ಹುಬ್ಬಳ್ಳಿ –
ಛೋಟಾ ಮುಂಬೈ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತೆರೆ ಮರೆಯಲ್ಲಿ ನಡೆಯುತ್ತಿದ್ದ ಬಾಡಿ ಮಸಾಜ್ ದಂಧೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ ಹೌದು ಇದಕ್ಕೆ ತಾಜಾ ಉದಾಹರಣೆ ನಗರದ ಆಕ್ಸೀಜನ್ ಮಸಾಜ್ ಕೇಂದ್ರದ ವಿಡಿಯೋಗಳು ನಗರದ ಗೋಕುಲ್ ರಸ್ತೆಯಲ್ಲಿರುವ ಮಂಜುನಾಥ ಕ್ರಾಸ್ ನಲ್ಲಿರುವ ಈ ಒಂದು ಆಕ್ಸೀಜನ್ ಮಸಾಜ್ ಕೇಂದ್ರದಲ್ಲಿ ಏನು ನಡೆಯುತ್ತಿದೆ ಎಂಬೊದು ಗೊತ್ತಿಲ್ಲ ಆದರೆ ಇಲ್ಲಿ ನಡೆಯುತ್ತಿರುವ ವಿಚಾರಗಳನ್ನು ಆಕ್ಸೀಜನ್ ಸೆಂಟರ್ ಸಾಮಾಜಿಕ ಜಾಲ ತಾಣಗಳಲ್ಲಿನ ತನ್ನ ಖಾತೆಯಲ್ಲಿ ಹಾಕಿಕೊಂಡಿದೆ.
ವಿಡಿಯೋದ ಮೂಲಕ ಕೇಂದ್ರದಲ್ಲಿನ ಸೌಲಭ್ಯಗಳ ಕುರಿತಂತೆ ಮಾಹಿತಿಯನ್ನು ಹಾಕಿಕೊಂಡಿದ್ದು ಇನ್ನೂ ಈ ಒಂದು ವಿಡಿಯೋ ವನ್ನು ನೋಡಿದ ಸಾರ್ವಜನಿಕರು ಅಕ್ರೋಶಗೊಂಡಿದ್ದಾರೆ ಸದ್ದಿಲ್ಲದೇ ತೆರೆ ಮರೆಯಲ್ಲಿ ನಡೆಯುತ್ತಿದ್ದು ಈ ಒಂದು ದಂಧೆಯನ್ನು ಸ್ಪರ್ಧೆಗಾಗಿ ಕೇಂದ್ರವು ವಿಡಿಯೋ ಮೂಲಕ ಹಾಕಿಕೊಂಡಿದ್ದು ಸಾರ್ವಜನಿಕರ ಕಣ್ಣು ಕೆಂಪಾಗಿಸಿದ್ದು ನಗರದಲ್ಲಿ ಏನು ನಡೆಯುತ್ತಿದೆ ಎಂಬೊದು ಗೊತ್ತಾಗುತ್ತಿಲ್ಲ ಎಂಬ ಮಾತು ಗಳು ಕೇಳಿ ಬರುತ್ತಿದ್ದು
ಅಶ್ಲೀಲವಾದ ಈ ಒಂದು ವಿಡಿಯೋ ದಿಂದ ಸಾರ್ವ ಜನಿಕರು ಬೇಸತ್ತಿದ್ದು ಮಸಾಜ್ ಹೆಸರಿನಲ್ಲಿ ಇಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿದ್ದು ಕ್ರಮವನ್ನು ಕೈಗೊಳ್ಳಬೇಕಾದ ಪೊಲೀಸರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮೌನವಾಗಿದ್ದು ಇನ್ನೂ ನಗರದಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಖಡಕ್ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಆಕ್ಸೀಜನ್ ಈ ಒಂದು ವಿಡಿಯೋ ನೋಡಿ ಕ್ರಮವನ್ನು ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……






















