ಬೆಂಗಳೂರು –
ಭಾರೀ ಮಳೆಯಿಂದ ಸರಿ ಸುಮಾರು10ರಿಂದ 12 ದಿನಗಳಲ್ಲಿ ಶಾಲೆಗೆ ರಜಾ ಘೋಷಿಸಲಾಗಿತ್ತು. ಅದರ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಿರ್ದಿಷ್ಟಾವಧಿಗೆ ಮುಗಿಯದ ಹಿನ್ನೆಲೆಯಲ್ಲಿ ಸರಕಾರವೇ ಮಧ್ಯಂತರ ರಜೆಯನ್ನು 20 ದಿನ ಹೆಚ್ಚುವರಿಯಾಗಿ ನೀಡಿತ್ತು.ಈ ಎಲ್ಲ ರಜಾದಿನಗಳನ್ನು ಸರಿದೂಗಿಸಲು ಶನಿವಾರ ಮಾಧ್ಯಾಹ್ನ ಮಾತ್ರ ವಿಶೇಷ ತರಗತಿ ನಡೆಸಿದರೆ ಸಾಲದು, ರವಿವಾರ ಬೆಳಗ್ಗೆಯೂ ವಿಶೇಷ ತರಗತಿ ನಡೆಸಲು ಚರ್ಚೆ ಶುರುವಾಗಿದೆ.
ಭಾರೀ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಶಾಲೆಗಳಿಗೆ ನೀಡಿದ ರಜೆಯ ತರಗತಿಯನ್ನು ಸರಿಹೊಂದಿರುವ ಪ್ರಕ್ರಿಯೆ ಜುಲೈ,ಆಗಸ್ಟ್ ತಿಂಗಳಿಂದಲೇ ಆರಂಭವಾಗಿತ್ತು. ಹೀಗಾಗಿ ನವೆಂಬರ್ ತಿಂಗಳ ಎಲ್ಲ ಶನಿವಾರವೂ ವಿಶೇಷ ತರಗತಿ ನಡೆಸಿದರೆ ಮಳೆಗೆ ನೀಡಿದ ವಿಶೇಷ ರಜೆಯ ತರಗತಿ ಸರಿಹೊಂದಲಿದೆ.
ಆದರೆ ದ.ಕ. ಜಿಲ್ಲೆಯ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಿಯೂ ಮಳೆಗೆ 10ರಿಂದ 12 ದಿನ ವಿಶೇಷ ರಜೆ ನೀಡಲಾಗಿದೆ. ಆ ರಜಾ ದಿನಗಳ ಶಾಲಾ ಚಟುವಟಿಕೆಯನ್ನು ಶನಿವಾರ ವಿಶೇಷ ತರಗತಿ ನಡೆಸಲು ಸೆಪ್ಟೆಂಬರ್‌ನಿಂದ ಆರಂಭಿಸ ಲಾಗಿದೆ. ಹೀಗಾಗಿ ದ.ಕ. ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದ ವರೆಗೂ ಶನಿವಾರ ವಿಶೇಷ ತರಗತಿ ಮಳೆಯ ರಜೆ ಸರಿಹೊಂದಿಸಲು ಮಾಡಬೇಕಾದ ಅನಿವಾರ್ಯ ತೆಯಿದೆ.
ಆದರೆ ಮಧ್ಯಂತರ ರಜೆಗೆ ಹೆಚ್ಚುವರಿಯಾಗಿ ನೀಡಿದ 20 ದಿನಗಳ ರಜೆಯನ್ನು ಸರಿಹೊಂದಿಸುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕೇಂದ್ರ ಕಚೇರಿ ಯಿಂದ ಯಾವುದೇ ಸೂಚನೆ ಈವರೆಗೂ ಬಂದಿಲ್ಲ. ಇಲಾಖೆಯ ಸೂಚನೆ ಬಂದ ಅನಂತರದಲ್ಲಿ ಕ್ರಮ ತೆಗೆದುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಈಗಿಂದಲೇ ಕೆಲವು ಯೋಜನೆಯನ್ನು ಶೈಕ್ಷಣಿಕ ಪಠ್ಯಕ್ರಮ ಪೂರ್ಣ ಗೊಳಿಸಲು ಉಭಯ ಜಿಲ್ಲೆಯಲ್ಲಿ ತೆಗೆದುಕೊಳ್ಳ ಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ನವೆಂಬರ್ ಅನಂತರದಲ್ಲಿ ಅಥವಾ ನವೆಂಬರ್ ತಿಂಗಳಲ್ಲಿಯೇ ರವಿವಾರ ಬೆಳಗ್ಗೆ ಮಾತ್ರ ವಿಶೇಷ ತರಗತಿ ನಡೆಸುವ ನಿಟ್ಟಿನಲ್ಲಿ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದು ಕೊಂಡಿಲ್ಲ. SSLC ವಿದ್ಯಾರ್ಥಿಗಳು ಸಹಿತವಾಗಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ರವಿವಾರ ವಿಶೇಷ ತರಗತಿ ನಡೆಸಬೇಕೇ ಅಥವಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಒಟ್ಟಾಗಿ ನಡೆಸಬೇಕೇ
