ಹಾಸನ –
ಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ಮಾಡಿದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ ಮುಖ, ಕೈ-ಕಾಲು, ದೇಹದ ಹಲವು ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ ಬೀದಿ ಶ್ವಾನಗಳು ಹಾಸನ ಜಿಲ್ಲೆ, ಬೇಲೂರು ಪಟ್ಟಣದ, ನೆಹರು ನಗರ, ಜೈಭೀಮ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ
ನಾಯಿಗಳ ದಾಳಿಯಿಂದ ಶಿಕ್ಷಕಿಯನ್ನು ಬಚಾವ್ ಮಾಡಲು ಬಂದ ಏಳು ಜನಕ್ಕೆ ಕಚ್ಚಿವರ ಬೀದಿ ನಾಯಿಗಳು.ಬೀದಿನಾಯಿಗಳ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿ ಚಿಕ್ಕಮ್ಮ ಅವರನ್ನು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಪಟ್ಟಣದ ಜಿಎಚ್‌ಪಿಎಸ್ ಶಾಲೆಯ ಶಿಕ್ಷಕಿಯಾಗಿರುವ ಚಿಕ್ಕಮ್ಮ.ಚಿಕ್ಕಮ್ಮ ನೀಡಿದ್ದ ಸಮೀಕ್ಷೆ ಮುಗಿಸಲು ಕಡೆಯ ದಿನವಾಗಿತ್ತು.ನವೀನ್ ಎಂಬುವವರ ಮನೆಗೆ ಸೆನ್ಸಸ್‌ಗೆ ಪತಿ ಶಿವಕುಮಾರ್ ಜೊತೆ ತೆರಳಿದ್ದ ಶಿಕ್ಷಕಿ ಚಿಕ್ಕಮ್ಮ ಬಾಕಿ ಯಿದ್ದ ಮೂರು ಮನೆ ಸಮೀಕ್ಷೆ ಯನ್ನು ಮಾಡ್ತಾ ಇದ್ದರು
ಈ ವೇಳೆ ದಾಳಿ ಮಾಡಿರುವ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು.ಪತ್ನಿಯನ್ನು ಬಿಡಿಸಿಕೊಳ್ಳಲು ಬಂದ ಪತಿ ಶಿವಕುಮಾರ್‌ಗು ಕಚ್ಚಿವೆ ಬೀದಿ ನಾಯಿಗಳು ಇದನ್ನು ಕಂಡು ಪತಿ-ಪತ್ನಿಯನ್ನು ಬಚಾವ್ ಮಾಡಲು ಬಂದ ಏಳು ಮಂದಿ ಬಂದಿದ್ದರು.
ಧರ್ಮ, ಪೃಥ್ವಿ, ಸಚಿನ್ ಸೇರಿ ಏಳು ಮಂದಿಗೆ ಕಚ್ಚಿವೆ ಬೀದಿ ನಾಯಿಗಳು.ಅಲ್ಲೇ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಕಿಶನ್ ಮೇಲೂ ದಾಳಿ ಮಾಡಿ ಕಚ್ಚಿರುವ ಶ್ವಾನಗಳು ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿ ಚಿಕ್ಕಮ್ಮ ಹಾಗೂ ಉಳಿದ ಗಾಯಾಳುಗಳಿಗೆ ಬೇಲೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗು ತ್ತಿದೆ
ಇನ್ನೂ ಇತ್ತ ಈ ಒಂದು ಘಟನೆ ಜೊತೆಯಲ್ಲಿ ಸಧ್ಯ ಸಮೀಕ್ಷೆ ಕಾರ್ಯದಲ್ಲಿರುವ ಶಿಕ್ಷಕ ಸಮುದಾಯಕ್ಕೆ ನೂರೆಂಟು ಸಮಸ್ಯೆ ಗಳು ಕಂಡು ಬರುತ್ತಿದ್ದು ಒತ್ತಡ ದ ನಡುವೆ ಹೇಗೆಲ್ಲಾ ಸಮೀಕ್ಷೆ ಮಾಡಬೇಕು ರಜೆ ಇದ್ದರೂ ಕೂಡಾ ಅದನ್ನು ಬಿಟ್ಟು ಹೇಗೆ ಶಿಕ್ಷಕರು ಕೆಲಸ ಮಾಡತಾ ಇದ್ದಾರೆ ನೋಡಿ ಸಂಘಟನೆಯ ನಾಯಕರೇ ಶಿಕ್ಷಕರ ಪರವಾಗಿ ಧ್ವನಿ ಎತ್ತಿ ಮಾತನಾಡಿ ಈ ಒಂದು ನಿರೀಕ್ಷೆ ಯಲ್ಲಿ ರಾಜ್ಯದ ಶಿಕ್ಷಕರು ಇದ್ದಾರೆ
ಸುದ್ದಿ ಸಂತೆ ನ್ಯೂಸ್ ಹಾಸನ…..