ನವಲಗುಂದ –
ಕ್ಷೇತ್ರದಲ್ಲಿ ಖರೀದಿ ಕೇಂದ್ರಗಳಿಗೆ ಚಾಲನೆ ನೀಡಿದ ಶಾಸಕ NH ಕೋನರೆಡ್ಡಿ – ಬೆಂಬಲ ಬೆಲೆಯಲ್ಲಿ ಖರೀದಿಯಾಗಲಿವೆ ಹೆಸರು ಇತರೆ ಬೆಳೆಗಳು….. ಜನಸೇವನಕನ ಸೇವಾ ಕಾರ್ಯಕ್ಕೆ ರೈತರ ಮೆಚ್ಚುಗೆ…..
ರೈತರ ಬಹು ಬೇಡಿಕೆಯಂತೆ ಕ್ಷೇತ್ರದಲ್ಲಿ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಹೆಸರು ಮತ್ತು ಇತರೆ ಬೆಳೆಗಳ ಖರೀದಿ ಕೇಂದ್ರಗಳನ್ನು ಆರಂಭ ಮಾಡಿ ದ್ದಾರೆ.ಹೌದು ನವಲಗುಂದ ವಿಧಾನಸಭಾ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಹಾಗೂ ಇತರೆ ಬೆಳೆಗಳ ಖರೀದಿ ಕೇಂದ್ರವನ್ನು ಆರಂಭ ಮಾಡ ಲಾಗಿದ್ದು ಶಾಸಕರು ಈ ಒಂದು ಕೇಂದ್ರವನ್ನು ಉದ್ಘಾಟಿಸಿದರು.
ಹೆಸರು ಕಾಳುಗಳನ್ನು ಖರೀದಿ ಮಾಡುವ ಮೂಲಕ ಚಾಲನೆ ನೀಡಿದರು.ಈ ಒಂದು ಸಂದರ್ಭದಲ್ಲಿ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷರಾದ ಜಿ ಎಸ್ ಮಾದಾಪೂರ, ಪಿ.ಕೆ ಪಿ.ಎಸ್ ಅಧ್ಯಕ್ಷರಾದ ಪಾಂಡಪ್ಪ ಹೊಸಮನಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರವೀಣ್ ಹಲಗತ್ತಿ, ವೆಂಕಣ್ಣ ಕೊಣ್ಣೂರ್, ಜಿ ಎಲ್ ಹೊಂಬಳ, ಶಿವಪ್ಪ ಹೂಗಾರ, ಅಶೋಕ್ ನೀರಲಗಿ, ಚಾಂದುಸಾಬ್ ನದಾಫ್, ಅರುಣಕುಮಾರ ಮಜ್ಜಗಿ, ಗಿರೀಶ್ ಹೊನ್ನಳ್ಳಿ, ರವಿ ಹಲಗತ್ತಿ, ಸೊಸೈಟಿಯ ಕಾರ್ಯದರ್ಶಿಯಾದ ವಿಜಯಾನಂದ ಹೊಂಬಳ, ಶಿವಪ್ಪ ಹೂಗಾರ ಚನ್ನಪ್ಪ ಮರಿಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ……






















