ಧಾರವಾಡ –
ರಜೆಗಾಗಿ ಚಾಲಕರಲ್ಲಿ ದುಡ್ಡು ಕೇಳಿದ್ದು ಡಿಪೋ ಮ್ಯಾನೇಜರ್ ಅಲ್ಲವೇ ಅಲ್ಲ…..ಅವರ ಮೇಲೆ ಯಾರು ಆರೋಪ ಮಾಡಿಲ್ಲ ಹೇಳಿಲ್ಲ – ರಜೆಗಾಗಿ ದುಡ್ಡು ಕೇಳಿದವರ ಯಾರು ಚಾಲಕರು ಆರೋಪ ಮಾಡಿದ್ದ ಯಾರ ಮೇಲೆ ಗೊತ್ತಾ…..
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿರುವ ಚಿಗರಿ ಬಸ್ ಗಳಲ್ಲಿ ಸದಾ ಒಂದಿ ಲ್ಲೊಂದು ಸಮಸ್ಯೆಗಳು ಇದ್ದೇ ಇರುತ್ತವೆ ಎನ್ನೊದಕ್ಕೆ ಇಲ್ಲಿನ ಚಿತ್ರಣಗಳೇ ಸಾಕ್ಷಿಯಾಗಿದ್ದು ಸಧ್ಯ ಇಲ್ಲಿನ ಮತ್ತೊಂದು ಗಂಭೀರವಾದ ವಿಚಾರವೊಂದು ಬೆಳಕಿಗೆ ಬಂದಿದೆ ಹೌದು ಧಾರವಾಡ ಚಿಗರಿ ಬಸ್ ಡಿಪೋ ದಲ್ಲಿ ಚಾಲಕರಿಗೆ ಕೆಲವೊಂದು ಸಾರಿ ತುರ್ತಾಗಿ ರಜೆ ಬೇಕಾದರೆ ವಾರವಿಡಿ ಕರ್ತವ್ಯಕ್ಕೆ ಗೈರಾದರೆ ಪುನಃ ಅವರಿಗೆ ಡೂಟಿ ಕೊಡಲು ದುಡ್ಡನ್ನು ಕೇಳ್ತಾ ಇದ್ದಾರೆ ಎಂಬ ಗಂಭೀರವಾದ ಆರೋಪವನ್ನು ಚಾಲಕರು ಮಾಡಿದ್ದಾರೆ
ಈ ಒಂದು ಕುರಿತಂತೆ ಕೆಲ ಚಾಲಕರು ನೊಂದುಕೊಂಡಿ ರುವ ಉದಾಹರಣೆಗಳಿದ್ದು ಇದರ ನಡುವೆ ಡಿಪೋ ದಲ್ಲಿ ದುಡ್ಡು ಕೇಳುತ್ತಿರುವ ಆರೋಪವನ್ನು ಡಿಪೋ ಮ್ಯಾನೇಜರ್ ಸಂತೋಷ ಅವರ ಮೇಲೆ ಮಾಡಿಲ್ಲ ಅವರ ಹೆಸರನ್ನು ಯಾರು ಕೂಡಾ ಹೇಳಿಲ್ಲ.ಡಿಪೋ ಗೆ ಈಗಷ್ಟೇ ಹೊಸದಾಗಿ ಮ್ಯಾನೇಜರ್ ಆಗಿ ಸಂತೋಷ ಅವರು ಬಂದಿದ್ದು ಒಳ್ಳೇಯ ದಕ್ಷ ಅಧಿಕಾರಿ ಎಂದು ಧಾರವಾಡ ಡಿಪೋ ಚಾಲಕರೆಲ್ಲರೂ ಕೂಡಾ ಹೇಳ್ತಾ ಇದ್ದಾರೆ ಹೀಗಿರುವಾಗ ಸಧ್ಯ ದೊಡ್ಡ ಯಕ್ಷ ಪ್ರಶ್ನೆಯಾ ಗಿದ್ದು ರಜೆಗಾಗಿ ದುಡ್ಡು ಕೇಳುತ್ತಿರುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದ್ದು
ಈ ಒಂದು ವಿಚಾರವು ಡಿಪೋ ದಲ್ಲಿರುವ ಚಾಲಕರಿಗೆ ಗೊತ್ತು ಆ ಇಬ್ಬರೇ ರಜೆಗಾಗಿ ಚಾಲಕರಲ್ಲಿ ಪದೇ ಪದೇ ಕಿರಿಕಿರಿ ಮಾಡ್ತಾ ಇದ್ದಾರೆ ಬೇರೆ ಬೇರೆ ಡಿಮಾಂಡ್ ಮಾಡ್ತಾ ಇದ್ದಾರೆ ನಮಗೆ ಸಾಕಾಗಿದೆ ಎಂಬ ಗಂಭೀರ ವಾದ ಆರೋಪಗಳನ್ನು ಚಾಲಕರು ಮಾಡಿದ್ದು ಒಂದು ಮಾತಂತೂ ಸತ್ಯ ರಜೆಗಾಗಿ ಚಾಲಕರಲ್ಲಿ ದುಡ್ಡು ಕೇಳಿದ್ದು ಹೇಳಿದ್ದು ಡಿಪೋ ಮ್ಯಾನೇಜರ್ ಅಲ್ಲವೇ ಅಲ್ಲ
ಹಾಗಾದರೆ ದುಡ್ಡು ಕೇಳಿದ್ದು ಯಾರು ಎಂಬೊದನ್ನು ಡಿಪೋ ದಲ್ಲಿನ ಎಲ್ಲಾ ಚಾಲಕರನ್ನು ಕೇಳಿದ್ರೆ ಸತ್ಯ ಹೊರಗೆ ಬರಲಿದ್ದು ಸುದ್ದಿ ಸಂತೆಯ ಮುಂದೆ ಚಾಲಕರು ಹಣ ಕೇಳುತ್ತಿರುವವ ಬಗ್ಗೆ ಹೇಳಿಕೊಂಡಿದ್ದು ದಾಖಲೆ ಸಮೇತವಾಗಿ ಸ್ಪೋಟವಾಗಲಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..