ಧಾರವಾಡ –
ಸಾಮಾನ್ಯವಾಗಿ ಯಾವುದೇ ಒಂದು ಸ್ಥಳದಲ್ಲಿ ಅದರಲ್ಲೂ ಸರ್ಕಾರಿ ಇಲಾಖೆಯ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಇಲಾಖೆಯ ಜವಾಬ್ದಾರಿ ಆದರೆ ಧಾರವಾಡದ ಹೊಸ ಬಸ್ ನಿಲ್ದಾಣ ದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳು ಮರಿಚೀಕೆಯಾಗಿವೆ ಹೌದು
ದೊಡ್ಡ ದಾದ ಈ ಒಂದು ನಿಲ್ದಾಣ ದಲ್ಲಿ ಒಂದೇ ಒಂದು ವಿಶ್ರಾಂತಿ ಗೃಹ ಇಲ್ಲ ಲಗೇಜ್ ಲಾಕ್ ರೂಮ್ ಅಂತೂ ಇಲ್ಲವೇ ಇಲ್ಲ ಇನ್ನೂ ಶೌಚಾಲಯ ಇದೆ ಅದರೆ ಬಳಸಲು ಹಣ ಪಾವತಿ ಮಾಡಬೇಕು ಇನ್ನೂ ಕುಳಿತುಕೊಳ್ಳಲು ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇಲ್ಲ
ಕುಡಿಯುವ ನೀರಿನ ಸೌಲಭ್ಯ ಅಂತೂ ಇಲ್ಲವೇ ಇಲ್ಲ ಇದ್ದರೂ ಕೂಡಾ ಉಪಯೋಗ ಆಗುತ್ತಿಲ್ಲ ಮಹಿಳೆ ಯರಿಗೆ ಪ್ರತ್ಯೇಕ ವಾದ ವಿಶ್ರಾಂತಿ ಗೃಹ ಆಗಲಿ ಇಲ್ಲಿ ಇಲ್ಲ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿಲ್ದಾಣ ದಲ್ಲಿ ರಸ್ತೆ ಮಾಡಲಾಗಿದೆ ಆದರ ನಿಲ್ದಾಣ ದಲ್ಲಿ ಮಾತ್ರ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ
ಪ್ರತಿದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿ ಕರು ಬಂದು ಹೋಗುತ್ತಾರೆ ಹೀಗಿರುವಾಗ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಇಲಾಖೆ ಇನ್ನಾದರೂ ಇತ್ತ ನೋಡೊದು ಅವಶ್ಯಕತೆ ಇದೆ
ಸುದ್ದಿ ಸಂತೆ ನ್ಯೂಸ್ ಧಾರವಾಡ……