ಹುಬ್ಬಳ್ಳಿ –
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆ ಮಾಡಿದ ಉಪ ಮೇಯರ್ ಸಂತೋಷ ಚವ್ಹಾಣ್ – ಶಾಸಕ ಮಹೇಶ್ ಟೆಂಗಿನಕಾಯಿ ನೇತ್ರತ್ವದಲ್ಲಿ ಸಭೆ ಕಾರ್ಯಕ್ರಮಗಳ ರೂಪರೇಷೆಗಳ ಕುರಿತಂತೆ ಚಿಂತನ ಮಂಥನ…..
ಅಕ್ಟೋಬರ್ 5 ರಂದು ಹುಬ್ಬಳ್ಳಿಯ ನೆಹರು ಮೈದಾನ ದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ “ಶತಾಬ್ದಿ” ಕಾರ್ಯಕ್ರಮ ನಡೆಯಲಿದೆ.ಈ ಒಂದು ಹಿನ್ನಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ ನಂ 41 ರಲ್ಲಿ ಎಸ್ ಆರ್ ಕೆಂಪಣ್ಣನವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಭೂತ ಮಟ್ಟದ ಪದಾಧಿಕಾರಿಗಳ ಸಭೆ ಮಾಡಲಾಯಿತು.ಶಾಸಕ ಮಹೇಶ್ ಟೆಂಗಿನಕಾಯಿ,ಉಪಮೇಯರ್ ಸಂತೋಷ ಚವ್ಹಾಣ್ ನೇತ್ರತ್ವದಲ್ಲಿ ನಡೆದ ಈ ಒಂದು ಸಭೆಯಲ್ಲಿ ಸಂಘದ ಪರಿಚಯ ಬೈಠಕ್ ನಡೆಸಿ ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ್ ನಾಡಜೋಶಿ ಇವರೊಂದಿಗೆ RSS ನ ಪ್ರಮುಖರಾದ ಮಹೇಶ್ ಕಪಿಲೇಶ್ವರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವರು ಪಾಲ್ಗೊಂಡಿದ್ದರು.ನೆಹರು ಮ್ಯೆದಾನದಲ್ಲಿ “ವಿಜಯದಶಮಿ ಉತ್ಸವ” ದ ಅಂಗವಾಗಿ ನಡೆಯುವ ಭವ್ಯ ಪಥಸಂಚಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟೀಯ ಸೇವಾ ಸಂಘ ಗಣ ವೇಷಗಳನ್ನು ಹಾಕಿ ಕೊಂಡು ಭಾಗವಹಿಸಲು ಸೂಚಿಸಲಾಯಿತು
ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ವಾರ್ಡಿನ ಸೂಪರ್ವೈಸರ್ ದೇವಪ್ಪ ದಂಪತಿಗಳಿಗೆ ಶಾಸಕ ಮಹೇಶ್ ತೆಂಗಿನಕಾಯಿ ಸನ್ಮಾನಿಸಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಪವಾರ್,ರಾಮನಗೌಡ ಶೆಟ್ಟನಗೌಡ್ರ್ ವಾರ್ಡ್ ಅಧ್ಯಕ್ಷರಾದ ಆನಂದ್ ಗೌಡ ಪಾಟೀಲ್, ವಾಡ೯ ಪದಾಧಿಕಾರಿಗಳಾದ ಅಜಯ್ ನಾಯ್ಕರ್ ,ಜ್ಯೋತಿಬಾ ಮೋರೆ, ಅಲ್ಫ್ರೇಡ್ ಪೋತು ಗೊಳಿ,
ವಿಜಯಕುಮಾರ್ ಮಠ. ಗುರುರಾಜ್ ಹೊರಟ್ಟಿ, ಗಣೇಶ್ ಕಬಾಡೇ ,ಸಿದ್ದು ಮಿಣಜಿಗಿ, ಗೀತಾ ಕೆಸರಳ್ಳಿ ಮೀನಾಕ್ಷಿ ಅಮರಗೋಳ ಇಂದಿರಾ ಚವಾಣ್ ಡಾಕ್ಟರ್ ಸಂದೀಪ್ ಕುಲಕರ್ಣಿ ದಯಾನಂದ ಹೂಗಾರ್. ವೀರಯ್ಯ ಜಗಳೂರು ಉಮಾ ಕುಲಕರ್ಣಿ ಸಂದ್ಯಾ ದೀಕ್ಷಿತ್ಪ. ಪರ್ವತಿಕರ್ ಹಾಗೂ ಭೂತ ಅಧ್ಯಕ್ಷರುಗಳು ಪದಾಧಿಕಾರಿಗಳು ಕಾಯ೯ಕತ೯ರು ಸೇರಿದಂತೆ ಹಲವರು ಉಫಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..






