ಎಂಬ ಬಗ್ಗೆ ಇಲಾಖೆ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ದ.ಕ. ಜಿಲ್ಲೆಯಲ್ಲಿ ರವಿವಾರ ವಿಶೇಷ ತರಗತಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ರವಿವಾರ ಹೊರತುಪಡಿಸಿ ಸರಕಾರಿ ರಜಾ ದಿನಗಳಲ್ಲಿ ವಿಶೇಷ ತರಗತಿ ನಡೆಸಲು ತೀರ್ಮಾನಿಸಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವ, ಕನಕ ಜಯಂತಿ ಇತ್ಯಾದಿ ದಿನಗಳಲ್ಲಿ ಹಾಗೂ ಎಲ್ಲ ಶನಿವಾರ ಪೂರ್ಣದಿನ ತರಗತಿ ನಡೆಸುವ ಸಾಧ್ಯತೆಯಿದೆ.
ರಾಜ್ಯ ಪಠ್ಯಕ್ರಮದ ಸರಕಾರಿ ಶಾಲೆಗೆಳಿಗೆ ಮಾತ್ರ ಈ ಸಮಸ್ಯೆ ಎದುರಾಗಿದೆ. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಮಳೆಯ ರಜೆಯ ತರಗತಿಗಳನ್ನು ಶನಿವಾರ ಮಧ್ಯಾಹ್ನದ ವಿಶೇಷ ತರಗತಿಯ ಮೂಲಕ ಸರಿದೂಗಿಸಿಕೊಂಡಿವೆ ಮತ್ತು ಮಧ್ಯಂತರ ರಜೆಯಲ್ಲೂ ತರಗತಿ ನಡೆಸಿವೆ. ಸರಕಾರಿ ಶಾಲೆ ಮಕ್ಕಳಿಗೆ ಮಧ್ಯಂತರ ರಜೆ ಹೆಚ್ಚುವರಿಯಾಗಿ ನೀಡಿರುವುದರಿಂದ ಸಮಸ್ಯೆ ಹೆಚ್ಚಾಗಿದೆ.
ಶಾಲೆಗಳ ವಾರ್ಷಿಕ ಶೈಕ್ಷಣಿಕ ಪ್ರವಾಸ ನವೆಂಬರ್ ತಿಂಗಳಲ್ಲಿ ಆರಂಭವಾಗಿ ಡಿಸೆಂಬರ್ ಅಂತ್ಯದೊಳಗೆ ಮುಗಿಯುತ್ತದೆ. ಜನವರಿಯಿಂದ ಪರೀಕ್ಷೆಯ ಪೂರ್ವ ಸಿದ್ಧತೆ ಇತ್ಯಾದಿ ಚುರುಕುಗೊಳ್ಳಲಿದೆ. ಈ ಬಾರಿ ರಜೆಯೇ ಹೆಚ್ಚಿದ್ದರಿಂದ ಸರಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೂ ಅಡ್ಡಿಯಾಗುವ ಸಾಧ್ಯತೆಯಿದೆ. ಶಾಲಾ ಪ್ರವಾಸಕ್ಕೆ ಇನ್ನಷ್ಟೇ ಬಿಇಒ, ಡಿಡಿಪಿಐ ಕಚೇರಿಗೆ ಶಾಲೆಗಳಿಂದ ಅರ್ಜಿ ಸಲ್ಲಿಕೆಯಾಗಬೇಕಿದೆ.
ಮಳೆಯ ರಜೆ ಸರಿಹೊಂದಿಸಲು ನವೆಂಬರ್ ಅಂತ್ಯ ದವರೆಗೂ ಶನಿವಾರ ಮಧ್ಯಾಹ್ನದ ವಿಶೇಷ ತರಗತಿ ನಡೆಯುತ್ತಿದೆ. ಪ್ರೌಢಶಾಲಾ ಮಕ್ಕಳಿಗೆ ರವಿವಾರ ಬೆಳಗ್ಗೆ ವಿಶೇಷ ತರಗತಿಗೂ ಚರ್ಚೆ ನಡೆಸುತ್ತಿದ್ದೇವೆ. ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಮಧ್ಯಂತರ ರಜೆ ಸರಿಹೊಂದಿಸುವ ಬಗ್ಗೆ ಇಲಾಖೆಯಿಂದ ಇನ್ನೂ ಯಾವುದೇ ಸೂಚನೆ ಬಂದಿಲ್ಲ.ರವಿವಾರ ವಿಶೇಷ ತರಗತಿ ನಡೆಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.
ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಾರದಲ್ಲಿ ಒಂದು ದಿನ ಬಿಡುವು ಅಗತ್ಯ. ಹೀಗಾಗಿ ರವಿವಾರ ಹೊರತು ಪಡಿಸಿ ಸರಕಾರಿ ರಜೆದಿನ/ ಶನಿವಾರ ಮಧ್ಯಾಹ್ನ ಪೂರ್ಣ ತರಗತಿ ನಡೆಸಲು ಸೂಚನೆ ನೀಡಲಾಗಿದೆ ಎಂಬ ಮಾತು ಗಳನ್ನು ಇಲಾಖೆಯ ಅಧಿಕಾರಿಗಳು ಹೇಳ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..
 
			

 
		 
			



















