ಧಾರವಾಡ –
ಬಸ್ ನಿಲ್ದಾಣವೊ ಬೇಕರಿಗಳ ತಾಣವೋ ತಿಳಿಯದು – ಒಂದೇ ನಿಲ್ದಾಣದಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೇಕರಿಗಳು…..ಸರಿಯಾದ ವ್ಯಾಪಾರವಿಲ್ಲದೇ ಪರದಾಡುತ್ತಿರುವ ವ್ಯಾಪಾರಿಗಳು…..ಒಂದೇ ಕಡೆಗಳಲ್ಲಿ ಹೀಗೆ ಅನುಮತಿ ನೀಡಬಹುದಾ…..
ಸಾಮಾನ್ಯವಾಗಿ ಯಾವುದಾದರೂ ಸ್ಥಳದಲ್ಲಿ ಒಂದೇ ಕಡೆಗಳಲ್ಲಿ ಅಕ್ಕ ಪಕ್ಕದಲ್ಲಿ ಒಂದೇ ರೀತಿಯ ಶಾಪ್ ಗಳು ಇರೋದಿಲ್ಲ ಯಾರು ಕೂಡಾ ಹಾಕೊದಿಲ್ಲ ಅದರಲ್ಲೂ ಸರ್ಕಾರಿ ಸ್ಥಳಗಳಲ್ಲಂತೂ ಮಾಡಲು ಬರೊದಿಲ್ಲ ಹೀಗಿರುವಾಗ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಎಲ್ಲಿ ನೋಡಿದಲ್ಲಿ ಬೇಕರಿಗಳೇ ಬೇಕರಿಗಳು.ಬಸ್ ನಿಲ್ದಾಣಕ್ಕೆ ಕಾಲಿಟ್ಟರೇ ಸಾಕು ಇದು ಬಸ್ ನಿಲ್ದಾಣವಾ ಅಥವಾ ಬೇಕರಿಗಳ ತಾಣವೋ ಎಂದು ಗೊಂದಲ ವಾಗುತ್ತದೆ.
ವ್ಯಾಪಾರ ವಹಿವಾಟುಗಳಲ್ಲಿ ಸ್ಪರ್ಧೆ ಇರೊದು ಸರ್ವೆ ಸಾಮಾನ್ಯ ಆದರೆ ದುಬಾರಿಯಾದ ಬಾಡಿಗೆಯನ್ನು ಸ್ಪರ್ಧೆಯ ಮೇಲೆ ತಗೆದುಕೊಳ್ಳುವ ವ್ಯಾಪಾರಿಗಳಿಗೆ ನಾಯಿ ಕೋಡೆಗಳಂತೆ ಬೇಕರಿ ಆರಂಭ ಮಾಡಲು ಅನುಮತಿಯನ್ನು ಇಲಾಖೆಯವರು ನೀಡಿದ್ದಾರೆ ಹೀಗಾಗಿ ಸಧ್ಯ ಧಾರವಾಡದ ಹೊಸ ಬಸ್ ನಿಲ್ದಾಣಕ್ಕೆ ಕಾಲಿಟ್ಟರೇ ಸಾಕು ಎಲ್ಲಿ ನೋಡಿದಲ್ಲಿ ಬೇಕರಿಗಳು ಬೇಕರಿಗಳು ಕಂಡು ಬರುತ್ತವೆ.
ಒಂದು ಕಡೆ ಸರಿಯಾಗಿ ವ್ಯಾಪಾರ ವಹಿವಾಟು ಇಲ್ಲದೇ ದುಬಾರಿಯಾದ ಬಾಡಿಗೆಯನ್ನು ತುಂಬಲು ವ್ಯಾಪಾರಿ ಗಳು ಪರದಾಡುತ್ತಿದ್ದರೆ ಇತ್ತ ಇಪ್ಪತ್ತಕ್ಕೂ ಹೆಚ್ಚು ಬೇಕರಿಗ ಳನ್ನು ಒಂದೇ ಕಡೆಗಳಲ್ಲಿ ನಡೆಸಲು ಅನುಮತಿ ನೀಡಿದ್ದಾ ದರೂ ಹೇಗೆ ಹೀಗೂ ಕೊಡಬಹುದಾ ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದ್ದು ಇಲಾಖೆಗೆ ಬಾಡಿಗೆ ಬರುತ್ತಿದೆ ಬರಲಿ ಎಂಬ ಕಾರಣಕ್ಕಾಗಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಬೇಕರಿ ಗಳಿಗೆ ಅನುಮತಿಯನ್ನು ನೀಡಿದ್ದು ಯಾರಿಗೂ ಕೂಡಾ ಸರಿಯಾಗಿ ವ್ಯಾಪಾರ ವಹಿವಾಟು ಆಗದೇ ಪರದಾಡು ತ್ತಿದ್ದು
ಇತ್ತ ಇನ್ನಾದರೂ ಇಲಾಖೆಯ ಅಧಿಕಾರಿಗಳು ಒಮ್ಮೆ ಪರಿಶೀಲನೆ ಮಾಡಿ ದುಡಿದು ತಿನ್ನುವ ಕುಟುಂಬಗಳ ನೋವಿಗೆ ಆಸರೆಯಾಗುತ್ತರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……