತಿದೆ ಏನೇನು ಮಾಡ್ತಾ ಇದ್ದಾರೆ ಒಮ್ಮೆ ನೋಡಿ.
ಸುದ್ದಿ ಸಂತೆ ನ್ಯೂಸ್ ಧಾರವಾಡ……