ಹುಬ್ಬಳ್ಳಿ –
ಹೊಸದಾಗಿ ಖರೀದಿಸಿದ ಹೊಟೇಲ್ ಗೆ 6 ತಿಂಗಳ ಪತ್ನಿಯೊಂದಿಗೆ ಪ್ರವೇಶ ಮಾಡಿದ ಗಣೇಶ್ ಶೇಟ್ – ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಪತ್ನಿಯೊಂದಿಗೆ KGP ಗ್ರೂಪ್ ನ ಹೊಸ ಹೊಟೇಲ್ ನಲ್ಲಿ ಗಣೇಶ್ ಶೇಟ್ ದಂಪತಿಗಳು…..ಸರಳ ಸಜ್ಜನಿಕೆಯ ಉಧ್ಯಮಿಯ ಸರಳತೆ…..
ಪ್ರತಿಷ್ಠಿತ ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಮಡಿಲಿಗೆ ಮತ್ತೊಂದು ಐಶಾರಾಮಿ ಹೊಟೇಲ್ ಸೇರ್ಪಡೆ ಯಾಗಿದೆ.ವಿಮಾನ ನಿಲ್ದಾಣದ ಪಕ್ಕದಲ್ಲಿನ ಅನಂತ ಗ್ರ್ಯಾಂಡ್ ಹೊಟೇಲ್ ನ್ನು ಕೆಜಿಪಿ ಗ್ರೂಪ್ ನಿಂದ ಗಣೇಶ ಶೇಟ್ ಅವರು ಖರೀದಿಸಿದ್ದಾರೆ.ಐಶಾರಾಮಿಯ ಈ ಒಂದು ಹೊಟೇಲ್ ಪ್ರತಿಷ್ಠಿತ ಕೆಜಿಪಿ ಗ್ರೂಪ್ ಗೆ ಸೇರಿ ಕೊಂಡಿದ್ದು ಖರೀದಿ ಮಾಡಿದ ಬೆನ್ನಲ್ಲೇ ಈ ಒಂದು ಹೊಟೇಲ್ ಹೆಸರು ಕೂಡಾ ಬದಲಾಗಿದೆ
ಸಧ್ಯ ಈ ಒಂದು ಹೊಟೇಲ್ ರಾಯಲ್ ರಿಟೀಸ್ (Ritis) ಹೆಸರಿನ ಈ ಒಂದು ಹೊಟೇಲ್ ಮತ್ತಷ್ಟು ಹೈಟೇಕ್ ಆಗಿದ್ದು ಸ್ಟಾರ್ ಹೊಟೇಲ್ ಆಗಿದೆ ಇದು ಒಂದು ವಿಚಾರವಾದರೆ ಇನ್ನೂ ಮುಖ್ಯವಾಗಿ ಹೊಟೇಲ್ ಖರೀದಿ ಮಾಡಿದ 6 ತಿಂಗಳ ನಂತರ ಮಾಲೀಕರಾಗಿ ರುವ ಗಣೇಶ್ ಶೇಟ್ ಅವರು ಕಾಲಿಟ್ಟಿದ್ದಾರೆ ಹೌದು ಪತ್ನಿ ಸುರೇಖಾ ಅವರೊಂದಿಗೆ ಸಮಯವನ್ನು ಬಿಡುವು ಮಾಡಿಕೊಂಡು ಹೊಸದಾಗಿ ಖರೀದಿಸಿದ ಹೊಟೇಲ್ ಗೆ ಕಾಲಿಟ್ಟು ಹೊಟೇಲ್ ನಲ್ಲಿನ ಎಲ್ಲಾ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಪರಿಶೀಲನೆ ಮಾಡಿದರು.
ಸಿಬ್ಬಂದಿಗಳೊಂದಿಗೆ ಕೆಲ ಸಮಯವನ್ನು ಕಳೆದು ಮಾಹಿತಿಯನ್ನು ಪಡೆದುಕೊಂಡು ಗ್ರಾಹಕರಿಗೆ ಒಳ್ಳೇಯ ಸೇವೆಯನ್ನು ನೀಡುವಂತೆ ಸೂಚನೆಯನ್ನು ನೀಡಿದರು ಪ್ರತಿಯೊಂದರಲ್ಲೂ ಸರಳತೆಯಿಂದ ಕಂಡು ಬರುವ ಗಣೇಶ್ ಶೇಟ್ ಅವರ ಸರಳತೆಗೆ ಮತ್ತೊಮ್ಮೆ ಕಂಡು ಬಂದಿತು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.