ಬೆಂಗಳೂರು –
ರಾಜ್ಯದಲ್ಲಿ ಇನ್ನೂ ಕೂಡಾ ಸಮೀಕ್ಷಾ ಕಾರ್ಯ ಮುಕ್ತಾಯ ಗೊಂಡಿಲ್ಲ ಇದರ ನಡುವೆ ರಜೆ ಇದ್ದು ಇಲ್ಲದಂತಹ ಪರಿಸ್ಥಿತಿ ಹೀಗಾಗಿ ಈ ಒಂದು ಕೂಡಲೇ ದಸರಾ ರಜೆಯನ್ನು ವಿಸ್ತರಣೆ ಮಾಡುವಂತೆ ರಾಜ್ಯದ ಸಮಸ್ತ ಶಿಕ್ಷಕರು ಒತ್ತಾಯ ಮಾಡುತ್ತಿದ್ದು ಸಧ್ಯ ಶಿಕ್ಷಕರ ಧ್ವನಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ರಜೆ ವಿಸ್ತರಣೆ ಗಾಗಿ ಒತ್ತಾಯ ಮಾಡಿದೆ
ಹೌದು ರಾಜ್ಯದ ಸಮಸ್ತ ಶಿಕ್ಷಕರ ಧ್ವನಿ ಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿಯವರು ಶಿಕ್ಷಣ ಸಚಿವ ವರಿಗೆ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಯವರಿಗೆ ಪತ್ರ ವನ್ನು ಬರೆದಿದ್ದಾರೆ
ಸಧ್ಯ ಶಾಲೆಗಳು ಆರಂಭವಾಗಲಿದ್ದು ಇತ್ತ ಇನ್ನೂ ಕೂಡಾ ಗಣತಿ ಲಾರ್ಯ ಮುಕ್ತಾಯಗೊಂಡಿಲ್ಲ ಶಿಕ್ಷಕರು ಒತ್ತಡ ದಲ್ಲಿದ್ದು ಹೀಗಾಗಿ ರಜೆ ಅವಧಿಯನ್ನು ವಿಸ್ತರಣೆ ಮಾಡಬೇಕು ಹಾಗೇ ದೈಹಿಕ ವಾಗಿ ಬೌದ್ಧಿಕ ವಾಗಿ ಒತ್ತಡದಲ್ಲಿ ಇರುವ ಶಿಕ್ಷಕರಿಗೆ ಒಂದಿಷ್ಟು ವಿಶ್ರಾಂತಿ ನೀಡಲು ಅವಕಾಶ ನೀಡಬೇಕು ಎಂದು ಸಂಘ ವು ಒತ್ತಾಯ ಮಾಡಿದ್ದು ಸಮಸ್ತ ಶಿಕ್ಷಕರ ಧ್ವನಿ ಯಾಗಿ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿಯವರು ಪತ್ತ ಬರೆದು ಆಗ್ರಹ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..